ಈ ಆಹಾರ ಸೇವಿಸಿದ ತಕ್ಷಣ ಕುಡಿಯದಿರಿ ನೀರು | ಇಲ್ಲವಾದಲ್ಲಿ ನೀರಿನಿಂದಾಗಿಯೇ ಅನಾರೋಗ್ಯ ಕಾಡಬಹುದು ಹುಷಾರ್!

ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ನೀರು ದೇಹದ ಒಳ ಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಹೊರಹೋಗುತ್ತದೆ, ಚರ್ಮ ಸುಕ್ಕುಗಟ್ಟುವುದನ್ನು ಕಾಪಾಡುತ್ತದೆ. ಬಾಯಾರಿಕೆ ನೀಗಿಸುತ್ತದೆ. ಹೀಗೆ ನೀರಿನ ಬಗ್ಗೆ ನಾನಾ ರೀತಿಯ ಆರೋಗ್ಯಕರ ಪ್ರಯೋಜನಗಳಿವೆ.

ವೈದ್ಯರ ಪ್ರಕಾರ, ಊಟ ಮಾಡುವಾಗ ನೀರು ಕುಡಿಯುವುದನ್ನು ತಪ್ಪಿಸಬೇಕು, ಊಟದ ಜೊತೆಗೆ ಅಥವಾ ಊಟ ಮಾಡಿದ ತಕ್ಷಣ ನೀರು ಕುಡಿಯುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಹಾಗೆಯೇ ಕೆಲವೊಂದು ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಸರಿಯಾದ ಸಮಯಕ್ಕೆ ಅಂದರೆ ಆಹಾರ ಸೇವಿಸಿದ ಒಂದು ಗಂಟೆಯ ನಂತರ ನೀರು ಕುಡಿಯುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಜೀರ್ಣಕ್ರಿಯೆ ಸರಿಯಾಗಿರುತ್ತದೆ, ಜೀರ್ಣಾಂಗ ವ್ಯವಸ್ಥೆಯು ಸದೃಢವಾಗಿರುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಇರುವುದಿಲ್ಲ. ದೇಹವು ಆಹಾರದಲ್ಲಿರುವ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಮತ್ತು ಸರಿಯಾದ ಸಮಯಕ್ಕೆ ನೀರು ಕುಡಿಯುವುದು ಉತ್ತಮ ನಿದ್ದೆಯನ್ನು ಪಡೆಯಲು ಕೂಡ ಸಹಾಯ ಮಾಡುತ್ತದೆ.

ನೀವು ಆಹಾರ ತಿಂದ ತಕ್ಷಣ ನೀರು ಕುಡಿದರೆ ನಿಮಗೆ ಅನಾನುಕೂಲಗಳು ಪಕ್ಕಾ ಎದುರಾಗುತ್ತದೆ. ಆಹಾರ ಸೇವನೆ ತಕ್ಷಣ ನೀರು ಕುಡಿಯುವುದರಿಂದ ಈ ಕೆಳಗಿನ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಜೋಪಾನ.

*ಸ್ಥೂಲಕಾಯ ಸಮಸ್ಯೆ
*ಜೀರ್ಣಕ್ರಿಯೆ ಸಮಸ್ಯೆ
*ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಮಸ್ಯೆ
*ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಗಳು ಉಂಟಾಗಬಹುದು.

ಹಾಗಿದ್ರೆ ಬನ್ನಿ ಯಾವ ಆಹಾರ ಸೇವಿಸಿದ ತಕ್ಷಣ ನೀರು ಕುಡಿಯಬಾರದು ಎಂಬುದನ್ನು ತಿಳಿಯೋಣ.
ಹಾಲು:
ಹಾಲು ಕುಡಿದ ನಂತರ ನೀರು ಕುಡಿಯಬೇಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಲಿನ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಸ್ಟ್ರಾಬೆರಿ:
ಹುಳಿ-ಸಿಹಿ ಸ್ಟ್ರಾಬೆರಿ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಇದು ಆರೋಗ್ಯಕ್ಕೂ ಪ್ರಯೋಜನಕಾರಿ. ಆದರೆ ಈ ಹಣ್ಣನ್ನು ತಿಂದ ನಂತರ ನೀರು ಕುಡಿಯುವುದು ತುಂಬಾ ಹಾನಿಕಾರಕ. ಸ್ಟ್ರಾಬೆರಿಯಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ನೀರು ಅನಿಲವನ್ನು ಉಂಟುಮಾಡುತ್ತದೆ. ಇದು ಅಸಿಡಿಟಿ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನ ಉಂಟುಮಾಡುತ್ತದೆ.

