Flipkart : ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಗೆ ಸಿಗಲಿದೆ ಭರ್ಜರಿ ರಿಯಾಯತಿ!

Share the Article

ಪ್ರತಿಯೊಬ್ಬರಿಗೂ ಪ್ರತಿಷ್ಟಿತ Appleನ ಐಫೋನ್ ಅಂದರೆ ಇಷ್ಟ ಮತ್ತು ಕೊಂಡುಕೊಳ್ಳಬೇಕೆಂಬ ಆಸೆ ಇದೆ. ಆದರೆ ಕೊಂಡುಕೊಳ್ಳಲು ದುಬಾರಿ ಆಗಿರುವ ಕಾರಣ ಕನಸು ಹಾಗೆಯೇ ಉಳಿದಿರಬಹುದು. ಸದ್ಯ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹೌದು ಫ್ಲಿಪ್‌ಕಾರ್ಟ್ ( Flipkart) ಐಪೋನ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ದರೆ, ನಿಮಗಾಗಿ ಭರ್ಜರಿ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ.

ಸದ್ಯ ಐಫೋನ್ 11 ಫೋನ್‌ ಅನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದು.ಹೌದು, ಐಫೋನ್ 11 ಅನ್ನು ಗ್ರಾಹಕರು ಕೈಗೆಟಕುವ ದರದಲ್ಲಿ ತಮ್ಮದಾಗಿಸಿಕೊಳ್ಳಬಹುದು. ಈ ಫೋನ್‌ನ ಸಾಮಾನ್ಯ ದರ 48,900 ರೂ. ಗಳಾಗಿದ್ದು, ಬ್ಯಾಂಕ್‌ ರಿಯಾಯಿತಿ ಹಾಗೂ ಇನ್ನಿತರೆ ತ್ವರಿತ ರಿಯಾಯಿತಿಗಳ ಮೂಲಕ ಹಾಗೂ ವಿನಿಮಯ ಆಫರ್‌ ಮೂಲಕ ಈ ಫೋನ್‌ ಅನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದು.

ಪ್ರಮುಖ ಇ ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ ಐಫೋನ್‌ 11 ಫೊನ್‌ಗೆ 48,900 ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, 3% ತ್ವರಿತ ಫ್ಲಿಪ್‌ಕಾರ್ಟ್‌ನ ರಿಯಾಯಿತಿಯೊಂದಿಗೆ ಈ 21,000 ರೂ. ಗಳ ಭಾರೀ ರಿಯಾಯಿತಿ ಪಡೆದುಕೊಳ್ಳಲಿದೆ.

ಐಫೋನ್‌ 11 ಫೋನ್ ಮೇಲಿನ ಆಫರ್‌ಗಳು ಈ ಕೆಳಗಿನಂತಿವೆ :
• ಗ್ರಾಹಕರು ಹೆಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಈ ಫೋನ್‌ ಖರೀದಿ ಮಾಡಲು ಮುಂದಾದರೆ 1000 ರೂ. ಗಳ ರಿಯಾಯಿತಿ ಲಭ್ಯವಾಗಲಿದೆ.
• ಹಾಗೆಯೇ ಇಂಡಸ್‌ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ಹಾಗೂ ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೂ ಗ್ರಾಹಕರು 1000 ರೂ. ಗಳ ವರೆಗೆ ಹಣ ಉಳಿಸಬಹುದು.
• ಇದನ್ನು ಹೊರತುಪಡಿಸಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಲು ಬಯಸಿದರೆ 5% ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ.
• ನಿಮ್ಮ ಹಳೆಯ ಫೋನ್ ಅನ್ನು ಮಾರಿ ಈ ಹೊಸ ಫೋನ್ ಕೊಂಡುಕೊಳ್ಳಬಹುದು. ಅದರಲ್ಲೂ ಹಳೆಯ ಫೋನ್‌ ಸುಸ್ಥಿತಿಯಲ್ಲಿದ್ದರೆ 20,000 ರೂ. ವರೆಗೆ ಉಳಿಸಬಹುದು, ಇಲ್ಲವಾದರೆ ಹಳೆಯ ಫೋನ್‌ನ ಕಾರ್ಯಕ್ಷಮತೆಗೆ ತಕ್ಕಂತೆ ಬೆಲೆ ನಿಗದಿಯಾಗುತ್ತದೆ. ಇಷ್ಟೆಲ್ಲಾ ಕೊಡುಗೆ ಮೂಲಕ ಈ ಫೋನ್‌ ಅನ್ನು ಕೊನೆಯದಾಗಿ 25,999 ರೂ. ಗಳ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು.

ಐಫೋನ್ 11 ಪ್ರಮುಖ ಫೀಚರ್ಸ್‌:
• ಐಫೋನ್ 11 ಸ್ಮಾರ್ಟ್‌ಫೋನ್‌ 6.1 ಇಂಚಿನ ಲಿಕ್ವಿಡ್ ರೆಟಿನಾ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 828 x 1792 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ.
• ಹಾಗೆಯೇ ಆಪಲ್‌ನ A13 ಬಯೋನಿಕ್ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್‌ iOS 13 ನಲ್ಲಿ ರನ್‌ ಆಗುತ್ತದೆ. ಜೊತೆಗೆ iOS 16.3 ಗೆ ಅಪ್‌ಗ್ರೇಡ್ ಸಹ ಮಾಡಬಹುದಾಗಿದೆ.
• ಇನ್ನು 4GB RAM+64GB , 4GB RAM +128GB ಹಾಗೂ 4GB RAM +256GB ನ ಮೂರು ವೇರಿಯಂಟ್‌ನಲ್ಲಿ ಲಭ್ಯವಿದೆ.
• ಇದರೊಂದಿಗೆ ಈ ಫೋನ್ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ನೊಂದಿಗೆ ಡ್ಯುಯಲ್‌ ಡಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 12 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಇದೆ.
• ಇನ್ನುಳಿದಂತೆ 3110mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ಸದ್ಯ ಐಫೋನ್‌ 11 ಈ ಫೋನ್‌ ಅನ್ನು ಈಗ ಕೈಗೆಟಕುವ ದರದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತ್ತು ಹೆಚ್ಚಿನ ರಿಯಾಯಿತಿ ನೀಡಲಾಗಿದೆ.

Leave A Reply