ದೇಶದ ಈ ನಗರಗಳಲ್ಲಿ ಇನ್ಮುಂದೆ ತಂದೂರಿ ರೋಟಿ ಬ್ಯಾನ್ | ಬಿಸಿ ಬಿಸಿ ರೋಟಿ ತಯಾರಿಸಿದ್ರೆ ಬೀಳುತ್ತೆ ಲಕ್ಷಾಂತರ ರೂಪಾಯಿ ದಂಡ!
ಈ ನಗರಗಳಲ್ಲಿ ವಾಸಿಸುವ ಜನರು ಇನ್ನು ಮುಂದೆ ಬೇಕೆಂದಾಗ ತಂದೂರಿ ರೊಟ್ಟಿ ತಿನ್ನುವ ಆಸೆಯನ್ನು ಬಿಟ್ಟುಬಿಡಬೇಕು. ಅಲ್ಲದೆ ನೀವಿನ್ನು ತಂದೂರಿ ರೋಟಿಯಿಂದ ದೂರವಿರಬೇಕು. ತಂದೂರಿ ರೋಟಿಯನ್ನು ತುಂಬಾ ಇಷ್ಟಪಡುವವರಿಗೆ ಇದೊಂದು ಬ್ಯಾಡ್ ನ್ಯೂಸ್. ಯಾಕೆ ಗೊತ್ತಾ? ನಗರದಲ್ಲಿ ತಂದೂರಿ ರೋಟಿ ತಯಾರಿಕೆಯ ಮೇಲೆ ನಿಷೇಧ ಹೇರಲಾಗಿದೆ. ಇನ್ನು ಮುಂದೆ ಯಾವ ಹೋಟೆಲ್ ನಲ್ಲೂ ಇದನ್ನು ತಯಾರಿಸುವಂತಿಲ್ಲ. ಮಾಡಿದ್ರೆ ಬೀಳುತ್ತೆ ಲಕ್ಷ ಲಕ್ಷ ದಂಡ!
ಹೌದು, ಮಧ್ಯಪ್ರದೇಶದ ಜಬಲ್ಪುರದಲ್ಲಿ ಜಿಲ್ಲಾಡಳಿತ ಆದೇಶವೊಂದನ್ನು ಹೊರಡಿಸಿದ್ದು, ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರನ್ನು ಅಚ್ಚರಿಗೊಳಿಸಿದೆ. ತಂದೂರಿ ರೋಟಿಯಿಂದ ಮಾಲಿನ್ಯ ಉಂಟಾಗುತ್ತದೆ ಎಂದು ತಿಳಿಸಿದ ಜಿಲ್ಲಾಡಳಿತ ನಗರದಲ್ಲಿ ತಂದೂರಿ ರೋಟಿ ತಯಾರಿಕೆಯ ಮೇಲೆ ನಿಷೇಧ ಹೇರಲಾಗಿದೆ.
ಒಂದು ವೇಳೆ ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದರೆ, ಅವರು 5 ಲಕ್ಷ ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗತ್ತೆ. ಹಾಗಾದ್ರೆ ಯಾವೆಲ್ಲಾ ನಗರಗಳಲ್ಲಿ ಈ ರೋಟಿ ಬ್ಯಾನ್ ಆಗುತ್ತೆ ಗೊತ್ತಾ?
ತಂದೂರಿ ರೋಟಿ ಇನ್ಮುಂದೆ ಭೋಪಾಲ್, ಇಂದೋರ್, ಜಬಲ್ಪುರ ಮತ್ತು ಗ್ವಾಲಿಯರ್ನಲ್ಲಿ ಲಭ್ಯವಿರುವುದಿಲ್ಲ. ಏಕೆಂದರೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ದೃಷ್ಟಿಯಿಂದ ಮಧ್ಯಪ್ರದೇಶ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಸರ್ಕಾರದ ಈ ನಿಯಮವನ್ನು ಯಾರಾದರೂ ಪಾಲಿಸದಿದ್ದರೆ, ಅವರಿಗೆ 5 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಸರ್ಕಾರ, ರಾಜ್ಯದ ಎಲ್ಲಾ ಹೋಟೆಲ್ಗಳು ಮತ್ತು ಡಾಬಾಗಳಿಗೆ ನೋಟಿಸ್ ನೀಡಲಾಗಿದೆ.
ವಾಸ್ತವವಾಗಿ ತಂದೂರಿ ರೋಟಿಯನ್ನು ತಯಾರಿಸಲು ಮರ ಮತ್ತು ಕಲ್ಲಿದ್ದಲನ್ನು ಬಳಸಲಾಗುತ್ತದೆ. ಇದರಿಂದ ಹೊಗೆ ಹೊರಸೂಸುತ್ತದೆ ಮತ್ತು ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಅದರ ಬದಲಿಗೆ ಎಲೆಕ್ಟ್ರಿಕ್ ಓವನ್ ಅಥವಾ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ಆದರೆ ಎಲೆಕ್ಟ್ರಿಕ್ ಓವನ್ ಅಥವಾ ಸಿಲಿಂಡರ್ನಲ್ಲಿ ಮಾಡಿದ ತಂದೂರಿ ರೋಟಿ ರುಚಿಯಾಗಿರುವುದಿಲ್ಲ.
ಇನ್ನೂ ವಾಯುಮಾಲಿನ್ಯದ ಬಗ್ಗೆ ಮಾತನಾಡುವುದಾದರೆ, ಇದು ಮಧ್ಯಪ್ರದೇಶದ ಸಮಸ್ಯೆ ಮಾತ್ರವಲ್ಲ, ಹಲವು ರಾಜ್ಯಗಳ ಸಮಸ್ಯೆಯೂ ಆಗಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲ, ವಾಯು ಮಾಲಿನ್ಯದಿಂದ ಅಸ್ತಮಾ, ಉಸಿರಾಟದ ತೊಂದರೆ, ಕಣ್ಣು ಉರಿ, ತಲೆನೋವು ಮುಂತಾದ ಸಮಸ್ಯೆಗಳೂ ಉಂಟಾಗುತ್ತವೆ.