ವ್ಯಾಲೆಂಟೈನ್ ಡೇಗೂ ಮುನ್ನ ವಿಚ್ಛೇದನ ನೀಡಿದ ಮಹಿಳಾ ಆಂಕರ್ ! ಲೈವ್ ಟಿವಿಯಲ್ಲಿ ಪತಿಗೆ ಆಘಾತ ನೀಡಿದ ಪತ್ನಿ
ಟಿವಿ ಸುದ್ದಿ ವಾಹಿನಿಗಳು ನೀಡುವ ಸುದ್ದಿಗಳು ಮನೆ ಮನೆ ತಲುಪುತ್ತಿದೆ. ಹಾಗೆನೇ ಈ ಟಿವಿ ವಾಹಿನಿಯ ಸುದ್ದಿಯನ್ನು ಓದುವ ಆಂಕರ್‌ಗಳು ಕೂಡಾ ಬಹಳ ಚರ್ಚೆಯಲ್ಲಿರುತ್ತಾರೆ. ತಮ್ಮ ವಿಧವಿಧವಾದ ಶೈಲಿಯ ಓದುಗಾರಿಕೆಯಿಂದ ಕೆಲವರು ಮಿಂಚಿದರೆ, ಕೆಲವರು ತಮ್ಮ ವೈಯಕ್ತಿಕ ಸುದ್ದಿಗಳಿಂದ ಸುದ್ದಿಯಲ್ಲಿರುತ್ತಾರೆ. ಅಂತಹ ಒಂದು ಮಹಿಳಾ ಆಂಕರ್ ಮಾಡಿರುವ ಕೆಲಸ ಈಗ ಬಹಳ ಸುದ್ದಿಯಲ್ಲಿದೆ. ಅದು ಕೂಡಾ ಲೈವ್‌ನಲ್ಲಿ. ಅದೇನು ವಿಷಯ ಗೊತ್ತಾ ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ನ್ಯೂಸ್ ಓದುವವರು ತಮ್ಮ ಜೀವನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಆ ಸಮಸ್ಯೆಗಳು ತೆರೆಮೇಲೆ ಕಾಣಲು ಬಿಡುವುದಿಲ್ಲ ಮತ್ತು ಹೇಳುವುದಿಲ್ಲ. ಆದರೆ ಈ ನ್ಯೂಸ್ ಆಂಕರ್ ಮಾತ್ರ ಅದನ್ನು ನ್ಯೂಸ್ ಓದುವಾಗ ಲೈವ್‌ನಲ್ಲೇ ಆ ಕೆಲಸ ಮಾಡಿದ್ದಾರೆ ಎಂದರೆ ನಿಜಕ್ಕೂ ಅದನ್ನು ನೋಡಿದ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಈಕೆ ಲೈವ್ ನ್ಯೂಸ್ ಓದುವಾಗಲೇ ಕೊನೆಯಲ್ಲಿ ತನ್ನ ವಿಚ್ಛೇದನದ ಸುದ್ದಿಯನ್ನು ಹೇಳಿದ್ದಾರೆ.
ಅಂದ ಹಾಗೆ, ಈ ಅಚ್ಚರಿಯ ಪ್ರಕರಣ ಅಮೆರಿಕದಲ್ಲಿ ನಡೆದಿದೆ. ಜೂಲಿ ಬಂಡೇರಸ್ ಎಂಬ ಮಹಿಳಾ ಆಂಕರ್ ಫೆಬ್ರವರಿ 10 ರಂದು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಕಾರ್ಯಕ್ರಮದ ಕೊನೆಯಲ್ಲಿ ಸಣ್ಣ ಘೋಷಣೆಯನ್ನು ಮಾಡಲಿದ್ದೇನೆ ಎಂದು ಹೇಳಿದ್ದಾರೆ. ‘ಇಂದು ರಾತ್ರಿ 11 ಗಂಟೆಗೆ ಕಾರ್ಯಕ್ರಮದ ಕೊನೆಯಲ್ಲಿ ಒಂದು ಸಣ್ಣ ಘೋಷಣೆ ಮಾಡಲಿದ್ದೇನೆ’ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿತ್ತು.
ಡೈಲಿ ಮೇಲ್ ವರದಿಯ ಪ್ರಕಾರ, 49 ವರ್ಷದ ಜೂಲಿ ನ್ಯೂಯಾರ್ಕ್ ಮೂಲದ ಪ್ರಸಿದ್ಧ ಫಾಕ್ಸ್ ನ್ಯೂಸ್ ಚಾನೆಲ್‌ನಲ್ಲಿ ಆಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.. ಪ್ರೇಮಿಗಳ ದಿನದಂದು ತನ್ನ ಪತಿಯಿಂದ ಏನು ಪಡೆಯುತ್ತಿದ್ದಾಳೆ ಎಂದು ಲೈವ್ ಶೋನಲ್ಲಿ ಸಹ ಆಂಕರ್ ಕೇಳಿದಾಗ ಜೂಲಿ ಲೈವ್ ಟಿವಿಯಲ್ಲಿ ‘ನಾನು ವಿಚ್ಛೇದನ ಪಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ. ಇದು ನನ್ನ ಇಂದಿನ ಬ್ರೇಕಿಂಗ್ ನ್ಯೂಸ್ ಎಂದು ಜೂಲಿ ಹೇಳಿದ್ದಾರೆ.
ತನ್ನ ವಿಚ್ಛೇದನದ ಸುದ್ದಿಯನ್ನು ಲೈವ್‌ನಲ್ಲಿ ಹೇಳಿದ ಜೂಲಿ 2009ರಲ್ಲಿ ವಿವಾಹವಾಗಿದ್ದಳು. ಈಕೆಯ ಗಂಡನ ಹೆಸರು ಆಂಡ್ರ್ಯೂ ಸ್ಯಾನ್ಸೋನ್, ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. 55 ವರ್ಷದ ಆಂಡ್ರ್ಯೂ ಮತ್ತು ಜೂಲಿ ಅವರಿಗೆ ಮೂವರು ಮಕ್ಕಳಿದ್ದಾರೆ. ವರದಿಗಳ ಪ್ರಕಾರ, ಕಳೆದ ವರ್ಷದ ಡಿಸೆಂಬರ್‌ನಲ್ಲೇ ಜೂಲಿ ತನ್ನ ಪತಿಯಿಂದ ಬೇರ್ಪಡುವ ಸುದ್ದಿಯನ್ನು ನೀಡಿದ್ದಳು ಎನ್ನಲಾಗಿದೆ. ಹಾಗೂ ಅದನ್ನು ವ್ಯಾಲೆಂಟೇನ್ ಡೇ ಹತ್ತಿರುವ ಬರುವ ಸಮಯದಲ್ಲಿ ಘೋಷಣೆ ಮಾಡಿದ್ದಾಳೆ.