ನೆಲಗಡಲೆ:
ನೆಲಗಡಲೆಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಎಣ್ಣೆ ಮತ್ತು ಕೊಬ್ಬು ಕೂಡ ಇದರಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ, ಕಡಲೆಕಾಯಿ ತಿಂದ ನಂತರ ನೀರು ಕುಡಿಯುವುದು ಹಾನಿಕಾರಕವಾಗಿದೆ. ಕಡಲೆಕಾಯಿ ತಿಂದ ನಂತರ ನೀರು ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮು ಸಮಸ್ಯೆ ಉಂಟಾಗುತ್ತದೆ.

ಜಾಮೂನ್ (ಬ್ಲ್ಯಾಕ್ ಬೆರ್ರಿ):
ಜಾಮೂನ್ ತಿನ್ನಲು ರುಚಿಕರವಾಗಿ ಕಾಣುತ್ತದೆ. ಜಾಮೂನ್ ತಿಂದ ನಂತರ ನೀರು ಕುಡಿದರೆ ಅನಾರೋಗ್ಯ ಕಾಡಬಹುದು. ಜಾಮೂನ್ ತಿಂದ ತಕ್ಷಣ ನೀರು ಕುಡಿದರೆ ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ಬರುತ್ತವೆ. ಈ ಕಾರಣದಿಂದಾಗಿ, ಹಲ್ಲಿನ ಸೂಕ್ಷ್ಮತೆಯ ಅಪಾಯವೂ ಇದೆ.

ಸೇಬು:
ಆಪಲ್ ಕಬ್ಬಿಣ, ವಿಟಮಿನ್ ಮತ್ತು ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ತಿಂದ ನಂತರ ನೀರು ಕುಡಿಯುವುದನ್ನು ತಪ್ಪಿಸಿ. ಸೇಬಿನ ನಂತರ ನೀರು ಕುಡಿಯುವುದರಿಂದ ಕರುಳಿಗೆ ಹಾನಿಯಾಗುತ್ತದೆ.

ಕಲ್ಲಂಗಡಿ:
ಕಲ್ಲಂಗಡಿಯಲ್ಲಿ ನೀರು ಸಮೃದ್ಧವಾಗಿದೆ. ಆದಾಗ್ಯೂ, ಅನೇಕ ಜನರು ಕಲ್ಲಂಗಡಿ ತಿಂದ ನಂತರ ನೀರು ಕುಡಿಯುತ್ತಾರೆ. ಹೀಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಲ್ಲಂಗಡಿ ತಿನ್ನುವುದರಿಂದ ಜೀರ್ಣಕಾರಿ ರಸವು ದುರ್ಬಲಗೊಳ್ಳುತ್ತದೆ. ಇದು ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಹೀಗಾಗಿ ಇಂತಹ ಆಹಾರ ತಿಂದ ಬಳಿಕ ನೀರಿನ ಸೇವನೆ ಮಾಡದಿರೋದೇ ಉತ್ತಮ ಎನ್ನಬಹುದು.

ಬಾಳೆಹಣ್ಣು :
ಪ್ರತಿ ಋತುವಿನಲ್ಲಿ ಸಿಗುವ ತಿನ್ನುವ ಹಣ್ಣು ಬಾಳೆಹಣ್ಣು. ಇದು ಆರೋಗ್ಯಕ್ಕೂ ಒಳ್ಳೆಯದು. ಆದರೆ ಈ ಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ. ಒಂದು ವೇಳೆ ಕುಡಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ಕನಿಷ್ಠ 30 ನಿಮಿಷಗಳ ನಂತರ ನೀರು ಕುಡಿಯಬಹುದು.

Leave A Reply

Your email address will not be published.