100 year Old post Letter: ಬರೋಬ್ಬರಿ 100 ವರ್ಷಗಳ ಬಳಿಕ ತನ್ನ ವಿಳಾಸವನ್ನು ತಲುಪಿದ ಪತ್ರ! ಅಲ್ಲಿವರೆಗೂ ಈ ಪತ್ರ ಎಲ್ಲಿತ್ತು ಗೊತ್ತಾ?

100 year Old post Letter: ಇಂದಿನ ಆಧುನಿಕ ಯುಗದಲ್ಲಿಯೂ ಅನೇಕರು ಪತ್ರದ ಮೂಲಕ ವ್ಯವಹರಿಸುತ್ತಾರೆ. ಅಥವಾ ಏನಾದ್ರೂ ಡಾಕ್ಯುಮೆಂಟ್ಸ್(Documents) ಇದ್ದರೆ ಪೋಸ್ಟ್(Post) ಮೂಲಕ ಕಳಿಸುತ್ತಾರೆ. ಅಂಚೆ ಕಚೇರಿ( Poste Office) ಯಲ್ಲಿ ನಾವು ಪೋಸ್ಟ್ ಮಾಡುವಾಗ, ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಮಾಡಿದರೆ ಒಂದು ಅಥವಾ ಎರಡು ದಿನದಲ್ಲಿ ಹೋಗಿ ತಲುಪಬಹುದು. ನಾರ್ಮಲ್ ಪೋಸ್ಟ್ ಮಾಡಿದರೆ ಹೆಚ್ಚೆಂದರೆ ಒಂದು ವಾರದಲ್ಲಿ ಹೋಗುತ್ತದೆ. ಆದರೆ ಇಲ್ಲೊಂದು ಪೋಸ್ಟಿನ ಕಥೆ ಕೇಳಿದರೆ ನೀವು ದಂಗಾಗಿ ಹೋಗ್ತೀರಾ! ಯಾಕಂದ್ರೆ ಈ ಪೋಸ್ಟ್ ಬರೋಬ್ಬರಿ ನೂರು ವರ್ಷಗಳ ನಂತರ ತನ್ನ ವಿಳಾಸವನ್ನು ತಲುಪಿದೆ!

 

ಹೌದು, ಸುಮಾರು ನೂರು ವರ್ಷಗಳ ಹಿಂದೆ ಬರೆದ ಪತ್ರವೊಂದು( 100 year Old post Letter) ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿದೆ. ಯಾಕಂದ್ರೆ 1916ರಲ್ಲಿ ಬರೆದ ಈ ಪತ್ರ, 2021ರಲ್ಲಿ ತಾನು ತಲುಪಬೇಕಾಗಿದ್ದ ವಿಳಾಸ(Address)ಕ್ಕೆ ಬಂದು ತಲುಪಿದೆ. ಅಂದರೆ ಬರೋಬ್ಬರಿ ನೂರು ವರ್ಷಗಳ ನಂತರ! ಹಾಗಿದ್ರೆ ಈ ಪತ್ರ ಬರೆದವರಾರು? ಯಾರಿಗೆ ಬರೆದಿದ್ದರು? ಈಗ ಅದನ್ನು ತೆಗೆದುಕೊಂಡವರಾರು ಗೊತ್ತಾ?

ಅದು, 1916ರ ಸಮಯ. ಅಂದರೆ ಮೊದಲನೇ ವಿಶ್ವಯುದ್ಧದ(1st world war)ಸಂದರ್ಭ. ಕಿಂಗ್​ ಜಾರ್ಜ್​-5 (King Jarg-5) ಆಡಳಿತವಿದ್ದ ಕಾಲವದು. ಆ ಸಮಯದಲ್ಲಿ ಇಂಗ್ಲೆಂಡಿನ(England)ಬಾತ್​ನಿಂದ ಈ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಪತ್ರದ ಮೇಲೆ ‘ಕಿಂಗ್ ಜಾರ್ಜ್-5’ ​ ಸ್ಟ್ಯಾಂಪ್​(Stamp) ಕೂಡ ಇದೆ. ಅಂದು ಪೋಸ್ಟ್ ಮಾಡಿದ ಈ ಪತ್ರ ಬರೋಬ್ಬರಿ ನೂರು ವರ್ಷಗಳ ಬಳಿಕ ಅಂದರೆ 2021 ರಲ್ಲಿ ದಕ್ಷಿಣ ಲಂಡನ್​ನಲ್ಲಿರುವ ಗ್ಲೆನ್​(Glen) ಮತ್ತು ಆತನ ಗೆಳತಿ ವಾಸವಾಗಿದ್ದ ಫ್ಲ್ಯಾಟ್​ಗೆ ಬಂದು ತಲುಪಿದೆ.

