ಈ ರಾಜ್ಯದಲ್ಲಿ ಗ್ರಾಮವೊಂದರಲ್ಲಿ ಕುಟುಂಬದ ಎಲ್ಲಾ ಸಹೋದರರು ಒಬ್ಬಳನ್ನೇ ಮದುವೆಯಾಗ್ತಾರೆ! ಇವರ ಸಂಪ್ರದಾಯಗಳ ಬಗ್ಗೆ ಕೇಳಿದ್ರೆ ನೀವು ಗಾಬರಿ ಬೀಳೋದು ಪಕ್ಕಾ!!

ಆ ಒಂದು ಗ್ರಾಮದಲ್ಲಿ ಕುಟುಂಬದಲ್ಲಿನ ಎಲ್ಲಾ ಸಹೋದರರೂ ಸೇರಿ ಒಬ್ಬಳನ್ನು ಮದುವೆ ಆಗ್ತಾರೆ. ಮದುವೆ ಆಗುವಾಕೆ ಎಲ್ಲರೊಂದಿಗೂ ತಾಳಿ ಕಟ್ಟಿಸಿಕೊಳ್ಳುತ್ತಾಳೆ, ಒಟ್ಟಿಗೆ ಸಂಸಾರವನ್ನೂ ನಡೆಸುತ್ತಾಳೆ. ಅಲ್ಲದೆ ಸರದಿಯಂತೆ ಆಕೆ ಕೋಣೆಯಲ್ಲಿ ಒಬ್ಬೊಬ್ಬರ ಜೊತೆ ಒಂದೊಂದು ದಿನ ಮಲಗುತ್ತಾಳೆ. ಇದೆಲ್ಲವನ್ನೂ ಸಹೋದರರು ಸೇರಿ ಚರ್ಚಿಸಿ ನಿರ್ಧರಿಸುತ್ತಾರೆ!

ಭಾರತ ಹಲವು ಸಂಸ್ಕೃತಿಗಳ ತೊಟ್ಟಿಲು. ಇಲ್ಲಿ ನಾವು ಹೋದಲೆಲ್ಲಾ ಒಂದೊಂದು ಬಗೆ ಬಗೆಯ ಹೊಸ ಸಂಸ್ಕೃತಿ, ಸಂಪ್ರದಾಯಗಳನ್ನು ಪರಿಚಯ ಮಾಡಿಕೊಳ್ಳಬಹುದು. ಇನ್ನು ಮದುವೆ ವಿಚಾರವೂ ಇದಕ್ಕೇನು ಹೊರತಾದುದಲ್ಲ. ಭಾರತದಲ್ಲಿ ವಿವಿಧ ಜಾತಿ, ಧರ್ಮಗಳು ಹಾಗೂ ಬುಡಕಟ್ಟು ಸಮುದಾಯಗಳು ಇರುವುದರಿಂದ ಅವರೆಲ್ಲರ ಸಂಪ್ರದಾಯಗಳು ಸಹ ವಿಭಿನ್ನವಾಗಿರುವುದು ಸಹಜ. ಅಲ್ಲದೆ ಇದರೊಂದಿಗೆ ದೇಶದ ಕೆಲವು ಪ್ರದೇಶಗಳಲ್ಲಿ ಹಲವು ವಿಚಿತ್ರ ವಿವಾಹ ಪದ್ಧತಿಗಳಿದ್ದು, ಇಂದಿಗೂ ಅದನ್ನು ಅನುಸರಿಸಲಾಗುತ್ತಿದೆ. ಅಂತೆಯೇ ಇಲ್ಲೊಂದು ರಾಜ್ಯದಲ್ಲಿ ಮದುವೆ ವಿಚಾರವಾಗಿ ಇರುವ ಸಂಪ್ರದಾಯವನ್ನೇನಾದ್ರೂ ನೀವು ನೋಡಿಬಿಟ್ರೆ ಆಶ್ಚರ್ಯ ಪಡ್ತೀರಾ! ಇಂದಿಗೂ ಇಂತಹ ಪದ್ಧತಿಗಳು ಇವೆಯಲ್ಲಾ ಎಂದು ಶಾಕ್ ಕೂಡ ಆಗ್ತೀರಾ.

