ನಿಮಗೆ ಗೊತ್ತಾ? 16ನೇ ಶತಮಾನದ ವರೆಗೂ ಚಾಕೋಲೇಟ್ ಕಹಿಯಾಗಿಯೇ ಇತ್ತು! ಅರೇ, ಹಾಗಿದ್ರೆ ಇದು ಸಿಹಿಯಾಗಿ ಬದಲಾದ್ದು ಹೇಗೆ?

Share the Article

ಚಾಕೋಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಾಕೋಲೇಟ್ ತಿನ್ನದ ವ್ಯಕ್ತಿಗಳಿಲ್ಲ. ಮಕ್ಕಳಿಂದ ಹಿಡಿದು ಅದರ ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬಂದುಬಿಡುತ್ತದೆ. ಊಟವಾದ್ಮೇಲೆ ಒಂದ್ಚೂರು ಸಿಹಿ ಬೇಕು ಎನ್ನಿಸಿದಾಗ ಕೈ ಹೋಗೋದು ಚಾಕೋಲೇಟ್ ಬಳಿ. ಒಟ್ನಲ್ಲಿ ಸಿಹಿ ಅಂದ್ರೆ ನೆನಪಾಗೋದೇ ಚಾಕ್ಲೇಟ್. ಯಾವುದೇ ಸಿಹಿ ಈ ಚಾಕೋಲೇಟ್ ಸ್ಥಾನ ಪಡೆಯಲು ಸಾಧ್ಯವಿಲ್ಲ. ಈ ಸಿಹಿಯನ್ನು ಚಪ್ಪರಿಸಿ ತಿನ್ನುವಾಗ ಒಂದು ವೇಳೆ ಕಹಿ ಏನಾದರೂ ಬಂದ್ರೆ ಏನು ಮಾಡ್ತೀರಿ ನೀವು? ಅರೇ ಅದ್ಹೇಗೆ ಸಾಧ್ಯ? ಅಷ್ಟಕ್ಕೂ ಈ ತರದ ವಿಚಿತ್ರ ಪ್ರಶ್ನೆ ಏನುಕ್ಕೆ ಬಂತು? ಎಂದು ಯೋಚಿಸ್ತಿದ್ದೀರಾ. ಯಾಕೆಂದರೆ ಹಿಂದೆ ಈ ಚಾಕೋಲೇಟ್ ಸ್ವಾದ ಕಹಿಯಾಗಿತ್ತು ಅನ್ನೋ ವಿಚಾರ ನಿಮಗೆ ಗೊತ್ತಾ?

ಫೆಬ್ರವರಿ ತಿಂಗಳಲ್ಲಿ ಒಂದು ವಾರ ಆಚರಿಸುವ ವ್ಯಾಲಂಟೈನ್ ವೀಕ್ ನಲ್ಲಿ ಚಾಕೋಲೇಟಿಗೂ ಒಂದು ದಿನ ಮೀಸಲಿರುವುದು ಎಲ್ಲರಿಗೂ ಗೊತ್ತು. ಅಂತೆ ಫೆಬ್ರವರಿ 9ರಂದು ಚಾಕೋಲೇಟ್ ದಿನವನ್ನು ಆಚರಿಸಲಾಗುತ್ತದೆ. ನೀವೆಲ್ಲ ಈಗಾಗ್ಲೇ ಪ್ರೀತಿಪಾತ್ರರಿಗೆ ಒಂದಿಷ್ಟು ಚಾಕೋಲೇಟ್ ಕೂಡ ಹಂಚಿರ್ತೀರಾ. ಅಂದಹಾಗೆ ನಾವು ಆಚರಿಸೋ ವಿಶೇಷ ದಿನಗಳ ಹಿಂದೆ ಒಂದೊಂದು ಇತಿಹಾಸವಿದೆ. ಹಾಗೆಯೇ ಚಾಕೋಲೇಟ್ ದಿನಕ್ಕೂ ಇತಿಹಾಸವೊಂದುಂಟು. ಹಿಂದೆ ಈ ದಿನದಂದು ಕಹಿಯಾದ ಚೀಸ್ ಸೇವನೆ ಮಾಡ್ತಿದ್ದರಂತೆ.

ಹೌದು, ನಿಮಗೆ ಕೇಳಿದ್ರೆ ಆಶ್ಚರ್ಯ ಆಗ್ಬೋದು. 16ನೇ ಶತಮಾನದವರೆಗೂ ಚಾಕೋಲೇಟ್ ಕಹಿಯಾಗಿಯೇ ಇರ್ತಾಯಿತ್ತಂತೆ! ನಂತರದ ದಿನಗಳಲ್ಲಿ ಚಾಕೋಲೇಟ್ ಸ್ವಾದ ಬದಲಾಯ್ತಂತೆ! ಚಾಕೋಲೇಟ್ ಇತಿಹಾಸ 4000 ವರ್ಷಗಳಷ್ಟು ಹಿಂದಿನದು ಎನ್ನಲಾಗುತ್ತದೆ. ಮೊದಲನೆಯದಾಗಿ ಚಾಕೋಲೇಟ್ ಪದದ ಅರ್ಥವನ್ನು ನೋಡೋದಾದ್ರೆ ಈ ಪದವು ಮಾಯನ್ ಮತ್ತು ಅಜ್ಟೆಕ್ ನಾಗರಿಕತೆಗಳಿಂದ ಬಂದಿದೆ. ಅಜ್ಟೆಕ್ ಭಾಷೆಯಲ್ಲಿ ಚಾಕೊಲೇಟ್ ಎಂದರೆ ಹುಳಿ ಅಥವಾ ಕಹಿ ಎಂದರ್ಥ ವಂತೆ!