ಶತಮಾನದಷ್ಟು ಹಳೆಯದಾದ ಈ ಪತ್ರವನ್ನು ಕಂಡ ಗ್ಲೆನ್ ಶಾಕ್ ಆಗಿದ್ದಾರೆ. ಕೂಡಲೇ ಈ ಪತ್ರವನ್ನು ಸ್ಥಳೀಯ ಐತಿಹಾಸಿಕ ಸಂಶೋಧನಾ ಕೇಂದ್ರಕ್ಕೆ ಅವರು ತಲುಪಿಸಿದ್ದಾರೆ. ನಂತರ ಅಲ್ಲಿ ಈ ಪತ್ರದ ಕುರಿತು ಸಂಶೋಧನೆ ನಡೆದಿದೆ. ಬಳಿಕ ಇದರ ಕುರಿತು ಮಾಹಿತಿ ತಿಳಿದು ಬಂದಿದ್ದು, ಈ ಪತ್ರವನ್ನು ಯಾರು, ಯಾರಿಗೆ ಬರೆದಿದ್ದರು, ಏನೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸಿದ್ದರು ಎಂಬುದು ಗೊತ್ತಾಗಿದೆ

ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಕಟೀ ಮಾರ್ಶ್​(Katee Marsh) ಎಂಬಾಕಿ ಇಂಗ್ಲೆಂಡಿನ ಬಾತ್​​ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದ ತನ್ನ ಸ್ನೇಹಿತೆಯಾದ ಕ್ರಿಸ್ಟಾಬೆಲ್​ ಮೆನ್ನೆಲ್(Cristabel Mennal) ಎನ್ನುವವರಿಗೆ ಬರೆದ ಪತ್ರ ಇದಾಗಿದೆ. ಇವರಿಬ್ಬರೂ ಸ್ನೇಹಿತೆಯರಾಗಿದ್ದರು ಎಂಬುದು ಪತ್ರದ ಮೂಲಕ ತಿಳಿದು ಬಂದಿದೆ. ತಮ್ಮ ತಮ್ಮ ರಜಾದಿನಗಳ, ಯುದ್ಧ ಸಮಯದ ಮಾಹಿತಿಯನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಹೀಗೆ ಎಲ್ಲಾ ಅನುಭವಗಳನ್ನು ಹಂಚಿಕೊಂಡು ಕಟೀ ಮಾರ್ಶ್ ಬರೆದ ಈ ಪತ್ರ ನೂರು ವರ್ಷಗಳ ನಂತರ ವಿಳಾಸವನ್ನು ಹುಡುಕಿಕೊಂಡು ಹೋಗಿರುವುದು ಆಶ್ಚರ್ಯವನ್ನುಂಟುಮಾಡಿದೆ.

ಅಲ್ಲದೆ ಈ ಪತ್ರವು ಇಷ್ಟು ವರ್ಷಗಳ ತನಕ ಎಲ್ಲಿತ್ತು? ತನ್ನ ವಿಳಾಸವನ್ನು ತಲುಪಲು ನೂರು ವರ್ಷಗಳನ್ನು ಯಾಕೆ ತೆಗೆದುಕೊಂಡಿತು ಎಂಬುದರ ಬಗೆ ಮಾಹಿತಿ ಲಭ್ಯವಿಲ್ಲ. ಆದರೂ ನೂರು ವರ್ಷಗಳಾದರೂ ಅದು ಜೋಪಾನವಾಗಿರುವುದು ಮಾತ್ರ ಅಚ್ಚರಿಯೇ ಸರಿ! ಇನ್ನು ತನ್ನ ಗೆಳತಿ ಬರೆದಂತಹ ಪತ್ರಕ್ಕಾಗಿ ಪಾಪ ಕ್ರಿಸ್ಟಾಬೆಲ್​, ಎಷ್ಟು ಸಮಯ ಕಾದು ಚಡಪಡಿಸಿದ್ದಳೋ ಅಲ್ವಾ?

Leave A Reply

Your email address will not be published.