ATM card insurance | ಏಟಿಎಂ ಕಾರ್ಡ್ ಮೂಲಕವೂ ಸಿಗುತ್ತೆ ವಿಮಾ ಸೌಲಭ್ಯ!

ATM card insurance: ಇಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳಿಲ್ಲದೆ ಜೀವನ ಸಾಗುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೂ ಬ್ಯಾಂಕ್ ಅತ್ಯಗತ್ಯ. ಅದಲ್ಲದೆ ಈಗಿನ ಕಾಲದಲ್ಲಿ ಎಟಿಎಂ ಬಳಸದವರು ಯಾರೂ ಇಲ್ಲ. ಇದರ ಸಹಾಯದಿಂದ ಹಣವನ್ನು ಹಿಂಪಡೆಯುವುದು ತುಂಬಾ ಸುಲಭ. ಕೆಲವೇ ನಿಮಿಷಗಳಲ್ಲಿ ಜನರು ಹಣವನ್ನು ಹಿಂಪಡೆಯಬಹುದು. ಹೀಗಾಗಿ, ಎಲ್ಲರೂ ಎಟಿಎಂ ಮೊರೆ ಹೋಗುತ್ತಾರೆ.

 

ಈ ಎಟಿಎಂ ಬಳಕೆಯಿಂದ ತುಂಬಾ ಅನುಕೂಲವೂ ಇದೆ. ಒಟ್ಟಿನಲ್ಲಿ ಎಲ್ಲಾ ವ್ಯವಹಾರಗಳನ್ನು ಏಟಿಎಂ ಸುಲಭಗೊಳಿಸಿದೆ. ಆದ್ರೆ ಹೆಚ್ಚಿನವರಿಗೆ ಏಟಿಎಂ ಕಾರ್ಡ್ ಮೂಲಕ ವಿಮೆ (ATM card insurance) ಕವರ್‌ ಆಗುತ್ತದೆ ಎಂಬುದು ತಿಳಿದಿಲ್ಲ. ಹೌದು. ಸರ್ಕಾರಿ ಅಥವಾ ಖಾಸಗಿ ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕ್‌ಗಳು ಖಾತೆ ಹೊಂದಿರುವ ತನ್ನ ಗ್ರಾಹಕರು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಅಥವಾ ಸಾವನ್ನಪ್ಪಿದರೆ ಅಂಥವರಿಗೆ ಈ ವಿಮಾ ಆಫರ್‌ ಅನ್ನು ಒದಗಿಸುತ್ತದೆ.

ಗ್ರಾಹಕರಿಂದ ಗ್ರಾಹಕರಿಗೆ ಖಾತೆಯಲ್ಲಿನ ವ್ಯವಹಾರ ಆಧರಿಸಿ 50000ರೂ. ನಿಂದ 10ಲಕ್ಷ ರೂ.ವರೆಗಿನ ವಿಮಾ ಕವರೇಜ್‌ ನೀಡುತ್ತದೆ. ಒಂದು ವೇಳೆ ಬ್ಯಾಂಕ್‌ ಖಾತೆಯು ಚಾಲ್ತಿಯಲ್ಲಿ ಇಲ್ಲದಿದ್ದರೆ ಈ ವಿಮೆಯನ್ನು ಬ್ಯಾಂಕ್‌ಗಳು ಹಿಂದಕ್ಕೆ ಪಡೆದುಕೊಳ್ಳಬಹುದು. ಸೆಬಿಯಲ್ಲಿ ನೊಂದಾಯಿತ ತೆರಿಗೆ ಹಾಗೂ ಹೂಡಿಕೆ ತಜ್ಞರು ಹೇಳುವ ಪ್ರಕಾರ, ಅಪಘಾತ ಮರಣ ವಿಮೆಯು ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ಗಳು, ವ್ಯಕ್ತಿಗಳು ಹೊಂದಿರುವ ವಿವಿಧ ರೀತಿಯ ಕಾರ್ಡ್‌ಗೆ ಅನುಗುಣವಾಗಿ 30000 ರೂ.ನಿಂದ 10 ಲಕ್ಷ ರೂ. ವರೆಗೆ ಉಚಿತ ಅಪಘಾತ ಮರಣ ವಿಮಾ ಸುರಕ್ಷತೆಯನ್ನು ನೀಡುತ್ತದೆ.

ವಿಮೆಯನ್ನು ಸಂಬಂಧಪಟ್ಟ ವ್ಯಕ್ತಿಯು ಅಪಘಾತಕ್ಕೆ ಒಳಗಾಗಿದ್ದರೆ ಕೂಡಲೇ ಕ್ಲೈಮ್‌ ಅನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಬೇಕು. ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದರೆ ಎಲ್ಲ ರೀತಿಯ ವೈದ್ಯಕೀಯ ದಾಖಲೆಗಳನ್ನು ಕೈಯಲ್ಲಿ ಇಟ್ಟುಕೊಂಡಿರಬೇಕು. ಆ ವ್ಯಕ್ತಿಯು ಸಾವನ್ನಪ್ಪಿದ್ದರೆ, ಸಂಬಂಧಿಕರು ಫೊಸ್ಟ್‌ಮಾರ್ಟಂ ರಿಪೋರ್ಟ್‌, ಪೊಲೀಸ್‌ ರಿಪೋರ್ಟ್‌, ವೈದ್ಯಕೀಯ ಪ್ರಮಾಣಪತ್ರ ಹಾಗೂ ಡ್ರೈವಿಂಗ್‌ ಲೈಸೆನ್ಸ್‌ನ್ನು ಪಡೆದುಕೊಂಡಿರಬೇಕು. ಅಲ್ಲದೆ, ಆ ಕಾರ್ಡ್‌ದಾರರು ಕಳೆದ 60 ದಿನಗಳಲ್ಲಿ ಮಾಡಿರುವ ಪ್ರಮುಖ ಎಟಿಎಂ ವ್ಯವಹಾರಗಳ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಹೀಗಾಗಿ ಏಟಿಎಂ ಕಾರ್ಡ್ ಮೂಲಕ ವಿಮೆ ಪಡೆದುಕೊಳ್ಳುವುದು ಉತ್ತಮ.

Leave A Reply

Your email address will not be published.