ಈ ದೇಶದಲ್ಲಿ 1 ಕೆಜಿ ಕೋಳಿ ಮಾಂಸಕ್ಕೆ 720 ರೂ.
ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಮಾಂಸದ ಕೋಳಿ ಮತ್ತು ಕೋಳಿ ಮಾಂಸದ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡಿದೆ.
ಪಾಕಿಸ್ತಾನ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋಳಿ ಮಾಂಸದ ಬೆಲೆ ಇಷ್ಟು ಗರಿಷ್ಠ ಬೆಲೆ ತಲುಪಿದ್ದು ಎನ್ನಲಾಗಿದೆ.
ಕೋಳಿಯ ಬೆಲೆ ಕರಾಚಿಯಲ್ಲಿ 490ರಷ್ಟಿದ್ದರೆ, ಮಾಂಸದ ಬೆಲೆ 720 ರೂ.ತಲುಪಿದೆ . ಪಾಕಿಸ್ಥಾನದಲ್ಲಿ ಬಹುದೊಡ್ಡ ಮಟ್ಟದಲ್ಲಿ ಆಹಾರದ ಕೊರತೆ ಎದುರಾಗಿದೆ. ಇದರಿಂದಾಗಿ ಕುಕ್ಕುಟೋದ್ಯಮವನ್ನು ಹಲವಾರು ವ್ಯಾಪಾರಸ್ಥರು ನಿಲ್ಲಿಸಿದ್ದಾರೆ.
ಈ ಕಾರಣದಿಂದಾಗಿ ಕೋಳಿ ಮಾಂಸದ ಬೆಲೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕರಾಚಿಯಲ್ಲಿ ಒಂದು ಕೆ.ಜಿ ಕೋಳಿ ಮಾಂಸವು 720ಕ್ಕೆ ಮಾರಾಟವಾಗುತ್ತಿದೆ. ರಾವಲ್ಪಿಂಡಿ, ಇಸ್ಲಾಮಾಬಾದ್ ಸೇರಿದಂತೆ ಕೆಲವು ನಗರಗಳಲ್ಲಿ ಕೋಳಿ ಮಾಂಸದ ಬೆಲೆ 700-705ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.