Twitter selects new CEO :ಟ್ವಿಟರ್ ಗೆ ಹೊಸ ಸಿಇಓ ನೇಮಿಸಿದ ಎಲಾನ್ ಮಸ್ಕ್! ಇವನಿಗೇನು ತಲೆ ಕೆಟ್ಟಿದೆಯಾ? ಎಂದ ನೆಟ್ಟಿಗರು!!
ಟ್ವಿಟರ್ ಅನ್ನು ಖರೀದಿಸಿದ ಎಲನ್ ಮಸ್ಕ್, ಅದರ ಮುಖ್ಯಸ್ಥರಾದ ಬಳಿಕ ಒಂದಿಲ್ಲೊಂದು ವಿಶೇಷತೆಯೊಂದಿಗೆ ಸುದ್ಧಿಯಲ್ಲಿರುತ್ತಾರೆ. ಅಲ್ಲದೆ ಅವರು ತೆಗೆದುಕೊಂಡ ನಿರ್ಧಾರಗಳು, ಪೋಸ್ಟ್‌ಗಳ ಭಾರಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಕೂಡ ಗುರಿಯಾಗಿದ್ದರು. ಇದೀಗ ಇಂತಹದೇ ಮತ್ತೊಂದು ವಿಚಾರವಾಗಿ ಎಲೆನ್ ಮಸ್ಕ್ ಸುದ್ಧಿಯಾಗುತ್ತಿದ್ದು, ಜನರೆಲ್ಲರು ಇವನಿಗೇನು ತಲೆ ಕೆಟ್ಟಿದೆಯಾ ಎಂದು ಮಾತನಾಡುವಂತಾಗಿದೆ. ಹಾಗಾದ್ರೆ ಈ ಎಲೆನ್ ಮಾಡಿದ ಕೆಲಸವಾದರು ಏನು ಗೊತ್ತಾ?
ಬಿಲಿಯನ್ ಡಾಲರ್ ಉದ್ಯಮಿ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್, ತಮ್ಮ ಟ್ವಿಟರ್ ಸಿಇಒ ಆಗಿ ಹೊಸಬರನ್ನು ನೇಮಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೇ ಹೊಸ ಸಿಇಒ ನನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈ ಹೊಸ ಸಿಇಓ ನೋಡಿದ ಕೂಡಲೆ ಜನ ಎಲೆನ್ ಮಸ್ಕ್ ಗೆ ಬಾಯಿಗೆ ಬಂದಂತೆ ಜಾಡಿಸುತ್ತಿದ್ದಾರೆ. ಹೊಸ ಸಿಇಒ ಫೋಟೋ ಹಂಚಿಕೊಂಡಿರುವ ಎಲಾನ್ ಮಸ್ಕ್ “The new CEO of Twitter is amazing” ಎಂದು ಹೇಳಿದ್ದಾರೆ. ಆದರೆ ಟ್ವಿಟರ್‌ನ ಹೊಸ ಸಿಇಒ ಯಾವುದೇ ವ್ಯಕ್ತಿ ಅಲ್ಲ ಬದಲಾಗಿ ಒಂದು ‘ನಾಯಿ’!
ಹೌದು, ಎಲಾನ್ ಮಸ್ಕ್ ಹೊಸ ಸಿಇಒ ಆಗಿ ನಾಯಿಯೊಂದನ್ನು ನೇಮಕ ಮಾಡಿದ್ದು, ಅದರ ಫೋಟೋ ಹಂಚಿಕೊಂಡಿದ್ದಾರೆ. ಮಸ್ಕ್ ಫೋಟೋ ತೆಗೆದು ಹಾಕಿರುವ ನಾಯಿ ಬೇರೆ ಯಾರದ್ದೋ ಅಲ್ಲ. ಇದು ಸ್ವತಃ ಎಲಾನ್ ಮಸ್ಕ್ ಅವರ ಮುದ್ದಿನ ಸಾಕು ನಾಯಿ ಶಿಬಾ ಇನು.
ನಾಯಿಯನ್ನು CEO ಎಂದು ಹೇಳಿದ ಬಳಿಕ ಎಲಾನ್ ಮಸ್ಕ್ ತಮ್ಮ ನಾಯಿಯನ್ನು ಹೊಗಳಿದ್ದಾರೆ. ಶಿಬಾ ಇನು ತಳಿಯ ಮಸ್ಕ್ ಅವರ ಫ್ಲೋಕಿ ಎನ್ನುವ ನಾಯಿಯನ್ನು ತಮ್ಮ ಸಿಇಒ ಕುರ್ಚಿ ಮೇಲೆ ಕೂರಿಸಿ, ನಾಯಿಯ ಮುಂದೆ ಹಲವು ಫೈಲ್ ಗಳನ್ನು ಇಟ್ಟು, ಈತ ಹೊಸ ಸಿಇಒ, ಯಾವುದೇ ಇತರ ವ್ಯಕ್ತಿಗಿಂತ ಈತನೇ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ. ಎಲಾನ್ ಮಸ್ಕ್ ನೂತನ ಸಿಇಒ ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಏನಾಗಿದೆ ಇವರಿಗೆ ತಲೆಕೆಟ್ಟಿದೆಯಾ ಎಂದು ಪ್ರಶ್ನಿಸಿದ್ದಾರೆ.
ಟ್ವೀಟರ್ ಕಂಪನಿಯನ್ನು ಖರೀದಿಸುತ್ತಿದ್ದಂತೆಯೇ ಸಿಇಒ ಪರಾಗ್ ಅಗರ್‌ವಾಲ್ ಸೇರಿ ನಾಲ್ವರು ಹಿರಿಯ ಅಧಿಕಾರಿಗಳನ್ನು ಎಲಾನ್ ಮಸ್ಕ್ ವಜಾ ಮಾಡಿದ್ದರು. ಟ್ವೀಟರ್ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿಯಾಗಿದ್ದ ಭಾರತೀಯ ಮೂಲದ ಪರಾಗ್ ಅಗರವಾಲ್, ನೀತಿ ವಿಭಾಗದ ಮುಖ್ಯಸ್ಥೆಯಾಗಿದ್ದ ಭಾರತೀಯ ಮೂಲದ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸಿಲ್ ಸೀನ್ ಎಡ್ಜೆಟ್ ಅವರನ್ನು ಮಸ್ಕ್ ವಜಾ ಮಾಡಿದ್ದರು. ಅಲ್ಲದೆ ಎಲೆನ್, ಕುರ್ಚಿ ಮೇಲೆ ಕುಳಿತಿರುವ ನಾಯಿ ಫೋಟೋ ಹಂಚಿಕೊಂಡು ತಾನು ವಜಾ ಮಾಡಿದ ಈ ಹಿಂದಿನ ಸಿಇಓ ಹಾಗೂ ಇತರ ಉನ್ನತ ಅಧಿಕಾರಿಗಳ ವಿರುದ್ದವೇ ಸಮರ ಸಾರಿದ್ದಾರೆ.