ಭಾರತದ ಈ ಭಾಗಗಳಲ್ಲಿ ಭೂಕಂಪನ ಆಗೋದು ಪಕ್ಕಾನಾ? ನಿಜವಾಗುತ್ತಾ ಡಚ್ ಸಂಶೋಧಕನ ಭವಿಷ್ಯವಾಣಿ ?
ಟರ್ಕಿ-ಸಿರಿಯಾ ಗಡಿಯಲ್ಲಿ ಆಗುತ್ತಿರುವ ಭೂಕಂಪದಿಂದ ಇಡೀ ಪ್ರಪಂಚವೇ ನಡುಗುವಂತಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಸಾವಿನ ಸಂಖ್ಯೆಯ ಏರಿಕೆ ಕಂಡು ಎಲ್ಲರೂ ಮರುಗುವಂತಾಗಿದೆ. ಆದರೆ ಈ ಪ್ರಬಲ ಭೂಕಂಪದ ಬಗ್ಗೆ ಮೂರು ದಿನ ಮೊದಲೇ ಸುಳಿವು ಡಚ್ ಸಂಶೋಧಕ ಫ್ರಾಂಕ್ ಹೂಗರ್‍ಬಿಟ್ಸ್ (Frank Hoogerbeets) ಎಂಬವವರು ಸುಳಿವು ನೀಡಿದ್ದರು. ಸದ್ಯ ಇದೇ ಸಂಶೋಧಕ ಮುಂದೆ ಭಾರತದಲ್ಲೂ ಕೆಲವೆಡೆ ಭೂಕಂಪನ ಆಖುವುದಾಗಿ ಹೇಳಿದ್ದು, ಈ ಹೇಳಿಕೆಯು ಇದೀಗ ನಿಜವಾಗಿದೆ.
ಹೌದು, ಫ್ರಾಂಕ್ ಹೂಗರ್‍ಬಿಟ್ಸ್ ಅವರು ಶೀಘ್ರದಲ್ಲೇ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಭೂಕಂಪನ ಸಂಭವಿಸಲಿದೆ ಎಂದು ಫೆಬ್ರವರಿ 6ರಂದು ವಿಡಿಯೋ ಸಂದೇಶ ನೀಡಿದ್ದರು. ಕಾಕತಾಳಿಯ ಎಂಬಂತೆ, ಕಳೆದ ಮೂರು ದಿನಗಳಿಂದ ದೇಶದ ವಿವಿಧೆಡೆ ಭೂಮಿ ಕಂಪಿಸತೊಡಗಿದೆ. ಶನಿವಾರ ಗುಜರಾತ್‍ನಲ್ಲಿ 3.8 ತೀವ್ರತೆಯ ಭೂಕಂಪ, ಭಾನುವಾರ ಅಸ್ಸಾಂನಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದ್ಧು ಎಲ್ಲರಲ್ಲೂ ಆತಂಕ ಮನೆಮಾಡಿದೆ.
ಅಲ್ಲದೆ ಬೆಳಗಿನ ಜಾವ ಸಿಕ್ಕೀಂನಲ್ಲಿ 4.3 ತೀವ್ರತೆಯ ಭೂಕಂಪನವಾಗಿದೆ. ಇದೇ ವೇಳೆ, ಅಫ್ಘಾನಿಸ್ತಾನ, ಇಂಡೋನೇಷ್ಯಾದಲ್ಲೂ ಇಷ್ಟೇ ತೀವ್ರತೆಯ ಭೂಕಂಪನವಾಗಿದೆ. ಅದೃಷ್ಟವಶಾತ್ ಎಲ್ಲಿಯೂ ಯಾವುದೇ ಸಾವು ನೋವು ಸಂಭವಿಸಿಲ್ಲ. ಹೂಗರ್‍ಬೀಟ್ಸ್ ಹೇಳಿಕೆಯಂತೆಯೇ ಭೂಕಂಪ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಭೂವಿಜ್ಞಾನ ಸಚಿವಾಲಯ ಸಂಸತ್‍ನಲ್ಲಿ ಪ್ರಕಟಿಸಿದ ಮಾಹಿತಿ ಅನ್ವಯ ದೇಶದ ಶೇಕಡಾ 60ರಷ್ಟು ಭೂಭಾಗ ಭೂಕಂಪನ ವಲಯದಲ್ಲಿದೆ. ಭೂಕಂಪನ ತೀವ್ರತೆ ಆಧರಿಸಿ ವಿವಿಧ ಪ್ರಾಂತ್ಯಗಳನ್ನು ನಾಲ್ಕು ವಲಯಗಳನ್ನಾಗಿ ಪ್ರಕಟಿಸಲಾಗಿದೆ. ಐದನೇ ವಲಯ ಅತ್ಯಂತ ಅಪಾಯಕಾರಿಯಾದರೆ 2ನೇ ವಲಯದಲ್ಲಿರುವ ಭೂಭಾಗಕ್ಕೆ ಕಡಿಮೆ ಅಪಾಯ ಇರಲಿದೆ.
