ಮಂಗಳೂರು, ಮಲ್ಪೆಯ ಮೀನುಗಾರರ ಮೇಲೆ ತಮಿಳುನಾಡಿನ ಮೀನುಗಾರರಿಂದ ಹಲ್ಲೆ ಪ್ರಕರಣ | ಇಂದು ಬೋಟ್ ಮಾಲಕರ, ಮೀನುಗಾರರ ಸಭೆ
ಮಂಗಳೂರು: ಮಂಗಳೂರು ಮತ್ತು ಮಲ್ಪೆಯ ಮೀನುಗಾರರ ಮೇಲೆ ಆಕ್ರಮಣ ನಡೆ ಸಿರುವ ತಮಿಳುನಾಡು ಮೀನುಗಾರರ ಮೇಲೆ ಸೂಕ್ತ ಕ್ರಮ ಕೈಗೊಂಡು ರಾಜ್ಯದ ಮೀನುಗಾರರಿಗೆ ನ್ಯಾಯ, ರಕ್ಷಣೆ, ಪರಿಹಾರ ಒದಗಿಸಬೇಕೆಂದು ಒತ್ತಾಯಿಸುವುದಕ್ಕಾಗಿ ಫೆ.13ರಂದು ಮಂಗಳೂರಿನಲ್ಲಿ ಬೋಟ್ ಮಾಲಕರು, ಮೀನುಗಾರ ಮುಖಂಡರ ಸಭೆ ನಡೆಯಲಿದೆ.
ಸಭೆಯಲ್ಲಿ ಘಟನೆಯ ಬಗ್ಗೆ ಪರಾಮರ್ಶೆ ನಡೆಸಿ ಜಿಲ್ಲಾಡಳಿತ, ರಾಜ್ಯ, ಕೇಂದ್ರ ಸರಕಾರದ ಮುಂದಿಡಬೇಕಾದ ಬೇಡಿಕೆ ಬಗ್ಗೆ ನಿರ್ಧಾರ ತೆಗೆದುಕೊಂಡು ಬಳಿಕ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಜತೆ ಮಾತುಕತೆ ನಡೆಯಲಿದೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
ಘಟನೆಯನ್ನು ಮೀನುಗಾರಿಕೆ ಇಲಾಖೆಯ ಗಮನಕ್ಕೆ ತರಲಾಗಿದೆ. ಅವರು ಘಟನೆ ನಡೆದ ವ್ಯಾಪ್ತಿಯ ಕುರಿತು ಹೆಚ್ಚಿನ ಮಾಹಿತಿ ಕೇಳಿದ್ದು ಅದನ್ನು ನೀಡಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ.
ಕಳೆದ ಬುಧವಾರ ಕನ್ಯಾಕುಮಾರಿ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಜ್ಯದ 200ಕ್ಕೂ ಅಧಿಕ ಬೋಟ್ ಗಳಿಗೆ ತಮಿಳುನಾಡು ಮೀನುಗಾ ರರು ಕಲ್ಲು, ಮರದ ತುಂಡು ಮತ್ತಿತರ ಪರಿಕರಗಳನ್ನು ಎಸೆದು ಹಾನಿ ಗೊಳಿಸಿ ದ್ದರು. ಇದರಿಂದ ಬೋಟ್ ಗಳು ವಾಪಸಾಗಿದ್ದವು. ಆಕ್ರಮಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.