ಅಲ್ಪಸಂಖ್ಯಾತರಿಗೆ ಪ್ರಪಂಚದಲ್ಲೇ ಭಾರತಕ್ಕಿಂತ ಉತ್ತಮ, ಸುರಕ್ಷಿತ ದೇಶ ಮತ್ತೊಂದಿಲ್ಲ! ಜಾಗತಿಕ ಸಮೀಕ್ಷೆಯ ವರದಿ ತೆರೆದಿಟ್ಟ ಸಿಪಿಎ!!
ಭಾರತದಲ್ಲಿ ಸದಾ ಕೇಳಿ ಬರುವ ಕೂಗುಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ವಿಚಾರವೆಂದರೆ ಇಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆ ಇಲ್ಲ, ಅವರ ಮೇಲೆ ನಿರಂತರವಾಗಿ ದೌರ್ಜನ್ಯವಾಗುತ್ತಿದೆ, ಶೋಷಣೆ ನಡೆಯುತ್ತಿದೆ ಎಂದು ಅಹಿಷ್ಣುತೆ ಅಂತೆಲ್ಲಾ ಭಾಷಣ ಬಿಗಿಯುತ್ತಿದ್ದರು. ಹೀಗೆ ಒಂದೇ ಸಮನೆ ವದರಾಡುತ್ತಿದ್ದ ಬುದ್ದಿಜೀವಿಗಳಿಗೆ ಮುಖ ಭಂಗವಾಗಿದೆ. ಜಾಗತಿಕ ಅಲ್ಪಸಂಖ್ಯಾತರ ಕುರಿತಾಗಿ ‘ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್’ (ಸಿಪಿಎ)ಸಂಸ್ಥೆಯು ವರದಿಯೊಂದನ್ನು ನೀಡಿದ್ದು, ಇದರ ಪ್ರಕಾರ, ಜಗತ್ತಿನಲ್ಲಿ ಅಲ್ಪ ಸಂಖ್ಯಾತರಿಗೆ ಭಾರತಕ್ಕಿಂತ ಉತ್ತಮವಾದ ದೇಶವಿಲ್ಲ ಎಂದು ತಿಳಿಸಿದೆ.
ಹೌದು, ಜಾಗತಿಕ ಅಲ್ಪಸಂಖ್ಯಾತರ ಕುರಿತಾದ ನೀತಿ ವಿಶ್ಲೇಷಣೆಯ ಕೇಂದ್ರದ (ಸಿಪಿಎ ವರದಿ) ವರದಿಯು ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಗೇ ಸಂಬಂಧಪಟ್ಟಿದ್ದು, ಅವರ ಸುರಕ್ಷತೆ, ಅವರ ಇಂದಿನ ಸ್ಥಿತಿ ಗತಿಗಳು ಯಾವ ಯಾವ ದೇಶದಲ್ಲಿ ಹೇಗಿದೆ ಎಂದು ನಡೆಸಿದ ಸಮೀಕ್ಷೆಯಾಗಿದೆ. ಇದಕ್ಕಾಗಿ ಸುಮಾರು 110 ದೇಶಗಳನ್ನು ಪರಿಗಣಿಸಿದ್ದು, ಇದರಲ್ಲಿ ಅಲ್ಪಸಂಖ್ಯಾತರಿಗೆ ಎಲ್ದದಕ್ಕಿಂತಲೂ ಭಾರತವೇ ಸುರಕ್ಷಿತ ತಾಣ ಎಂದು ತಿಳಿದು ಬಂದಿದೆ. ಜೊತೆಗೆ ಅವರ ಪರಿಗಣನೆಯಲ್ಲಿ ದೇಶ ನಂಬರ್ ಒನ್ ಇದೆ ಎಂದು ಆ ವರದಿ ಹೇಳಿದೆ. 110 ದೇಶಗಳಲ್ಲಿ ಭಾರತವು ಧಾರ್ಮಿಕ ಅಲ್ಪಸಂಖ್ಯಾತರ ಅತ್ಯುತ್ತಮ ಸ್ಥಾನಮಾನವನ್ನು ಹೊಂದಿದ್ದು, ಅದರ ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ, ಜಪಾನ್, ಪನಾಮ ಮತ್ತು ಅಮೆರಿಕ ದೇಶಗಳಿವೆ.
ಭಾರತದ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬಿಡುಗಡೆ ಮಾಡಿದ ವರದಿಯು ಮಾನವ ಹಕ್ಕುಗಳು, ಅಲ್ಪಸಂಖ್ಯಾತರು, ಧಾರ್ಮಿಕ ಸ್ವಾತಂತ್ರ್ಯದ ಪರಿಕಲ್ಪನೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಕೃತಿ ಸಂದಿಗ್ಧತೆ, ಧಾರ್ಮಿಕ ಭಿನ್ನಾಭಿಪ್ರಾಯಗಳ ಕಾರಣ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಪರಿಕಲ್ಪನಾ ಸಮಸ್ಯೆಗಳನ್ನು ಆಧರಿಸಿದೆ. ಅಲ್ಲದೆ ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಸೊಮಾಲಿಯಾ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.ಯುಕೆ ಮತ್ತು ಯುಎಇ 54 ಮತ್ತು 61 ನೇ ಸ್ಥಾನದಲ್ಲಿವೆ. CPA (Center for Policy Analysis ) ವರದಿಯ ಪ್ರಕಾರ, ಭಾರತದ ಅಲ್ಪಸಂಖ್ಯಾತ ನೀತಿಯು ಹೆಚ್ಚುತ್ತಿರುವ ವೈವಿಧ್ಯತೆಗೆ ಒತ್ತು ನೀಡುತ್ತದೆ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪ್ರಗತಿಗೆ ವಿಶೇಷ ನಿಬಂಧನೆಗಳನ್ನು ಹೊಂದಿದೆ ಎಂದು ವರದಿಯು ತಿಳಿಸುತ್ತದೆ.
ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿದ ಸಿಪಿಎ ಕಾರ್ಯನಿರ್ವಾಹಕ ಅಧ್ಯಕ್ಷ ದುರ್ಗಾ ನಂದ್ ಝಾ ಅವರು ‘ಜಾಗತಿಕ ಅಲ್ಪಸಂಖ್ಯಾತರ ವರದಿಯು ಅಂತಹ ವಿಷಯಗಳ ಕುರಿತು ಇತರ ಅಂತರರಾಷ್ಟ್ರೀಯ ವರದಿಗಳ ಹೆಜ್ಜೆಗಳನ್ನು ಅನುಸರಿಸುವುದಿಲ್ಲ, ಇದು ಸಾಮಾನ್ಯವಾಗಿ ಕೆಲವು ವಿಲಕ್ಷಣ ಘಟನೆಗಳ ಆಧಾರದ ಮೇಲೆ ತಯಾರಿಸಲ್ಪಟ್ಟಿದೆ, ಇದು ದೇಶದ ಒಟ್ಟಾರೆ ಪರಿಸ್ಥಿತಿಯನ್ನು ಪ್ರಸ್ತುತಪಡಿಸುವುದಿಲ್ಲ. ಭಾರತದ ಅಲ್ಪಸಂಖ್ಯಾತ ನೀತಿ ಮಾದರಿಯು ವೈವಿಧ್ಯತೆಯ ಉತ್ತೇಜನದ ಮೇಲೆ ಕೇಂದ್ರೀಕರಿಸುತ್ತದೆ. ಆದಾಗ್ಯೂ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವೆ, ವಿಶೇಷವಾಗಿ ಮುಸ್ಲಿಮರೊಂದಿಗೆ ವಿವಿಧ ವಿಷಯಗಳ ಕುರಿತು ತರಗತಿಗಳ ಅನೇಕ ವರದಿಗಳು ಇರುವುದರಿಂದ ಇದು ಅಪೇಕ್ಷಿತ ಫಲಿತಾಂಶಗಳನ್ನು ಹೊಂದಿರುವುದಿಲ್ಲ. ಇದು ವಿಮರ್ಶೆಗೆ ಕರೆ ನೀಡುತ್ತದೆ. ಭಾರತದ ಅಲ್ಪಸಂಖ್ಯಾತ ನೀತಿ ಮತ್ತು ಭಾರತದಲ್ಲಿ ಸಂಘರ್ಷದ ಸಂದರ್ಭಗಳನ್ನು ತಪ್ಪಿಸಲು ಭಾರತವು ತನ್ನ ಅಲ್ಪಸಂಖ್ಯಾತ ನೀತಿಯನ್ನು ತರ್ಕಬದ್ಧಗೊಳಿಸಬೇಕಾಗಿದೆ’ ಎಂದಿದ್ದಾರೆ.
ಇದರಿಂದ, ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವಿಲ್ಲ, ದೇಶದಲ್ಲಿ ಅಹಿಷ್ಣುತೆ ತಾಂಡವವಾಡುತ್ತಿದೆ. ಅಲ್ಪಸಂಖ್ಯಾತರನ್ನು 2ನೇ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತಿದೆ ಎನ್ನುತ್ತಿದ್ದ ಬುದ್ಧಿಜೀವಿಗಳ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವಂಥ ವಿಷಯ ಗೊತ್ತಾಗಿದೆ. ಅಲ್ಲದೆ ಭಾರತದಲ್ಲಿ ಅಲ್ಪಸಂಖ್ಯಾತರನ್ನು ತುಳಿಯಲಾಗುತ್ತಿದೆ ಎಂದು ಪಾಕಿಸ್ತಾನ ಬೇಕಾಬಿಟ್ಟಿಯಾಗಿ ಹೇಳುತ್ತದೆ. ಕಾಶ್ಮೀರದ ಬಗ್ಗೆ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಲೇ ದೇಶದಲ್ಲಿ ಅಲ್ಪಸಂಖ್ಯಾತರನ್ನು ಕೆರಳಿಸುವ ಕೆಲಸವನ್ನು ಪಾಕ್ ಮಾಡುತ್ತಿದೆ. ಅದರೊಂದಿಗೆ ಪಾಕ್ ಮಾತನ್ನು ನಂಬುವ ಹಲವು ಇಸ್ಲಾಮಿಕ್ ರಾಷ್ಟ್ರಗಳು ಈ ಸಿಪಿಎ ವರದಿಯನ್ನು ಖಂಡಿತಾ ಓದಲೇ ಬೇಕು.