ಮಗನಿಗೆ 38 ವರ್ಷ ಆದ್ರೂ ಗರ್ಲ್‌ಫ್ರೆಂಡ್ ಇಲ್ಲವೆಂದು ಚಿಂತೆಗೀಡಾದ ತಾಯಿ! ಭಯಪಟ್ಟು ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸಿ, ತಾನೇನಾದಳು ಗೊತ್ತಾ?
ಹುಡುಗರಿಗೆ ಗರ್ಲ್ ಫ್ರೆಂಡ್ ಇರೋದು ಸರ್ವೇ ಸಾಮಾನ್ಯ. ಕೆಲವರ ಈ ಲವ್ ಮ್ಯಾಟರ್ ಹುಡುಗ, ಹುಡುಗಿ ಎರಡೂ ಕಡೆಯವರ ಮನೆಯಲ್ಲಿ ಗೊತ್ತಿರುತ್ತದೆ ಅಥವಾ ಗೊತ್ತಿಲ್ಲದೆ ಇರಲೂ ಬಹುದು. ಯಾಕೆಂದ್ರೆ ಎಲ್ಲಿ ತಮ್ಮ ಪ್ರೇಮಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸುತ್ತಾರೋ, ನಾವೆಲ್ಲಿ ಬೇರೆ ಆಗ್ತೀವೋ ಅನ್ನೋ ಭಯ ಅವರದ್ದು. ಇನ್ನು ಕೆಲವೊಮ್ಮೆ ಪೋಷಕರೇ ತಮ್ಮ ಮಕ್ಕಳ ಈ ಪ್ರೇಮಪ್ರಕರಣವನ್ನು ಭೇದಿಸಿ, ಮರ್ಯಾದೆಗೆ ಅಂಜಿ ಅದನ್ನು ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಇಂತಹ ಎಷ್ಟೋ ಘಟನೆಗಳನ್ನು ನಾವು ನೋಡಬಹುದು. ಆದರೆ ವಿಚಿತ್ರವೆಂಬಂತೆ ಇಲ್ಲೊಬ್ಬಳು ತಾಯಿ ವಯಸ್ಸು 38 ವರ್ಷ ಆದ್ರೂ ಕೂಡ ಮಗ, ಮನೆಗೆ ಯಾರೂ ಹುಡುಗಿಯರನ್ನೇ ಕರೆತಂದಿಲ್ಲ ಅಂತ ಆತನನ್ನು ಮನೋವೈದ್ಯರ ಹತ್ರ ಕರ್ಕೊಂಡು ಹೋಗಿದ್ದಾಳೆ.
ಭಾರತದಲ್ಲೀಗ ಸದ್ಯ ಹುಡುಗರಿಗೆ ಹುಡುಗಿ ಹುಡುಕುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಮದುವೆ ಯಾಗಿ ಜೀವನದಲ್ಲಿ ಸೆಟಲ್ ಆಗುವ ಹೆಚ್ಚಿನ ಯುವಕರಿಗೆ ಮದುವೆಯ ಭಾಗ್ಯವೇ ದೊರಕುತ್ತಿಲ್ಲ ಅನ್ನಬಹುದು. ಅಲ್ಲದೆ ಪ್ರಾಯಕ್ಕೆ ಬಂದ ಬಳಿಕ ಯುವಕ-ಯುವತಿಯರು ಹೆಚ್ಚು ಈ ಮುದುವೆಯ ಒತೂತಡವನ್ನು ಅನುಭವಿಸುತ್ತಾರೆ. ಪೋಷಕರು, ಸಂಬಂಧಿಕರು ಈ ಒತ್ತಡವನ್ನು ಅವರ ಮೇಲೆ ಹೇರುತ್ತಾರೆ. ಆದರೆ, ಹೆತ್ತವರು ಮತ್ತು ಸಂಬಂಧಿಕರು ಮದುವೆಯಾಗಲು ಪಟ್ಟುಬಿಡದ ಈ ಪ್ರವೃತ್ತಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಚೀನಾದಲ್ಲಿ, ಒಬ್ಬ ಮಹಿಳೆ ತನ್ನ 38 ವರ್ಷದ ಒಂಟಿ ಮಗನ ಬಗ್ಗೆ ತುಂಬಾ ಕಾಳಜಿ ವಹಿಸಿದಳು. ವಯಸ್ಸು 38 ವರ್ಷವಾದರೂ ಯಾರೊಬ್ಬನನ್ನೂ ಪ್ರೀತಿಸಿದ ಮಗನ ಮನಸ್ಥಿತಿಯಿಂದ ಗಾಬರಿಗೊಂಡು ಅವನಿಗೆ ಏನಾದರೂ ಮಾನಸಿಕವಾಗಿ ಸಮಸ್ಯೆ ಉಂಟಾ? ಎಂದು ಪರೀಕ್ಷಿಸಲು ಮನೋವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾಳೆ.
