Old pension scheme: ‘ಹಳೆ ಪಿಂಚಣಿ ಯೋಜನೆ’ ಜಾರಿಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ‘ಬಿಗ್ ಶಾಕ್’! ಈ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?
ರಾಜ್ಯದಲ್ಲಿ ಬಹಳ ದಿನಗಳಿಂದ ಸದ್ದುಮಾಡುತ್ತಿದ್ದ ಹಳೆ ಪಿಂಚಣಿ ಯೋಜನೆಯ(OPS) ಕುರಿತು ಸಿಎಂ ಬೊಮ್ಮಾಯಿ ಮೌನ ಮುರಿದಿದ್ದು, ಇದೀಗ ಸರ್ಕಾರಿ ನೌಕರರಿಗೆ ಶಾಕ್ ನೀಡಿದ್ದಾರೆ.
ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಒತ್ತಾಯಿಸಿ ಎನ್.ಪಿ.ಎಸ್. ನೌಕರರು ರಾಜ್ಯದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರು. ಕೆಲ ರಾಜ್ಯಗಳು ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲೂ ಇದೇ ಮಾದರಿ ಅನುಸರಿಸಿ ಎಂದು ಮನವಿ ಮಾಡಿದ್ದರು. ಚುನಾವಣೆ ಹೊಸ್ತಿಲಲ್ಲಾದರೂ ತಮ್ಮ ಬೇಡಿಕೆ ಈಡೇರಬಹದು ಎಂಬ ನಿರೀಕ್ಷೆಯಲ್ಲಿ ಅವರಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ನೀಡಿರುವ ಹೇಳಿಕೆ ಎಲ್ಲಾ ಸರ್ಕಾರಿ ನೌಕರರಿಗೆ ದೊಡ್ಡ ಶಾಕ್ ನೀಡಿದೆ.
ಇಂದು ವಿಧಾನಸಭೆಯ ಕಲಾಪದ ವೇಳೆ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟವಾಗಿ ಹೇಳಿದ್ದು, ಹೀಗಾಗಿ ಹಳೆ ಪಿಂಚಣಿ ಯೋಜನೆ ಮರು ಜಾರಿಯಾಗುವುದು ಕಷ್ಟ ಸಾಧ್ಯವಾಗಿದೆ.
ಬಿಜೆಪಿಯ ಐಹೊಳೆ ಮಹಾಲಿಂಗಪ್ಪ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಲ ರಾಜ್ಯಗಳು ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಕೂಡ ತಿಳಿಸಿದ್ದಾರೆ.
ಈ NPS(ನೂತನ ಪಿಂಚಣಿ ಯೋಜನೆ) ಹಾಗೂ OPS (ಹಳೆ ಪಿಂಚಣಿ ಯೋಜನೆ) ಎಂದರೆ ಏನೆಂದು ನಿಮಗೆ ಗೊತ್ತೇ? ಮೊದಲಿಗೆ OPS ಬಗ್ಗೆ ನೋಡುವುದಾದರೆ ಈ ಯೋಜನೆಯು ಸರ್ಕಾರಿ ನೌಕರನ ಕೊನೆಯ ಸಂಬಳ ಮತ್ತು ವರ್ಷಗಳ ಸೇವೆಯ ಆಧಾರದ ಮೇಲೆ ಪಿಂಚಣಿಯನ್ನು ಒದಗಿಸುವ ಒಂದು ಪ್ರಯೋಜನಕಾರಿ ಯೋಜನೆಯಾಗಿದೆ. ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಈ ಯೋಜನೆಯು ಮುಕ್ತವಾಗಿದೆ. OPS ಅಡಿಯಲ್ಲಿ, ಸರ್ಕಾರವು ಖಾತರಿಪಡಿಸಿದ ಪಿಂಚಣಿಯನ್ನು ಒದಗಿಸುತ್ತದೆ, ಇದು ಕೊನೆಯದಾಗಿ ವ್ಯಕ್ತಿ ಪಡೆದ ವೇತನ ಮತ್ತು ವ್ಯಕ್ತಿಯ ಸೇವೆಯ ವರ್ಷಗಳ ಸಂಖ್ಯೆಯನ್ನು ಆಧರಿಸಿದೆ.
NPS ಎನ್ನುವುದು ವ್ಯಕ್ತಿಗಳು ವಿವಿಧ ರೀತಿಯ ಪಿಂಚಣಿ ನಿಧಿಗಳಲ್ಲಿ ಹೂಡಿಕೆ ಮಾಡಲು ಅನುಮತಿಸುವ ಒಂದು ನಿರ್ದಿಷ್ಟ ಕೊಡುಗೆ ಯೋಜನೆಯಾಗಿದೆ. ಈ ಯೋಜನೆಯು 18 ರಿಂದ 60 ವರ್ಷ ವಯಸ್ಸಿನ ಭಾರತದ ಎಲ್ಲಾ ನಾಗರಿಕರಿಗೆ ಮುಕ್ತವಾಗಿದೆ. NPS ಅಡಿಯಲ್ಲಿ ಸರ್ಕಾರವು ಯಾವುದೇ ಖಾತರಿ ಪಿಂಚಣಿಯನ್ನು ನೀಡುವುದಿಲ್ಲ. ಬದಲಾಗಿ, ಪಡೆದ ಪಿಂಚಣಿಯು ನಿಧಿಯ ಮೂಲಕ ಉತ್ಪತ್ತಿಯಾಗುವ ಹೂಡಿಕೆಯ ಆದಾಯವನ್ನು ಇದು ಆಧರಿಸಿದೆ. ಯೋಜನೆಯು ಚಂದಾದಾರರಿಗೆ 5 ಲಕ್ಷ ರೂಪಾಯಿಗಳ ಜೀವ ವಿಮಾ ರಕ್ಷಣೆಯನ್ನು ಸಹ ಒದಗಿಸಲಾಗುತ್ತದೆ.
NPS ಮತ್ತು OPS ನಡುವಿನ ವ್ಯತ್ಯಾಸ ಏನು? ನೌಕರರು ಯಾಕೆ OPS ಬೇಕೆಂದು ಕೇಳುತ್ತಾರೆ ಎಂದು ನೋಡುವುದಾದರೆ, NPS ಯಾವುದೇ ಖಾತರಿಯ ಪಿಂಚಣಿಯನ್ನು ನಿವೃತ್ತ ನೌಕರರಿಗೆ ನೀಡುವುದಿಲ್ಲ, ಆದರೆ OPS ಕೊನೆಯದಾಗಿ ಪಡೆದ ವೇತನ ಮತ್ತು ವ್ಯಕ್ತಿಯ ಸೇವೆಯ ವರ್ಷಗಳ ಸಂಖ್ಯೆಯನ್ನು ಆಧರಿಸಿ ಖಾತರಿಪಡಿಸಿದ ಪಿಂಚಣಿಯನ್ನು ಒದಗಿಸುತ್ತದೆ. ತಮ್ಮ ನಿವೃತ್ತಿಯಲ್ಲಿ ಖಾತರಿಯ ಪಿಂಚಣಿ ಹುಡುಕುತ್ತಿರುವವರಿಗೆ OPS ಉತ್ತಮವಾದ ಹಾಗೂ ಪಯುಕ್ತವಾದ ಆಯ್ಕೆ ಎಂದು ಹೇಳಲಾಗುತ್ತದೆ.