ಬಯಲಾಯ್ತು ‘ಐಸಿಸ್ ಫತ್ವಾ’ದ ಲೈಂಗಿಕ ನಿಯಮಗಳು! ಗುಲಾಮ ಮಹಿಳೆಯರ ಕುರಿತು ಏನು ಹೇಳುತ್ತೆ ಗೊತ್ತಾ ಇಸ್ಲಾಮಿಕ್ ಸ್ಟೇಟಿನ ಈ ತತ್ವ!
ಸದ್ಯ ಪ್ರಪಂಚದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಇಸ್ಲಾಮಿಕ್ ಸ್ಟೇಟ್‌ಗಳಲ್ಲಂತೂ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಇಸ್ಲಾಮಿಕ್ ಸ್ಟೇಟ್‌ನ ಕ್ರೌರ್ಯದ ಬಗ್ಗೆ ಇಡೀ ಜಗತ್ತಿಗೆ ಅರಿವಿದೆ. 2015ರಲ್ಲಿ, ಧರ್ಮದ ಹೆಸರಿನಲ್ಲಿ ಜನರ ಶಿರಚ್ಛೇದ ಮಾಡಿದ ISIS, ಗುಲಾಮ ಮಹಿಳೆಯರ ಬಗ್ಗೆ ಫತ್ವಾ ಹೊರಡಿಸಿತು. ಇದರಲ್ಲಿ ಮಾಲೀಕರು ಗುಲಾಮ ಮಹಿಳೆಯರೊಂದಿಗೆ ಯಾವಾಗ ಲೈಂಗಿಕತೆಯನ್ನು ಹೊಂದಬಹುದು ಎಂದು ಹೇಳಲಾಗಿದೆಯಂತೆ! ಇದೀಗ ಆ ಫತ್ವಾದಲ್ಲಿನ ನಿಯಮಗಳ ವಿಚಾರ ಬಹಿರಂಗವಾಗಿದೆ.
ಇತ್ತೀಚೆಗೆ ಸಿರಿಯಾದಲ್ಲಿ, ಅಮೇರಿಕನ್ ವಿಶೇಷ ಪಡೆಗಳು ಪ್ರಮುಖ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕನನ್ನು ಗುರಿಯಾಗಿಸಲು ದಾಳಿ ನಡೆಸಿತು. ಈ ವೇಳೆ ಹಲವು ರೀತಿಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದೊರೆತ ದಾಖಲೆಗಳಲ್ಲಿ 2015ರಲ್ಲಿಯೇ ಐಸಿಸ್ ಫತ್ವಾವನ್ನು ಹೊರಡಿಸಿದ್ದು, ಅದು ಮಹಿಳೆಯರಿಗಾಗಿ ರೂಪಿಸಿರುವ ಕಾನೂನುಗಳ ಬಗ್ಗೆ ಹೇಳುತ್ತದೆ. ಅಲ್ಲದೆ ಗುಲಾಮ ಮಹಿಳೆಯರ ಕುರಿತು ಮಾಡಿರುವ ಕೆಲವು ನಿಯಮಗಳು ಬೆಳಕಿಗೆ ಬಂದಿದ್ದು, ಈ ಫತ್ವಾ ಮೂಲಕ ಅವರು ಮಹಿಳೆಯರ ಗುಲಾಮಗಿರಿಯನ್ನು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆಂಬುದು ತಿಳಿದುಬಂದಿದೆ.
