ಇಲ್ಲಿದೆ ನೋಡಿ ಜಗತ್ತಿನ ಅತೀ ಚಿಕ್ಕ ಕಾರು! 1 ಲೀಟರ್​​ಗೆ​ 42ಕಿಮೀ ಮೈಲೇಜ್​ ಕೊಡೊ ಈ ಕಾರಲ್ಲಿ ಕೂತ್ಕೊಂಡು ಹೋಗ್ಬೋದು, ಇಲ್ಲ ಅದ್ನ ಎತ್ಕೊಂಡು ಹೋಗ್ಬೋದು!

ಆ ಒಂದು ಕಾರು ಒಂದು ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 42 ಕಿ.ಮೀಟರ್ ಮೈಲೇಜ್ ಕೊಡುತ್ತೆ! ಅಲ್ಲದೆ ಈ ಕಾರು ಕೇವಲ 134 ಸೆಂ ಉದ್ದ, 98 ಸೆಂ ಅಗಲ ಇದ್ದು, ಅದರ ಎತ್ತರ ಕೇವಲ 100 ಸೆಂ.ನಷ್ಟು ಇದೆ. ಆದ್ರೆ ಇದರ ರೇಟು ಮಾತ್ರ 50ಲಕ್ಷ ದಿಂದ 80ಲಕ್ಷದ ವರೆಗಿದೆ. ಇಷ್ಟಿಷ್ಪೇ ಉದ್ದ ಇದ್ದು, ಇಷ್ಟೊಂದು ರೇಟ್ ಹೊಂದಿರುವ ಈ ಕಾರು ನಿಜಕ್ಕೂ ಕುತೂಹಲ ಹುಟ್ಟಿಸುತ್ತದೆ ಅಲ್ಲವೇ?

ಕಾರುಗಳಂದ್ರೆ ಹೆಚ್ಚಿನವರಿಗೆ ಏನೋ ಒಂದು ಕ್ರೇಜ್. ಅದರಲ್ಲೂ ಈಗಂತೂ ತರ ತರಹದ ದುಬಾರಿ ಬೆಲೆಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದು ಎಷ್ಟು ದುಬಾರಿಯಾದ್ರೂ ಆ ಕಾರನ್ನು ಕೊಳ್ಳುವವರಿದ್ದಾರೆ. ಅಲ್ಲದೆ ಅವುಗಳ ಪೀಚರ್ ಕೂಡ ಹಾಗೆಯೇ ಇರುತ್ತದೆ. ಆದರೆ ಇಂತಹ ದುಬಾರಿ ಕಾರುಗಳ ನಡುವೆ ಇದೀಗ ಜಗತ್ತಿನ ಅತ್ಯಂತ ಚಿಕ್ಕ ಕಾರೊಂದು ಭಾರೀ ಸದ್ದು ಮಾಡುತ್ತಿದೆ. ಈ ಕಾರಿನ ಗಾತ್ರ ನೋಡಿ ಜನರು ಗೇಲಿ ಮಾಡುತ್ತಿದ್ದಾರಂತೆ. ಹಾಗಿದ್ರೆ ಇದ್ಯಾವ್ವುದಪ್ಪಾ ಹೊಸ ಕಾರು ಅಂತ ಯೋಚಿಸ್ತಿದೀರಾ? ಈ ಸ್ಟೋರಿ ನೋಡಿ. ಜಗತ್ತಿನ ಆ ಅತೀ ಚಿಕ್ಕ ಕಾರಿನ ಬಗ್ಗೆ ನಾವು ನಿಮಗೆ ತಿಳಿಸಿಕೊಡ್ತೀವಿ.

ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಕಡಿಮೆ ಪೆಟ್ರೋಲ್ ನಲ್ಲಿ ಅಧಿಕ ಮೈಲೇಜ್​ ನೀಡುವ ಈ ವಿಶಿಷ್ಟ ಕಾರಿನ ಹೆಸರು ಪೀಲ್ ಪಿ50. ಇದು ಕೇವಲ 134 ಸೆಂ ಉದ್ದ, 98 ಸೆಂ ಅಗಲ, ಹಾಗೂ ಅದರ ಎತ್ತರ ಕೇವಲ 100 ಸೆಂಟಿಮೀಟರ್ ಇದೆ. ಇದರ ಮಾಲೀಕನ ಹೆಸರು ಅಲೆಕ್ಸ್ ಆರ್ಚಿನ್. ಈ ಅಲೆಕ್ಸ್ ಆರ್ಚಿನ್ ಯುಕೆಯ ಸಸೆಕ್ಸ್ನಲ್ಲಿ ಪ್ರತಿದಿನ ಈ ಕಾರನ್ನು ಓಡಿಸುತ್ತಾರೆ. ಆತ ಸುಮಾರು 6 ಅಡಿ ಎತ್ತರವಿದ್ದಾನೆ. ಹಾಗಾಗಿ ಈ ಎತ್ತರದ ಮನುಷ್ಯ, ಆ ಸಣ್ಣ ಕಾರು ಹತ್ತಿ ಇಳಿಯುವುದನ್ನು ಕಂಡ ಜನರು ದಂಗಾಗಿದ್ದಾರೆ.

