ಆಮದು ಅಡಕೆಯ ಸುಂಕ ಹೆಚ್ಚಿಸಿದ ಕೇಂದ್ರ ಸರಕಾರ | 251 ರೂ.ಯಿಂದ ರೂ.351ಕ್ಕೆ ಏರಿಕೆ

ನವದೆಹಲಿ : ಆಮದು ಅಡಕೆಯ ಸುಂಕ ದರವನ್ನು ಪ್ರತಿ ಕೆಜಿಗೆ 351 ರೂ. ಪರಿಷ್ಕರಿಸಿ ಕೇಂದ್ರೀಯ ಕಸ್ಟಮ್ಸ್ ಮತ್ತು ಎಕ್ಸೈಸ್ ಮಂಡಳಿ (ಸಿಬಿಇಸಿ) ಅಧಿಸೂಚನೆ ಹೊರಡಿಸಿದೆ.

 

ಈ ಹಿಂದೆ ಅಡಿಕೆಗೆ ಆಮದು ಸುಂಕ 251 ಇತ್ತು.ಇದೀಗ 351ರೂ.ಏರಿಸಿದ್ದು, ಆಮದು ಅಡಕೆಯ ದರವು ಕನಿಷ್ಠ 450 ರೂ.ಗೆ ಹೆಚ್ಚಲಿದೆ. ಇದರಿಂದ ದೇಸೀ ಮಾರುಕಟ್ಟೆಯಲ್ಲಿ ಆಮದು ಅಡಕೆಯ ದರವೂ ಕೂಡ ಹೆಚ್ಚಾಗುವುದರಿಂದ ದೇಸೀ ಅಡಕೆಯ ದರಕ್ಕೆ ಸ್ಥಿರತೆ ಸಿಗುವಂತಾಗುವುದರಿಂದ ದೇಸೀ ಅಡಿಕೆ ಬೆಳೆಗಾರರಿಗೆ ಅನುಕೂಲಕರವಾಗಲಿದೆ.

ಹೊರದೇಶದಿಂದ ಕಡಿಮೆ ಬೆಲೆಗೆ ಅಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರರನ್ನು ಕಂಗೆಸಿಡಿಸಿತ್ತು, ನಮ್ಮ ರಾಜ್ಯದ ಅಡಿಕೆ ಬೆಲೆಯನ್ನು ಕಡಿಮೆ ಬೆಲೆಗೆ ಅಮಾಡಗುತ್ತಿದ್ದ ಅಡಿಕೆ ತೀವ್ರವಾಗಿ ಬಾಧಿಸಿತ್ತು.

ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ನಮ್ಮ ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೊರದೇಶಗಳಿಂದ ಆಮದಾಗುವ ಅಡಿಕೆ ಬೆಳೆಯ ಆಮದು ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಹಳೇಯ ₹251 ಕನಿಷ್ಠ ಆಮದು ದರವನ್ನು ₹100 ಹೆಚ್ಚಿಸಿದ್ದು, ₹351ಕ್ಕೆ ಏರಿಕೆಯಾಗಿದೆ. ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರು ₹351 ಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಡಬೇಕಾಗಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ಈ ಆದೇಶ, ದೇಶೀಯ ಮಾರುಕಟ್ಟೆಯಲ್ಲಿ ನಮ್ಮ ರೈತರ ಅಡಿಕೆಗೆ ಹೆಚ್ಚಿನ ಬೆಲೆ ದೊರಕಿಸಿಕೊಡುವಲ್ಲಿ ಸಹಾಯಕವಾಗಲಿದೆ.

ವಿದೇಶಿ ಅಡಿಕೆಗಳ ಮೇಲಿನ ಕನಿಷ್ಠ ಆಮದು ಬೆಲೆಯನ್ನು ₹351ಕ್ಕೇ ಏರಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಯನ್ನು ಸ್ವಾಗತಿಸುತ್ತಾ, ಸದಾ ರೈತರ ಹಿತ ಕಾಯುವ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನಾನು ಮನಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Leave A Reply

Your email address will not be published.