Tax Saving Schemes: ಈ ಯೋಜನೆಗಳು ನಿಮಗೆ ಅಧಿಕ ಲಾಭ ನೀಡುತ್ತೆ!

ಜನರು ಹಣದ ಉಳಿತಾಯಕ್ಕಾಗಿ ಹಾಗೂ ಉತ್ತಮ ಲಾಭವನ್ನು ಗಳಿಸಲು ಹೂಡಿಕೆಗಳನ್ನು ಮಾಡುತ್ತಾರೆ. ಯೋಜಿತ ಹೂಡಿಕೆ ಯಾವಾಗಲೂ ಉತ್ತಮ ಆದಾಯವನ್ನು ತರುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಜನರು ಹೂಡಿಕೆಯ ಮೇಲೆ ತಮ್ಮ ಹಣವನ್ನು ಸರಿಯಾಗಿ ಉಳಿಸಬಹುದು. ಇಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆಯನ್ನೂ ಉಳಿಸಬಹುದು. ನೀವು ಕಡಿಮೆ ಅವಧಿಗೆ ಉತ್ತಮ ಹೂಡಿಕೆಯ ಅವಕಾಶಗಳನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ, ಇಂದು ನಾವು ಅಂತಹ ಕೆಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇಲ್ಲಿ ನೀವು ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ ಹಾಗೂ ಮುಕ್ತಾಯದ ಸಮಯದಲ್ಲಿ ಉತ್ತಮ ಮೊತ್ತವನ್ನು ಸಂಗ್ರಹಿಸಬಹುದು.

ಸಾರ್ವಜನಿಕ ಭವಿಷ್ಯ ನಿಧಿ :-ಇಂದಿನ ಸಮಯದಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ತೆರಿಗೆ ವಿನಾಯಿತಿ ಪಡೆಯುವ ಒಂದು ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ನೀವು ಈ ಯೋಜನೆಯಲ್ಲಿ ಒಟ್ಟು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಹೂಡಿಕೆಯ ಸಮಯದಲ್ಲಿ, ನೀವು ಪ್ರತಿ ತಿಂಗಳು ನಿಮ್ಮ ಸಾರ್ವಜನಿಕ ಭವಿಷ್ಯ ಖಾತೆಯಲ್ಲಿ 500 ರೂ. ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಸಂಬಳಕ್ಕೆ ಅನುಗುಣವಾಗಿ PPF ನಲ್ಲಿ ಹಣ ಹೂಡಿಕೆ ಮಾಡಬಹುದು. ಹಲವಾರು ಕಂತುಗಳ ಮೂಲಕ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ. ನಿಮ್ಮ ಸಾರ್ವಜನಿಕ ಭವಿಷ್ಯ ಖಾತೆಯನ್ನು ನೀವು ಸುಲಭವಾಗಿ ತೆರೆಯಲು, ಯಾವುದೇ ಸರ್ಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ (Post Office) ಶಾಖೆಗೆ ಭೇಟಿ ನೀಡಿರಿ.

ಆರೋಗ್ಯ ವಿಮೆ :- ಆರೋಗ್ಯ ವಿಮೆ ಎಂದರೆ ನೀವು ಅನಾರೋಗ್ಯಕ್ಕೆ ಒಳಗಾದಲ್ಲಿ ವಿಮಾ ಕಂಪನಿಯು ನಿಮ್ಮ ವೈದ್ಯಕೀಯ ಖರ್ಚನ್ನು ಆಸ್ಪತ್ರೆಗೆ ಪಾವತಿಸುವ ಒಪ್ಪಂದವಾಗಿದೆ. ಈ ಒಪ್ಪಂದಲ್ಲಿ ವೈದ್ಯಕೀಯ ಬಿಲ್‌ಗಳು, ಆಸ್ಪತ್ರೆಯ ವೆಚ್ಚಗಳು, ಸಮಾಲೋಚನೆ ಶುಲ್ಕಗಳು, ಆಂಬ್ಯುಲೆನ್ಸ್‌ನಂತಹ ವೆಚ್ಚಗಳನ್ನು ಭರಿಸುವ ಮೂಲಕ ಆರೋಗ್ಯ ವಿಮೆ ನಿಮಗೆ ಸಹಾಯ ಮಾಡುತ್ತದೆ. ಹಾಗಗಿ ನೀವು ನಿಗದಿತ ಸಮಯದಲ್ಲಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ನಿಮ್ಮ ಸಂಗಾತಿ, ಪೋಷಕರು, ಮಕ್ಕಳು ಮತ್ತು ಇತರ ಕುಟುಂಬ ಸದಸ್ಯರಿಗೆ ನೀವು ಆರೋಗ್ಯ ವಿಮೆಯನ್ನು ತೆಗೆದುಕೊಳ್ಳಬಹುದು.

ರಾಷ್ಟ್ರೀಯ ಪಿಂಚಣಿ ಯೋಜನೆ :- ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿಗಳನ್ನು ಉಳಿಸುತ್ತೀರಿ. ಇದಲ್ಲದೆ, ಆದಾಯ ತೆರಿಗೆಯ ಸೆಕ್ಷನ್ 80CCD (1B) ಅಡಿಯಲ್ಲಿ ನೀವು ಹೆಚ್ಚುವರಿ 50 ಸಾವಿರ ರೂಪಾಯಿಗಳನ್ನು ಉಳಿಸಬಹುದು. ಅಂತೆಯೇ, ಮೆಚ್ಯೂರಿಟಿಯಲ್ಲಿ ಸಂಗ್ರಹವಾದ ಭಾಗದ ಶೇ.60ರವರೆಗೆ ಹಿಂಪಡೆಯಬಹುದು.

ಸಾರ್ವಜನಿಕ ಭವಿಷ್ಯ ನಿಧಿ:- ನೀವು ಈ ಯೋಜನೆಯಲ್ಲಿ ಒಟ್ಟು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಹೂಡಿಕೆಯ ಸಮಯದಲ್ಲಿ, ನೀವು ಪ್ರತಿ ತಿಂಗಳು ನಿಮ್ಮ ಸಾರ್ವಜನಿಕ ಭವಿಷ್ಯ ಖಾತೆಯಲ್ಲಿ 500 ರೂ. ಹೂಡಿಕೆ ಮಾಡಿದರೆ ಆಯ್ತು. PPF ನಲ್ಲಿ ನಿಮ್ಮ ಸಂಬಳಕ್ಕೆ ಅನುಗುಣವಾಗಿ ಹಣ ಹೂಡಿಕೆಯನ್ನು ಮಾಡಬಹುದು.

ಟರ್ಮ್ ಲೈಫ್ ಇನ್ಶುರೆನ್ಸ್:- ಟರ್ಮ್ ಲೈಫ್ ಇನ್ಶುರೆನ್ಸ್ ಪಾಲಿಸಿಯು ಅಕಾಲಿಕ ಮರಣದ ಪ್ರಯೋಜನದಡಿ ಸೌಲಭ್ಯಗಳನ್ನು ನೀಡುತ್ತದೆ ಹಾಗೂ ಇದು ತೆರಿಗೆ-ಮುಕ್ತವಾಗಿದೆ. ನಿಮ್ಮ ಕುಟುಂಬ ಸದಸ್ಯರು ಸ್ವೀಕರಿಸಿದ ಪಾವತಿಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ, ಇದು ಕಷ್ಟದ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಸಹಾಯವಾಗುವಂತಹ ಯೋಜನೆಯಾಗಿದೆ.

Leave A Reply

Your email address will not be published.