ಆದರೆ ಅಲೆಕ್ಸ್ ಮಾತ್ರ ಈ ಯಾವುದರ ಕುರಿತು ತಲೆಕೆಡಿಸಿಕೊಂಡಿಲ್ಲ. ಅವರು ತಮ್ಮ ಈ ಅತೀ ಚಿಕ್ಕ ಕಾರಿನ ಮೈಲೇಜ್ನಿಂದ ಸಾಕಷ್ಟು ಸಂತೋಷವಾಗಿದ್ದಾರೆ. ಯಾಕಂದ್ರೆ ಈ ಕಾರಿನಲ್ಲಿ 4.5 ಅಶ್ವಶಕ್ತಿಯ ಎಂಜಿನ್ ಅಳವಡಿಸಲಾಗಿದ್ದು, ಒಂದು ಲೀಟರ್ ಪೆಟ್ರೋಲ್ ನಲ್ಲಿ 42 ಕಿ.ಮೀ.ವರೆಗೆ ಓಡಿಸಬಹುದಾಗಿದೆ. ಪೀಲ್ ಇಂಜಿನಿಯರಿಂಗ್ ಎಂಬ ಕಂಪನಿ ಈ ಕಾರನ್ನು ತಯಾರಿಸುತ್ತದೆ. ಮೊದಲು ಈ ಕಾರನ್ನು 1962 ಮತ್ತು 1965 ರ ನಡುವೆ ತಯಾರಿಸಲಾಗಿತ್ತು. ನಂತರ ಅದನ್ನು 2010 ರಿಂದ ಅದರ ಉತ್ಪಾದನೆಯನ್ನು ಪುನರಾರಂಭಿಸಲಾಗಿದೆ.

2010 ರಲ್ಲಿ, ಈ ಕಾರನ್ನು ವಿಶ್ವದ ಅತ್ಯಂತ ಚಿಕ್ಕ ಕಾರು ಎಂದು ಘೋಷಿಸಲಾಯಿತು ಮತ್ತು ಕಾರಿನ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ನಮೂದಿಸಲಾಗಿದೆ. ಆಕ್ಸೆಲ್ ಅವರು ಯಾವುದೇ ರಸ್ತೆಯಲ್ಲಿ ಹೋದರೂ ಜನರು ಅವರತ್ತ ತಿರುಗುತ್ತಾರೆ. ಈ ಕಾರು ಗಾತ್ರದಲ್ಲಿ ತುಂಬಾ ಚಿಕ್ಕದಾದರೂ, ಇದರ ಬೆಲೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಹೌದು, ಹೊಸ ಪಿ50 ಬೆಲೆ 84 ಲಕ್ಷ ರೂ.ಗಿಂತ ಹೆಚ್ಚಿದೆ. ಆದರೆ ಇದರ ಗರಿಷ್ಠ ವೇಗ ಗಂಟೆಗೆ 37 ಕಿಮೀ ಇದೆ. ಈ ವೇಗದಲ್ಲಿ ಅಲೆಕ್ಸ್ ಕಳೆದ ವರ್ಷವಷ್ಟೇ ಈ ಕಾರಿನೊಂದಿಗೆ ಇಡೀ ಬ್ರಿಟನ್ನಲ್ಲಿ ಪ್ರಯಾಣಿಸಿದ್ದಾರೆ. ಈ ಹೊಸ ಕಾರಿನ ಬೆಲೆ ಹೆಚ್ಚಿರುವ ಕಾರಣ ಅಲೆಕ್ಸ್, ಸೆಕೆಂಡ್ ಹ್ಯಾಂಡ್ ಪಿ50 ಖರೀದಿಸಿರುವುದಾಗಿ ಕೂಡ ಹೇಳಿದ್ದಾರೆ. ಅಲ್ಲದೆ ಇದೀಗ ಅಲೆಕ್ಸ್ ಅವರು ಈ ಕಾರಲ್ಲಿ ಕೂತು ತಿರುಗಾಡೋ, ಅದನ್ನು ಎಳೆದು ಕೊಂಡು ಓಡಾಡೋ ಫೋಟೋಗಳು ಸಾಕಷ್ಟು ವೈರಲ್ ಕೂಡ ಆಗಿದೆ.

Leave A Reply

Your email address will not be published.