ಬೆಳಗಾವಿ: ಕೆಎಎಸ್‌ ಅಧಿಕಾರಿ ರೇಶ್ಮಾ ಪತಿ, ಎಫ್‌ಡಿಎ ಆಗಿದ್ದ ಜಾಫರ್‌ ಆತ್ಮಹತ್ಯೆ

ಬೆಳಗಾವಿ : ಹಿಡಕಲ್‌ ಜಲಾಶಯದ ಭೂಸ್ವಾಧೀನಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಕೆಎಎಸ್‌ ಅಧಿಕಾರಿ ರೇಶ್ಮಾ ಅವರ ಪತಿ ಜಾಫರ್‌ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾಫರ್‌ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಾಫರ್ ಬೆಳಗಾವಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಎಫ್‌ಡಿಎ ಆಗಿದ್ದರು.

ಬೆಳಗಾವಿ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಮೊದಲ ದರ್ಜೆ ಸಹಾಯಕರಾಗಿ (ಎಫ್‌ಡಿಎ) ಕಾರ್ಯ ನಿರ್ವಹಿಸುತ್ತಿದ್ದ ಜಾಫರ್‌ ಪೀರ್ಜಾದೆ (39) ಸೋಮವಾರ ಅಜಂ ನಗರದ ತನ್ನ ಸಹೋದರನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಾಫರ್‌ ಅವರ ಪತ್ನಿ, ಕೆಎಎಸ್‌ ಅಧಿಕಾರಿ ರೇಶ್ಮಾ ತಾಳಿಕೋಟಿ ಸದ್ಯ ಹಿಡಕಲ್‌ ಜಲಾಶಯದ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು.

ಸೋಮವಾರ ಅಜಂ ನಗರದ ಸಹೋದರನ ಮನೆಗೆ ತೆರಳಿದ್ದ ಜಾಫರ್‌ ಪೀರ್ಜಾದೆ ಮಧ್ಯಾಹ್ನ ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾಫರ್‌ ಪೀರ್ಜಾದೆ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Leave A Reply

Your email address will not be published.