Amith Shah : ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಭಯೋತ್ಪಾದನೆ, ದಂಗೆ, ಹಿಂಸಾಚಾರ ಶೇ.80ರಷ್ಟು ಇಳಿಕೆ: ಅಮಿತ್ ಶಾ

Amith shah: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಡಳಿತ ವೈಖರಿಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಪ್ರಪಂಚದಾದ್ಯಂತ ಅವರ ಜನಪ್ರಿಯತೆ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಅವರು ಎರಡು ಅವಧಿಗೂ ಕೂಡ ಪ್ರಧಾನಿಯಾಗಿ ಆಯ್ಕೆಯಾದಾಗಲೂ ಅವರ ಸರ್ಕಾರದ ಕುರಿತು ಯಾವುದೇ ಆರೋಪಗಳು ಕೇಳಿ ಬಂದಿಲ್ಲ. ಈ ರೀತಿಯಾಗಿ ಯಾವುದೇ ಕಪ್ಪು ಚುಕ್ಕಿಗಳಿಲ್ಲದೆ ಸರ್ಕಾರವನ್ನು ನಡೆಸುವುದು ತುಂಬಾ ದೊಡ್ಡ ಸಾಧನೆಯೇ ಸರಿ. ಅಲ್ಲದೆ ಭ್ರಷ್ಟಾಚಾರ (Corruption), ಭಯೋತ್ಪಾದನಾ (Terrorism) ಚಟುವಟಿಕೆಗಳು ಜೊತೆಗೆ ಎಷ್ಟೋ ಹಿಂಸಾತ್ಮಕ ಕೃತ್ಯಗಳು ಕೂಡ ನಿಯಂತ್ರಣಕ್ಕೆ ಬಂದಿವೆ.

ಇದೀಗ ಮೋದಿಯವರ ಈ ಕುರಿತ ಸಾಧನೆಗಳ ಬಗ್ಗೆ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ(Amith shah) ಅವರು ಹಲವಾರು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಹೌದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ(BJP) ಸರ್ಕಾರದ ಆಡಳಿತದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಎಡಪಂಥೀಯ ಉಗ್ರವಾದ ಸೇರಿದಂತೆ ದೇಶದಲ್ಲಿ ಶೇ.80ರಷ್ಟು ಹಿಂಸಾಚಾರ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ನಾಗ್ಪುರ್(Nagpur) ನಲ್ಲಿ ಲೋಕಮತ್ ಮೀಡಿಯಾ ಗ್ರೂಪ್ ಶನಿವಾರ ಆಯೋಜಿಸಿದ್ದ ಪತ್ರಿಕೆಯ ಸಂಸ್ಥಾಪಕ-ಸಂಪಾದಕ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ದರ್ದಾರ (Jawaharalal Darda) ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಜಗತ್ತಿನಲ್ಲಿ ಭಾರತ ಅಗ್ರಮಾನ್ಯ ಸ್ಥಾನಮಾನ ಪಡೆಯಬೇಕೆಂಬುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಪ್ರತಿಪಕ್ಷಗಳು ಪ್ರಕ್ಷುಬ್ಧ ರಾಜ್ಯದಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ನಾವು ರಕ್ತ ಚೆಲ್ಲುವುದನ್ನು ಮಾತ್ರವಲ್ಲದೆ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳನ್ನು ಸಹ ನಿಲ್ಲಿಸಿದ್ದೇವೆ’ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ(Jammu and Kashmir) ಕ್ಕೆ ಬಿಜೆಪಿ ಕೊಡುಗೆ ಏನೆಂಬುದನ್ನು ವಿವರಿಸಿದ ಅವರು ‘ಕಳೆದ ವರ್ಷ 1.8 ಕೋಟಿಗೂ ಹೆಚ್ಚು ಪ್ರವಾಸಿಗರು(Tourist) ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಕಳೆದ 70 ವರ್ಷಗಳಲ್ಲಿ ಕಾಶ್ಮೀರಕ್ಕೆ 12 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಕೇವಲ 3 ವರ್ಷಗಳಲ್ಲಿ 12 ಸಾವಿರ ಕೋಟಿ ರೂ. ಹಣವನ್ನು ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ಕಣಿವೆ ರಾಜ್ಯದ ಅಭಿವೃದ್ಧಿ ಕೇಂದ್ರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ’ ಎಂದು ಹೇಳಿದರು.

Leave A Reply

Your email address will not be published.