ಹೌದು, ಮಧ್ಯ ಚೀನೀ ಪ್ರಾಂತ್ಯದ ಹೆನಾನ್‌ನ ವಾಂಗ್ ಎಂಬ ವ್ಯಕ್ತಿ ಇತ್ತೀಚೆಗೆ ತನ್ನ ಸಂಕಟವನ್ನು ವೀಡಿಯೊದಲ್ಲಿ ಹಂಚಿಕೊಂಡಿದ್ದು, ವೀಡಿಯೊದಲ್ಲಿ, ವಾಂಗ್, ತಾನೆಂದು ಹುಡುಗಿಯರನ್ನು ಮನೆಗೆ ಕರೆ ತರಲ್ಲಿಲ್ಲ. ಇದರಿಂದ ತಾಯಿ ತನ್ನ ಮಾನಸಿಕ ಸ್ಥಿತಿಯ ಬಗ್ಗೆ ಭಯಗೊಂಡಿದ್ದಾರೆ, ಹೀಗಾಗಿ 2020 ರಿಂದ ಪ್ರತಿ ವರ್ಷ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ತಪಾಸಣೆಗಾಗಿ ತನ್ನನ್ನು ಕರೆದುಕೊಂಡು ಹೋಗುತ್ತಿದ್ದಳು ಎಂದು ಅದರಲ್ಲಿ ಹೇಳಿದ್ದಾನೆ. ಸದ್ಯ ಈ ವಿಡಿಯೋ ದೇಶದ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ವೈರಲ್ ಆಗಿದ್ದು, ಮದುವೆಯಾಗಲು ಒತ್ತಡದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಆ ತಾಯಿ ಪ್ರತಿ ವರ್ಷದಂತೆ ಫೆಬ್ರವರಿ 4ರಂದು ಅವರನ್ನು ಹೆನಾನ್ ಪ್ರಾಂತೀಯ ಮನೋವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಆದರೆ, ಈ ಬಾರಿ ವಾಂಗ್ ನನ್ನು ಪರೀಕ್ಷಿಸಿದ ಡಾಕ್ಟರ್ ಅನಿರೀಕ್ಷಿತವಾದ ರಿಪೋರ್ಟ್ ನೀಡಿದ್ದಾರೆ. ಹೌದು,ಮನೋವೈದ್ಯರು ತಮ್ಮ ಮಗನಿಗೆ ಅನಾರೋಗ್ಯವಿಲ್ಲ, ಆತನ ಎಲ್ಲಾ ಮನಸ್ಥಿತಿ ಸರಿ ಇದೆ. ಆದರೆ, ವಾಂಗ್ ನ ತಾಯಿಗೆ ಸಮಸ್ಯೆ ಶುರುವಾಗಿದೆ ಎಂದು ಹೇಳಿದ್ದಾರೆ. ವಾಂಗ್ ಅವರ ತಾಯಿಯು ತನ್ನ ಮಗನನ್ನು ಮದುವೆಯಾಗುವಂತೆ ಒತ್ತಾಯಿಸುವ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿರುವ ವಾಂಗ್ ‘ನಾನು ಅವಿವಾಹಿತ ವ್ಯಕ್ತಿಯಾಗಿರಬಾರದು ಎಂದು ಸಾಕಷ್ಟು ಹುಡುಗಿಯರಿಗಾಗಿ ಹುಡುಕಾಟ ನಡೆಸಿದ್ದೇನೆ. ಆದರೆ ಇನ್ನೂ ಜೀವನ ಸಂಗಾತಿಯಾಗಬಹುದಾದ ಸೂಕ್ತ ವ್ಯಕ್ತಿಯನ್ನು ಭೇಟಿ ಮಾಡಿಲ್ಲ. ಟೆನಿಸ್ ತರಬೇತುದಾರರಾಗಿ ಕೆಲಸ ಮಾಡುವ ನನ್ನನ್ನು ಎಲ್ಲರೂ ‘ಸೂಪರ್ ಓಲ್ಡ್ ಸಿಂಗಲ್ ಮ್ಯಾನ್’ ಎಂದು ಕರೆಯುತ್ತಾರೆ, ಮಾತ್ರವಲ್ಲ ಬೀಜಿಂಗ್‌ನಲ್ಲಿರುವ ಮನೆಯೊಂದರ ಡೌನ್ ಪೇಮೆಂಟ್‌ಗಾಗಿ ನಾನು ಸಾಕಷ್ಟು ಹಣವನ್ನು ಉಳಿಸಿಲ್ಲ. ಹೀಗಾಗಿ ಯಾರು ನನ್ನನ್ನು ಮದುವೆಯಾಗಲು ಬಯಸುತ್ತಿಲ್ಲ.
ಇದು ನನ್ನ ತಾಯಿಯನ್ನು ಚಿಂತೆಗೀಡು ಮಾಡಿದೆ. ನಾನು ಮದುವೆಯಾಗದ ಕಾರಣ ನನ್ನ ಅಮ್ಮನಿಗೆ ನಿದ್ರೆ ಬರುವುದಿಲ್ಲ, ಹಾಗಾಗಿ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ’ ಎಂದು ತಿಳಿಸಿದರು.