‘ಕಾಲೇಜು ಹುಡುಗರೇ ವೀರ್ಯ ದಾನ ಮಾಡಿ’! ಈ ದೇಶದ ಯುವಕರಿಗೆ ಸ್ಪರ್ಮ್ ಬ್ಯಾಂಕ್ ಗಳಿಂದ ಹೀಗೊಂದು ಮನವಿ!!
‘ಕಾಲೇಜು ವಿದ್ಯಾರ್ಥಿಗಳೇ ನಿಮ್ಮ ವೀರ್ಯಾಣು ದಾನ ಮಾಡಿ’ ಈ ರೀತಿಯ ಮನವಿಯೊಂದನ್ನು ಸ್ಪರ್ಮ್ ಬ್ಯಾಂಕ್ಗಳು ಮಾಡಿಕೊಳ್ಳುತ್ತಿವೆ. ಅದು ಕೂಡ ಪದವಿ ಪಡೆಯುತ್ತಿರುವ ಅಥವಾ ಪದವೀಧರರ ವೀರ್ಯವೇ ಬೇಕಂತೆ! ವೀರ್ಯ ಕೊಟ್ರೆ, ದಾನಿಗಳಿಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದಂತೆ!
ಹೌದು, ಇಲ್ಲೊಂದು ದೇಶ ‘ವೀರ್ಯ ದಾನ ಮಾಡಿ’ ಎಂಬ ವಿಚಿತ್ರ ಬೇಡಿಕೆಯೊಂದನ್ನು ತನ್ನ ಯುವ ಜನತೆ ಮುಂದೆ ಇಟ್ಟಿದೆ. ಅರೆ! ಈ ರೀತಿ ಮನವಿ ಮಾಡ್ತಿರೋ ದೇಶವಾದ್ರೂ ಯಾವ್ದಪ್ಪಾ? ಯಾವ ದೇಶದ ಜನರಿಗೆ ವೀರ್ಯದ ಅಭಾವ ಕಾಡ್ತಿದೆ? ಎಂದು ಯೋಚಿಸ್ತಿದ್ದೀರಾ? ಇದು ಬೇರೆಲ್ಲೂ ಅಲ್ಲಾ ಕಂಡ್ರೀ, ನಮ್ಮ ಪಕ್ಕದಲ್ಲಿಯೇ ಇದ್ದು, ಸದಾ ನಮ್ಮ ಮೇಲೆ ಕಾಲು ಕೆರೆದುಕೊಂಡು ಆಗಾಗ ಜಗಳಕ್ಕೆ ಬರೋ ಚೀನಾ ದೇಶದ ಸ್ಪರ್ಮ್ ಬ್ಯಾಂಕ್ಗಳು ಅಲ್ಲಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಮಾಡಿಕೊಂಡಿವೆ.
ಯಾಕೆ ಹೀಗೆ ಈ ಬೇಡಿಕೆ ಎಂದು ನೋಡಿದಾಗ ಜನವರಿಯಲ್ಲಿ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಆಫ್ ಚೈನಾ ಬಿಡುಗಡೆ ಮಾಡಿದ ಅಂಕಿ-ಅಂಶದ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಕುಸಿತ ಕಂಡುಬಂದಿತ್ತು. ಇದು ಚೀನಾದ ಕಳೆದ 61 ವರ್ಷಗಳಲ್ಲೇ ಮೊದಲ ಬೆಳವಣಿಗೆಯಾಗಿದ್ದು, 2022ರಲ್ಲಿ 8.5 ಲಕ್ಷ ಜನಸಂಖ್ಯೆ ಕುಸಿತವಾಗಿತ್ತು. ಜನಸಂಖ್ಯೆ ಸುಧಾರಿಸಲು ಚೀನಾ 2015ರಲ್ಲಿ ಒಂದೇ ಮಗು ನೀತಿಯನ್ನು ಹಿಂಪಡೆದು, ಇಬ್ಬರು ಮಕ್ಕಳನ್ನು ಪಡೆಯಲು ಅವಕಾಶ ಕಲ್ಪಿಸಿತ್ತು. ನಂತರ 2021ರಲ್ಲಿ ದಂಪತಿ ಮೂವರು ಮಕ್ಕಳನ್ನು ಪಡೆಯಬಹುದು ಎಂದೂ ಬದಲಾವಣೆ ತಂದಿತು. ಆದ್ರೂ ಕೂಡ ಪ್ರಪ್ರಥಮ ಬಾರಿಗೆ ಹೀಗೆ ಜನಸಂಖ್ಯೆ ಕುಸಿತಗೊಂಡ ಹಿನ್ನೆಲೆಯಲ್ಲಿ ವೀರ್ಯಾಣುಗಳನ್ನು ದಾನ ಮಾಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
ಅಂದಹಾಗೆ ಚೀನಾದಲ್ಲಿನ ಸ್ಪರ್ಮ್ ಬ್ಯಾಂಕ್ಗಳಿಂದ ಇಂಥದ್ದೊಂದು ಮನವಿ ಹೊರಬಿದ್ದ ಬಳಿಕ ಅಲ್ಲಿನ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಸಾಕಷ್ಟು ಟ್ರೆಂಡ್ ಆಗಿದೆ. ದ ಯುನ್ನಾನ್ ಹ್ಯೂಮನ್ ಸ್ಪರ್ಮ್ ಬ್ಯಾಂಕ್ ಫೆ. 2ರಂದು ಇಂಥದ್ದೊಂದು ಮನವಿಯನ್ನು ಮೊದಲ ಸಲ ಮಾಡಿಕೊಂಡಿತ್ತು. ಇದರ ಬೆನ್ನಿಗೇ ಚೀನಾದ್ಯಾಂತ ಇರುವ ಇತರ ಸ್ಪರ್ಮ್ ಬ್ಯಾಂಕ್ಗಳೂ ಈ ಮನವಿಯನ್ನು ಮಾಡಿಕೊಂಡಿವೆ.
ಪದವಿ ಪಡೆಯುತ್ತಿರುವವರು ಅಥವಾ ಪದವೀಧರರು ಈ ವೀರ್ಯಾಣು ದಾನ ಮಾಡಬಹುದಾಗಿದೆ. 20ರಿಂದ 40ರ ವಯೋಮಾನದ, 165 ಸೆಂ.ಮೀ.ಗಿಂತ ಎತ್ತರವಿರುವ ಆರೋಗ್ಯವಂತ ಯುವಕರಿಂದ ವೀರ್ಯಾಣು ಅಪೇಕ್ಷಿಸಲಾಗಿದ್ದು, ಅಂಥ ಅರ್ಹರಿಂದ 8ರಿಂದ 12 ಸಲ ವೀರ್ಯಾಣು ಪಡೆಯಲಾಗುತ್ತದೆ. ವೀರ್ಯಾಣು ದಾನಿಗಳಿಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬೇರೆಯವರಿಂದ ವೀರ್ಯ ಪಡೆದು ತನ್ನ ದೇಶದ ಜನಸಂಖ್ಯೆಯನ್ನು ಹೆಚ್ಚಿಕೊಳ್ಳುವ ಸ್ಥಿತಿ ಚೀನಾಕ್ಕೆ ಬಂದಿರುವುದು ದುರಾದೃಷ್ಟಕರ ಎನ್ನಬಹುದು.