Petroleum Products: ರಾಜ್ಯಗಳು ಅನುಮತಿ ಕೊಟ್ರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುತ್ತೇವೆ: ನಿರ್ಮಲಾ ಸೀತಾರಾಮನ್

ದೇಶದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ನಾಗಲೋಟದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಈ ಉತ್ಪನ್ನಗಳ ಬೆಲೆಯು ಜನರ ಕು ಸುಡುತತಿರುವುದಲ್ಲದೆ, ಆತಂಕಕ್ಕೆ ತಳ್ಳುತ್ತಿದೆ. ಅಲ್ಲದೆ ಈ ಪೆಟ್ರೋಲಿಯಂ ಉತ್ಪನ್ನಗಳನ್ನು GST ವ್ಯಾಪ್ತಿಗೆ ತರಬೇಕು ಎಂಬ ಕೂಗು ಆಗಾಗ ಕೇಳಿ ಬರುತ್ತಿತ್ತು. ಸದ್ಯ ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಜನರಿಗೆ ಶುಭಸುದ್ಧಿಯನ್ನು ನೀಡಿದ್ದಾರೆ.

 

ಹೌದು, ಈ ಕುರಿತು ಮಾತನಾಡಿದ ಅವರು ‘ಜಿಎಸ್ಟಿ ಕೌನ್ಸಿಲ್ ಸಭೆ ಫೆಬ್ರವರಿ 18 ರಂದು ನಡೆಯಲಿದೆ. ರಾಜ್ಯಗಳು ಒಪ್ಪಿದ ನಂತರ, ನಾವು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಯಲ್ಲಿ ಸೇರಿಸುತ್ತೇವೆ’ ಎಂದು ಹೇಳಿದರು. ಕೈಗಾರಿಕಾ ಚೇಂಬರ್ ಪಿಎಚ್ಡಿಸಿಸಿಐ ಸದಸ್ಯರೊಂದಿಗೆ ಬಜೆಟ್ ನಂತರದ ಸಂವಾದ ಅಧಿವೇಶನದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ವೆಚ್ಚವನ್ನು ಉನ್ನತ ಮಟ್ಟದಲ್ಲಿ ಇರಿಸಲಾಗುವುದು. ಇದರಿಂದ ನಾವು ಬೆಳವಣಿಗೆಯ ಆವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಈ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕವನ್ನು ರಾಜ್ಯಗಳೇ ಸಂಗ್ರಹಿಸುತ್ತಿವೆ. ಇದು ರಾಜ್ಯ ಸರ್ಕಾರಗಳ ಬಹುದೊಡ್ಡ ಆದಾಯದ ಮೂಲವಾಗಿದೆ. ಇದನ್ನು GST ವ್ಯಾಪ್ತಿಗೆ ತಂದರೆ ರಾಜ್ಯಗಳ ಬೊಕ್ಕಸಕ್ಕೆ ಪೆಟ್ಟು ಬೀಳೋದು ಗ್ಯಾರಂಟಿ. ಹಾಗಾಗಿ ರಾಜ್ಯಗಳು ಒಪ್ಪಿದರೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಸೇರಿಸಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.

ಅಲ್ಲದೆ ಬಜೆಟ್ ಕುರಿತು ಮಾತನಾಡಿದ ಅವರು 2023-24ರ ಬಜೆಟ್ನಲ್ಲಿ ಸರ್ಕಾರವು ಬಂಡವಾಳ ವೆಚ್ಚವನ್ನು ಶೇಕಡಾ 33 ರಷ್ಟು ಹೆಚ್ಚಿಸಿ 10 ಲಕ್ಷ ಕೋಟಿ ರೂ.ಗೆ ತಲುಪಿದೆ ಕಳೆದ ಮೂರು-ನಾಲ್ಕು ವರ್ಷಗಳಿಂದ ನಿರಂತರವಾಗಿ, ಸಾರ್ವಜನಿಕ ಬಂಡವಾಳ ವೆಚ್ಚಕ್ಕೆ ಒತ್ತು ನೀಡಲಾಗಿದೆ. ನಾವು ಅದನ್ನು ಈ ಬಜೆಟ್ ನಲ್ಲಿ ಉಳಿಸಿಕೊಂಡಿದ್ದೇವೆ. ಬಂಡವಾಳ ವೆಚ್ಚವನ್ನು ಈ ಬಜೆಟ್ನ ನಿಜವಾದ ಗಮನ ಎಂದು ಸ್ಪಷ್ಟವಾಗಿ ಹೇಳಬಹುದು’ ಎಂದು ಹೇಳಿದರು.

Leave A Reply

Your email address will not be published.