Guinness record: ನೀರೊಳಗಿದ್ದು, ನಾಲ್ಕು ನಿಮಿಷ ಚುಂಬಿಸಿ ಗಿನ್ನೆಸ್ ರೆಕಾರ್ಡ್ ಸೃಷ್ಟಿಸಿದ ಜೋಡಿ! ಚುಂಬನದ ವಿಡಿಯೋ ಎಲ್ಲೆಡೆ ವೈರಲ್!!

ಫೆಬ್ರವರಿ 14 ಪ್ರೇಮಿಗಳ ದಿನ. ಮೊನ್ನೆ ತಾನೆ ಅದೆಷ್ಟೋ ಮಂದಿ ತಮ್ಮ ಸಂಗಾತಿಗಳ ಜೊತೆ ಖುಷಿಯಿಂದ ಈ ವಾಲೆಂಟೈನ್ಸ್ ಡೇಯನ್ನು ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ, ಗಿಫ್ಟ್‌ಗಳನ್ನು ನೀಡಿ, ಡೇಟ್‌ಗೆ ಹೋಗಿ ಸಂಗಾತಿಯ ಜೊತೆ ಖುಷಿಯಿಂದ ಸಮಯ ಕಳೆದಿದ್ದಾರೆ. ಹೀಗಿರುವಾಗ ಇಲ್ಲೊಂದೆಡೆ ಪ್ರೇಮಿಗಳ ಜೋಡಿಯೊಂದು, ತಮಗಾಗಿ ಮೀಸಲಾದ ದಿನದಂದು ಗಿನ್ನೆಸ್ ದಾಖಲೆ ನಿರ್ಮಿಸಲು ವಿನೂತನವಾದ ಪ್ರಯತ್ನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಏನಪ್ಪಾ ಅದು ಎಂದು ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

 

ಪ್ರೀತಿಯನ್ನು ಹೇಗೆಲ್ಲಾ ಎಕ್ಸ್ ಪೋಸ್ ಮಾಡಬಹುದು ಹೇಳಿ? ಪ್ರಿಯತಮ, ಪ್ರಿಯತಮೆಯರು ಒಬ್ಬರಿಗೊಬ್ಬರು ಉಡುಗೊರೆ ಕೊಡುವುದರೊಂದಿಗೆ, ಸರ್ಪೈಸ್ ಕೊಡುವ ಮೂಲಕ, ತಮ್ಮ ಮನದಾಳದ ಆಸೆ ಆಕಾಂಕ್ಷೆಗಳನ್ನು ನಿವೇದನೆ ಮಾಡೋ ಮುಕಾಂತರವೆಲ್ಲಾ ಮಾಡುವುದು ಸಾಮಾನ್ಯ. ಚುಂಬನ ಕೂಡ ಇದರ ಒಂದು ಭಾಗವೇ ಎಂದು ಹೇಳಬಹುದು? ಆದ್ರೆ ಇಲ್ಲೊಂದೆಡೆ ದಕ್ಷಿಣ ಆಫ್ರಿಕಾದ ಪ್ರೇಮಿಗಳು ಈ ಚುಂಬನವನ್ನು ವಿನಿಮಯ ಮಾಡೋ ಮೂಲಕವೇ ಗಿನ್ನಿಸ್ ದಾಖಲೆ ಬರೆದಿದ್ದಾರೆ.

ಹೌದು, ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಅವರು ನಾಲ್ಕು ನಿಮಿಷ ಮತ್ತು ಆರು ಸೆಕೆಂಡುಗಳ ಕಾಲ ನೀರಿನೊಳಗೇ ಚುಂಬಿಸಿ, ತಮ್ಮ ಸುದೀರ್ಘ ಚುಂಬನಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಪ್ರೇಮಿಗಳ ದಿನವನ್ನು ಎಲ್ಲಾ ಜೋಡಿಯು (Couple) ಖುಷಿಯಿಂದ ಕಳೆಯಲು ಇಷ್ಟಪಡುತ್ತಾರೆ. ಹೀಗಿರುವಾಗ ದಕ್ಷಿಣ ಆಫ್ರಿಕಾದ ಈ ಜೋಡಿ ನೀರೊಳಗೆ ಸುದೀರ್ಘ ಚುಂಬನ ಮಾಡಿ, ವಿಶ್ವ ದಾಖಲೆಯನ್ನು ಮಾಡುವ ಮೂಲಕ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ.

ಫ್ರೀಡೈವರ್ಸ್ ಬೆತ್ ಮತ್ತು ಮೈಲ್ಸ್ ಮೂರು ವರ್ಷಗಳ ಹಿಂದೆ ಈ ಪ್ಲಾನ್ ಮಾಡಿದ್ದರು ಎಂದು ತಿಳಿದು ಬಂದಿದೆ. ನಂತರ ಈ ದಾಖಲೆಯನ್ನು ಸಾಧಿಸಲು ಕಠಿಣ ಅಭ್ಯಾಸ ಮಾಡಿದರು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹೇಳಿದೆ. ಅಲ್ಲದೆ ಈ ಹಿಂದೆ ಅಂದರೆ ಸುಮಾರು 13 ವರ್ಷಗಳ ಹಿಂದೆ ಇಟಲಿಯಲ್ಲಿ ಮೇಕ್-ಔಟ್ ಸೆಷನ್ 3 ನಿಮಿಷ 24 ಸೆಕೆಂಡುಗಳ ಈ ರೀತಿ ಮುತ್ತು ನೀಡಿ ದಾಖಲೆ ಮಾಡಿದ್ದರು. ಇದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟಿವಿ ಶೋ ಲೋ ಶೋ ಡೀ ರೆಕಾರ್ಡ್‌ನಲ್ಲಿ ರಚಿಸಲಾಗಿತ್ತು. ಆದರೀಗ ಆಫ್ರಿಕಾದ ಈ ದಂಪತಿಗಳು, ತಮ್ಮ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ಧಿಯಾಗುತ್ತಿರುವ ಈ ಮುತ್ತಿನ ರೆಕಾರ್ಡ್ ತುಂಬಾನೇ ಪ್ರಶಂಸೆಗೊಳಪಡುತ್ತಿದೆ. ಈ ರೀತಿ ಮಾಡಿರೋದು ಶ್ಲಾಘನೀಯ ಎಂದಿದ್ದಾರೆ. ಇನ್ನು ಕೆಲವರು ಇದು ತುಂಬಾ ಆರೋಗ್ಯಕರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಇದು ತುಂಬಾ ಕಷ್ಟದ ಕೆಲಸ, ಹೇಗೆ ಸಾಧ್ಯವಾಯಿತು’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದೇನೆ ಇರ್ಲಿ, ನೀರೊಳಗೆ ಸೆಕೆಂಡುಗಳ ಕಾಲ ಇರುವುದೇ ಕಷ್ಟವಾಗಿರುವಾಗ, ಈ ಜೋಡಿ ನೀರೊಳಗೇ ಸುದೀರ್ಘ ಕಿಸ್ ಮಾಡಿರುವುದು ಅಚ್ಚರಿ ಮೂಡಿಸುತ್ತದೆ.

Leave A Reply

Your email address will not be published.