ಇನ್ನು ಕೇಂದ್ರ ಭೂವಿಜ್ಞಾನ ಸಚಿವಾಲಯವು 5 ವಲಯಗಳಲ್ಲಿ ಈ ಭೂಕಂಪನ ವಲಯಗಳನ್ನು ಗುರುತಿಸಿದ್ದು, ಅವುಗಳನ್ನು ನೋಡುವುದಾದರೆ, ಮೊದಲನೆಯದಾಗಿ ಕಡಿಮೆ ಅಪಾಯದ ವಲಯ – ತೀವ್ರತೆ 6ರಷ್ಟಿರುವ ಸಾಧ್ಯತೆ ಇರುತ್ತದೆ. ದೇಶದ ಶೇ.40ರಷ್ಟು ಭೂಭಾಗ – ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರದ ಉಳಿದ ಪ್ರದೇಶಗಳಲ್ಲಿ ಇದು ಸಂಭವಿಸಬಹು.
ಭೂಕಂಪ – ವಲಯ 2, ಕಡಿಮೆ ಅಪಾಯದ ವಲಯ, ತೀವ್ರತೆ 6ರಷ್ಟಿರುವ ಸಾಧ್ಯತೆ ಇದೆ. ದೇಶದ ಶೇ.40ರಷ್ಟು ಭೂಭಾಗ ಅಂದರೆ, ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರದ ಉಳಿದ ಪ್ರದೇಶದ ವ್ಯಾಪ್ತಿ ಹೊಂದಿದೆ. ಭೂಕಂಪ – ವಲಯ 3, ಇದು ಸ್ವಲ್ಪ ಅಪಾಯ ವಲಯ . ಇದರ ತೀವ್ರತೆ 7ರಷ್ಟಿರುವ ಸಾಧ್ಯತೆ ಇದೆ. ದೇಶದ ಶೇ.31ರಷ್ಟು ಭೂಭಾಗ – ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ, ಗೋವಾ, ಲಕ್ಷದ್ವೀಪ್, ಗುಜರಾತ್, ಯುಪಿ, ಹರಿಯಾಣ, ಪಂಜಾಬ್, ಪಶ್ಚಿಮ ಬಂಗಾಳದ ಕೆಲ ಭಾಗ. ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‍ಘಡ, ಮಹಾರಾಷ್ಟ್ರ, ಒಡಿಶಾದ ಕೆಲ ಭಾಗ ಇದರಲ್ಲಿ ಸೇರಿವೆ
ಇನ್ನು ಭೂಕಂಪ – ವಲಯ 4, ಇದು ಕೂಡ ಹೆಚ್ಚು ಅಪಾಯ ವಲಯ. ಇಲ್ಲಿ ತೀವ್ರತೆ 8ರಷ್ಟಿರುತ್ತದೆ. ದೇಶದ ಶೇ.18ರಷ್ಟು ಭೂಭಾಗ ಹೊಂದಿದೆ. ಕಾಶ್ಮೀರದ ಕೆಲಭಾಗ, ಲಡಾಖ್, ಹಿಮಾಚಲದ ಉಳಿದ ಭಾಗ, ಪಂಜಾಬ್, ಹರಿಯಾಣ, ದೆಹಲಿ, ಸಿಕ್ಕೀಂ, ಉತ್ತರ ಯುಪಿ, ಬಿಹಾರದ ಕೆಲ ಭಾಗ,ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರದ ಕೆಲ ಭಾಗ, ಪಶ್ಚಿಮ ರಾಜಸ್ಥಾನವನ್ನು ಒಳಗೊಂಡಿದೆ. ಕೊನೆಯದಾಗಿ ಭೂಕಂಪ -ವಲಯ 5. ಇದು ಅತ್ಯಂತ ಹೆಚ್ಚು ಅಪಾಯ ವಲಯ ಎಂದು ಬಿಂಬಿತವಾಗಿದೆ. ತೀವ್ರತೆ 9ಕ್ಕಿಂತ ಹೆಚ್ಚಿರುವ ಸಾಧ್ಯತೆ ಇದೆ. ದೇಶದ ಶೇ.11ರಷ್ಟು ಭೂಭಾಗ – ಕಾಶ್ಮೀರದ ಕೆಲ ಭಾಗ, ಪಶ್ಚಿಮ ಹಿಮಾಚಲ, ಪೂರ್ವ ಉತ್ತರಾಖಂಡ್, ಗುಜರಾತ್‍ನ ರಣ್ ಆಫ್ ಕಛ್, ಉತ್ತರ ಬಿಹಾರ, ಅಂಡಮಾನ್ ನಿಕೋಬರ್, ಈಶಾನ್ಯ ರಾಜ್ಯಗಳಲ್ಲಿ ಇದು ಸಂಭವಿಸಬಹುದು.