ಪರೋಟ ತಿಂದ ಪಿಯು ವಿದ್ಯಾರ್ಥಿನಿ ಸಾವು!

ಕೆಲವೊಂದು ಆಹಾರಗಳು ಕೆಲವರಿಗೆ ಆಗುವುದಿಲ್ಲ. ಆದರೆ ತಿನಿಸುಗಳನ್ನು ಕಂಡಾಗ ಎಲ್ಲರಿಗೂ ತಿನ್ನಬೇಕೆನಿಸುತ್ತದೆ. ದೇಹಕ್ಕೆ ಆಗದೇ ಇರುವಂತಹ ತಿನಿಸುಗಳನ್ನು ತಿಂದಾಗ ಆರೋಗ್ಯ ಕೆಡುತ್ತದೆ. ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು. ಇದೀಗ ಅಂತಹದೇ ಘಟನೆಯೊಂದು ಸಂಭವಿಸಿದ್ದು, ಪರೋಟ ತಿಂದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿದೆ.

ಮೃತರನ್ನು ನಯನಮರಿಯಾ (16) ಎಂದು ಗುರುತಿಸಲಾಗಿದ್ದು, ಈಕೆ ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ ಎನ್ನಲಾಗಿದೆ. ವಿದ್ಯಾರ್ಥಿನಿ ವಾಜತೊಪ್ಪುವಿನ ಸೆಂಟ್​ ಜಾರ್ಜ್​ ಹೈಯರ್​ ಸೆಕೆಂಡರಿ ಸ್ಕೂಲ್​ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.

ಪರೋಟ ತಿಂದ ಬಳಿಕ ಫುಡ್​ ಅಲರ್ಜಿಯಿಂದಾಗಿ ವಿದ್ಯಾರ್ಥಿನಿ ಮೃತ ಪಟ್ಟಿದ್ದಾರೆ ಎನ್ನಲಾಗಿದ್ದು, ಈಕೆಗೆ ಈ ಮೊದಲೇ ಫುಡ್ ಅಲರ್ಜಿ ಇದ್ದು, ಮೈದಾ ಮತ್ತು ಗೋಧಿಯಿಂದ ಮಾಡಿದ ಆಹಾರಗಳನ್ನು ಸೇವಿಸಿದಾಗಲೆಲ್ಲ ನಯನಾಗೆ ಅಲರ್ಜಿ ಆಗುತ್ತಿತ್ತು. ಆದರೆ ಇತ್ತೀಚೆಗೆ ಗೋಧಿಯಿಂದ ಮಾಡಿದ ಆಹಾರವನ್ನು ಸೇವಿಸಿದ್ದಳು. ಇದರಿಂದ ಯಾವುದೇ ತೊಂದರೆ ಆಗಿರಲಿಲ್ಲ. ಅಲರ್ಜಿ ಉಂಟಾಗಿರಲಿಲ್ಲ.

ಹಾಗಾಗಿ ಪರೋಟ ತಿನ್ನಬೇಕೆಂದು ಆಸೆಯಾಗಿ, ಕಳೆದ ಬಾರಿ ಮೈದಾದಿಂದ ಮಾಡಿದೆ ಆಹಾರ ತಿಂದು ಯಾವುದೇ ತೊಂದರೆ ಆಗಿಲ್ಲ. ಈ ಬಾರಿ ಏನೂ ಆಗಲಾರದು, ಒಂದು ಬಾರಿ ತಿನ್ನುತ್ತೇನೆ ಎಂದು ನಯನಾ ಮೈದಾದಿಂದ ಮಾಡಿ ಪರೋಟವನ್ನು ತಿಂದಿದ್ದಳು. ತಿಂದ ಬಳಿಕ ನಯನಾ ಅನಾರೋಗ್ಯದಿಂದ ಬಳಲಿದ್ದು, ತಕ್ಷಣವೇ ಇಡುಕ್ಕಿ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ (ಫೆ. 10) ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

Leave A Reply

Your email address will not be published.