ಹೌದು, ಇಲ್ಲಿನ ಮದುವೆ ಸಂಪ್ರದಾಯದ ಬಗ್ಗೆ ಕೇಳಿದ್ರೆ ನೀವು ಒಂದು ಸಲ ಕಸಿವಿಸಿಯಾಗೋದು ಗ್ಯಾರಂಟಿ. ಯಾಕೆಂದರೆ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಗ್ರಾಮ ಒಂದರಲ್ಲಿ ಕುಟುಂಬದಲ್ಲಿರುವ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆ ಯಾಗುತ್ತಾರೆ! ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ರೀತಿಯ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು ಆಚರಣೆಯಲ್ಲಿವೆ. ಅದರಲ್ಲೂ ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಗಾಬರಿ ಮೂಡಿಸುತ್ತೆ.ಇಲ್ಲಿ ಈ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇದನ್ನು ‘ಘೋಟುಲ್’ ಆಚರಣೆ ಎಂದು ಕರೆಯಲಾಗುತ್ತದೆ.

ಜನಪ್ರಿಯ ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ಪತ್ನಿ ದ್ರೌಪದಿ ಮತ್ತು ತಾಯಿ ಕುಂತಿಯೊಂದಿಗೆ ಮಹಾಭಾರತದ ಅವಧಿಯಲ್ಲಿ ಕಿನ್ನೌರ್ ಜಿಲ್ಲೆಯ ಗುಹೆ ಗಳಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ಈ ಸಂಪ್ರದಾಯದ ಪ್ರಕಾರ, ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ. ಸಹೋದರರಲ್ಲಿ ದೊಡ್ಡಣ್ಣ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೋಡಿಕೊಳ್ಳುತ್ತಾನೆ. ಆ ಒಂದು ಹುಡುಗಿ ಇರುವ ಎಲ್ಲಾ ಸಹೋದರರನ್ನು ಮದುವೆ ಆಗುತ್ತಾಳೆ. ಅಲ್ಲದೆ ಹೆಂಡತಿಯೊಂದಿಗೆ ಯಾರು ಕೋಣೆಯಲ್ಲಿ ಮಲಗಬೇಕು ಎಂಬುದನ್ನು ಸಹೋದರರೇ ನಿರ್ಧರಿಸುತ್ತಾರೆ. ಮತ್ತು ಸಹೋದರರಲ್ಲಿ ಯಾರಿಗೆ ಮಗುವಾದರೂ ತಮ್ಮದೇ ಮಗುವಿನಂತೆ ಸಂಭ್ರಮಿಸುತ್ತಾರೆ ಎಂದು ತಿಳಿದುಬಂದಿದೆ.

ಟಿಬೆಟ್​ನಲ್ಲೂ ಕೂಡ ಬಹಳ ವರ್ಷಗಳಿಂದ ಇಂಥಾ ವಿವಾಹ ಪದ್ಧತಿಯೊಂದು ಜಾರಿಯಲ್ಲಿದೆ. ಟಿಬೆಟಿಯನ್​ ಕುಟುಂಬದಲ್ಲಿ ಕನಿಷ್ಠ ಒಬ್ಬರಾದಾರು ಸನ್ಯಾಸತ್ವ ಅಂದ್ರೆ ಬೌದ್ಧ ಧರ್ಮದ ಕೊನೆಯ ಹಂತಕ್ಕೆ ಹೋಗುತ್ತಲೇ ಇರುತ್ತಾರೆ. ಇಲ್ಲಿಯ ಮದುವೆಯನ್ನು ಪಾಲಿಯಾಂಡ್ರಿ ವಿವಾಹ ಎಂದು ಹೇಳಲಾಗುತ್ತದೆ. ಸಹೋದರರೆಲ್ಲಾ ಒಂದು ಹುಡುಗಿಯನ್ನು ಮದುವೆಯಾಗುವ ವಿಚಿತ್ರ ಸಂಪ್ರದಾಯವಿದು. ಇದನ್ನೇ ಹಿಮಾಚಲ ಪ್ರದೇಶದಲ್ಲಿ ಅನುಸರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.