ವರದಿಯೊಂದರ ಪ್ರಕಾರ, 1519ರಲ್ಲಿ ಮೆಕ್ಸಿಕೋದಲ್ಲಿ ಸ್ಪ್ಯಾನಿಷ್ ಪರಿಶೋಧಕ ಹೆರ್ನಾನ್ ಕಾರ್ಟೆಸ್‌ಗೆ ಕುಡಿಯಲು ಈ ಕಹಿ ಅಥವಾ ಹುಳಿ ಚಾಕೊಲೇಟ್ ನೀಡಲಾಗಿತ್ತಂತೆ. ಅದನ್ನು ಆತ ಸ್ಪೇನ್ ಗೆ ತೆಗೆದುಕೊಂಡು ಹೋಗಿದ್ದನಂತೆ. ನಂತ್ರ ಈ ಚಾಕೋಲೇಟ್ ಸ್ವಾದ ಹೆಚ್ಚಿಸಲು ಅದಕ್ಕೆ ವೆನಿಲ್ಲಾ, ಸಕ್ಕರೆ ಮತ್ತು ದಾಲ್ಚಿನ್ನಿ ಸೇರಿಸಿದನಂತೆ. ಇದಾದ ನಂತ್ರ ಚಾಕೋಲೇಟ್ ರುಚಿ ನಿಧಾನವಾಗಿ ಬದಲಾಗ್ತಾ ಹೋಯ್ತು.
ನಂತರ 1555ರ ಜುಲೈ 7ರಂದು ಯುರೋಪ್ ನಲ್ಲಿ ಮೊದಲ ಬಾರಿ ಚಾಕೋಲೇಟ್ ಡೇ ಆಚರಣೆ ಮಾಡಲಾಯ್ತು. ಇದಾದ ನಂತ್ರ ವಿಶ್ವದ ಅನೇಕ ದೇಶಗಳಲ್ಲಿ ಚಾಕೋಲೇಟ್ ಡೇ ಆಚರಣೆ ಶುರುವಾಯ್ತು. ಚಾಕೋಲೇಟ್ ರುಚಿ ಹೆಚ್ಚಾದಂತೆ ಎಲ್ಲ ದೇಶಗಳು ಚಾಕೋಲೇಟ್ ಡೇ ಆಚರಣೆ ಶುರು ಮಾಡಿದ್ವು.

ನಂತರ 19 ಮತ್ತು 20ನೇ ಶತಮಾನದಲ್ಲಿ ಚಾಕೋಲೇಟ್ ತಯಾರಿಸಲು ದೊಡ್ಡ ಕಂಪನಿಗಳು ತಲೆ ಎತ್ತಿದವು. ಕ್ಯಾಡ್ಬರಿ 1868 ರಲ್ಲಿ ಇಂಗ್ಲೆಂಡ್ನಲ್ಲಿ ಪ್ರಾರಂಭವಾಯಿತು. 25 ವರ್ಷಗಳ ನಂತರ, ಚಿಕಾಗೋದಲ್ಲಿ ನಡೆದ ವರ್ಲ್ಡ್ಸ್ ಕೊಲಂಬಿಯನ್ ಎಕ್ಸ್ ಪೊಸಿಷನ್‌ನಲ್ಲಿ, ಚಾಕೊಲೇಟ್ ಸಂಸ್ಕರಣಾ ಸಾಧನವನ್ನು ಮಿಲ್ಟನ್ ಎಸ್ ಖರೀದಿಸಿದ್ರು. ಈಗ ವಿಶ್ವದ ಅತಿದೊಡ್ಡ ಮತ್ತು ವಿಶ್ವ ಪ್ರಸಿದ್ಧ ಚಾಕೊಲೇಟ್ ಸೃಷ್ಟಿಕರ್ತರಲ್ಲಿ ಒಬ್ಬರಾಗಿದ್ದಾರೆ. ಕಂಪನಿಯು ಚಾಕೊಲೇಟ್ ಲೇಪಿತ ಕ್ಯಾರಮೆಲ್‌ಗಳನ್ನು ಉತ್ಪಾದಿಸುವ ಮೂಲಕ ಉತ್ಪಾದನೆ ಪ್ರಾರಂಭಿಸಿತ್ತು. ನೆಸ್ಲೆ 1860 ರ ದಶಕದಲ್ಲಿ ಪ್ರಾರಂಭವಾಯಿತು. ಈಗ ವಿಶ್ವದ ಅತಿದೊಡ್ಡ ಆಹಾರ ತಯಾರಿಕಾ ಕಂಪನಿಯಲ್ಲಿ ಒಂದಾಗಿದೆ.

Leave A Reply

Your email address will not be published.