ಅಲ್ಲದೆ ಮಾಲೀಕರು ಗುಲಾಮ ಮಹಿಳೆಯರೊಂದಿಗೆ ಯಾವ ರೀತಿಯ ಸಂಬಂಧವನ್ನು ಹೊಂದಬಹುದು ಎಂಬುದರ ಕುರಿತು ಅನೇಕ ನಿಯಮಗಳನ್ನು ಸಹ ಮಾಡಲಾಗಿದೆ. ಅಂತಹ 15 ನಿಯಮಗಳನ್ನು ಡಾಕ್ಯುಮೆಂಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅವುಗಳೆಂದರೆ ಮಾಲೀಕನು ಗುಲಾಮ ಮಹಿಳೆಯೊಂದಿಗೆ, ಅವಳು ಒಂದು ಅವಧಿಯನ್ನು ಹಾದುಹೋಗುವವರೆಗೆ ಅಂದರೆ ಮುಟ್ಟಿನ ತನಕ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬಾರದು. ಗುಲಾಮ ಮಹಿಳೆ ಗರ್ಭಿಣಿ ಯಾಗಿದ್ದರೆ, ಅವಳು ಮಗುವಿಗೆ ಜನ್ಮ ನೀಡುವವರೆಗೂ ಮಾಲೀಕರು ಅವಳೊಂದಿಗೆ ಸಂಭೋಗಿಸಲು ಸಾಧ್ಯವಿಲ್ಲ. ಹಾಗೆಯೇ ಆಕೆಗೆ ಗರ್ಭಪಾತ ಮಾಡಲು ಸಾಧ್ಯವಿಲ್ಲ. ಮಹಿಳಾ ಖೈದಿಯನ್ನು ಆಕೆಯ ಯಜಮಾನ ಬಿಡುಗಡೆ ಮಾಡಿದರೆ, ಅವನು ಅವಳೊಂದಿಗೆ ಸಂಭೋಗಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ಇಬ್ಬರು ಸಹೋದರಿಯರನ್ನು ಗುಲಾಮರನ್ನಾಗಿ ಮಾಡಿದರೆ, ಅವನು ಇಬ್ಬರೊಂದಿಗೆ ಸಂಬಂಧ ವನ್ನು ಹೊಂದಲು ಸಾಧ್ಯವಿಲ್ಲ. ಅವನು ಯಾರಾದರೂ ಒಬ್ಬರನ್ನು ಆರಿಸಬೇಕು.
ಯಜಮಾನನು ತನ್ನ ಗುಲಾಮನನ್ನು ಗರ್ಭಿಣಿಯನ್ನಾಗಿ ಮಾಡಿದರೆ, ಅವನು ಅವಳನ್ನು ಮಾರುವಂತಿಲ್ಲ. ಇಬ್ಬರು ವ್ಯಕ್ತಿಗಳು ಹಣ ಸೇರಿಸಿ ಮಹಿಳೆಯನ್ನು ಖರೀದಿಸಿದ್ದರೆ, ಯಾರೂ ಅವಳೊಂದಿಗೆ ಸಂಭೋಗಿಸಲು ಸಾಧ್ಯವಿಲ್ಲ. ತಂದೆ ಮತ್ತು ಮಗ ಗುಲಾಮ ಮಹಿಳೆಯೊಂದಿಗೆ ಸಂಭೋಗಿಸಲು ಸಾಧ್ಯವಿಲ್ಲ. ತಾಯಿ-ಮಗಳು ಗುಲಾಮರಾಗಿದ್ದಲ್ಲಿ, ಅದರ ಮಾಲೀಕರು ಇಬ್ಬರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಬಹುದು. ಯಜಮಾನನು ಗುಲಾಮ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಬಾರದು. ಅವಳು ಮಾಡಲು ಸಾಧ್ಯವಾಗದ ಯಾವುದೇ ಕೆಲಸವನ್ನು ಅವವಳಗೆ ನೀಡಬಾರದು ಎಂದು ಸೂಚಿಸಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಈ ಫತ್ವಾ ಮೂಲಕ ಮಹಿಳೆಯರ ಗುಲಾಮಗಿರಿಯನ್ನು ಸಮರ್ಥಿಸಲು ಪ್ರಯತ್ನಿಸುವುದನ್ನು ಮಾತ್ರ ನೋಡಲಿಲ್ಲ. ಬದಲಿಗೆ, ಅವರು ಗುಲಾಮ ಮಹಿಳೆಯರ ಬಗ್ಗೆ ಎಷ್ಟು ಯೋಚಿಸುತ್ತಾರೆಂದು ಹೇಳಲು ಬಯಸುತ್ತಾರೆ. ಅವರ ಅನುಕೂಲಕ್ಕಾಗಿ ಈ ನಿಯಮಗಳನ್ನು ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಫತ್ವಾ ಹೆಸರಿನಲ್ಲಿ ಅದೆಷ್ಟೋ ಮಹಿಳೆಯರು ನರಕಯಾತನೆ ಅನುಭವಿಸುವಂತಾಗಿದೆ.