ನಾಯಿ ಜೊತೆ ವಾಕಿಂಗ್ ಹೋದಾಕೆ ಗಾಳಿಯಲ್ಲಿ ಮಾಯ! ಪೋಲೀಸರಿಂತೂ ದೊಡ್ಡ ತಲೆನೋವಾಗಿ ಕಾಡುತ್ತಿದೆ ಈ ಅದೃಶ್ಯದ ಹಿಂದಿನ ನಿಗೂಢ ರಹಸ್ಯ!
ಬ್ರಿಟನ್ನ ದೇಶದ ಆ ಮಹಿಳೆ ತನ್ನ ನಾಯಿಯನ್ನು ನದಿ ದಂಡೆಯೊಂದರ ಮೇಲೆ ವಾಕಿಂಗ್ಗೆ ಕರೆದೊಯ್ದಿದ್ದಾಳೆ. ಆದರೆ ಹೋದ ಕೆಲಸಮಯದಲ್ಲೇ ಆಕೆ ಗಾಳಿಯಲ್ಲಿ ಮಾಯವಾಗಿ ಕಣ್ಮರೆಯಾಗಿದ್ದಾಳೆ! ಈ ವಿಚಾರವಾಗಿ ಸುದ್ದಿಯೊಂದು ಇಡೀ ಆ ಪ್ರದೇಶದಲ್ಲಿ ಹಬ್ಬಿಕೊಂಡಿದ್ದು, ಅಸಾಧಾರಣ ರೀತಿಯಲ್ಲಿ ಕಣ್ಮರೆಯಾಗಿರು ಮಹಿಳೆಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ಕೂಡ ನಿರತರಾಗಿದ್ದಾರೆ.
ಪ್ರಕೃತಿಯಲ್ಲಿ ಆಗುವ ಕೌತುಕಗಳನ್ನು ಬಲ್ಲವರಾರು ಅಲ್ಲವೇ? ಈ ಲೋಕದಲ್ಲಿ ನಡೆಯುವಂತಹ ನಿಗೂಢ ಗಟನೆಗಳಿಗೆ ಕೊನೆಯೇ ಇಲ್ಲ ಎಂದೇ ಹೇಳಬಹುದು. ಕೆಲವೊಮ್ಮೆ ಈ ನಿಗೂಢತೆಗಳನ್ನು ಭೇಧಿಸಲು ವಿಜ್ಞಾನಕ್ಕೂ ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ವೈಜ್ಞಾನಿಕ ಲೋಕಕ್ಕೂ ಇವು ಸವಾಲು ಹಾಕಿ, ಇಂತಹ ಇರುವಿಕೆಗಳಿರುವುದು ಸತ್ಯ ಎಂಬುದನ್ನು ಸಾಬೀತುಪಡಿಸುತ್ತವೆ. ಸದ್ಯ ಇಂತಹುದೇ ಒಂದು ಘಟನೆ ಬ್ರಿಟನಲ್ಲಿ ನಡೆದಿದ್ದು, ನದಿ ದಂಡೆಯ ಮೇಲೆ ವಾಕಿಂಗ್ ಹೋದ ಸುಮಾರು 45ಪ್ರಾಯದ ಮಹಿಳೆಯೊಬ್ಬಳು ಗಾಳಿಯಲ್ಲಿ ಮಾಯವಾಗಿಬಿಟ್ಟಿದಾಳೆ! ಸದ್ಯ ಆಕೆಯ ಹುಡುಕಾಟದ ಕಾರ್ಯಾಚರಣೆ ನಡೆಯುತ್ತಿದ್ದು, ಕುತೂಹಲಕಾರಿ ಅಂಶಗಳು ಹೊರಬೀಳುತ್ತಿವೆ.
ಹೌದು, ಬ್ರಿಟನ್ ಮೂಲದ ನಿಕೋಲಾ ಎಂಬಾಕೆ, ತಮ್ಮಿಬ್ಬರ ಮಕ್ಕಳನ್ನು ಶಾಲೆಗೆ ಬಿಟ್ಟು ನಾಯಿಯೊಂದಿಗೆ ವಾಕಿಂಗ್ ಮಾಡುತ್ತ ಸಾಗಿದ್ದಾರೆ. ಈ ಸಂದರ್ಭದಲ್ಲಿ ನಿಕೋಲಾ ಮಾತ್ರ ಕಣ್ಮರೆಯಾಗಿದ್ದು ಅವರ ನಾಯಿ ನದಿ ತಟದಲ್ಲಿ ಪತ್ತೆಯಾಗಿದೆ. ನಿಕೋಲಾ ಕಣ್ಮರೆಯಾಗಿರುವುದನ್ನು ಮನಗಂಡ ಆಕೆಯ ಪಾರ್ಟ್ನರ್ ಹಾಗೂ ಸುತ್ತಮುತ್ತಲಿನವರು, ಆಕೆ ಗಾಳಿಯಲ್ಲಿ ಮರೆಯಾಗಿದ್ದಾರೆ ಹೇಳುತ್ತಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಪೊಲೀಸರು ಮಾತ್ರ ಇದು ಊಹಾಪೋಹವಾದ ವಿಚಾರ ಎಂದೆದ್ದಾರೆ. ಅಲ್ಲದೆ ಕೆಲವು ಪತ್ತೆದಾರರು, ಇದೆಲ್ಲಾ ಮೂಢನಂಬಿಕೆ ಹಾಗೂ ನಿಕೋಲಾರನ್ನು ಅಪಹರಿಸಿರಬಹುದು ಇಲ್ಲವೇ ಆಕೆ ನದಿಯಲ್ಲಿ ಬಿದ್ದಿರಬಹುದು ಎಂದು ತಿಳಿಸಿದ್ದಾರೆ.
ಸದ್ಯ ಪೊಲೀಸರು ನದಿ ತಟ ಹಾಗೂ ನದಿಯಲ್ಲಿ ಶೋಧನಾ ಕಾರ್ಯ ಆರಂಭಿಸಿದ್ದಾರೆ. ಆದರೆ ಇದನ್ನು ಒಪ್ಪದ ನಿಕೋಲಾ ಕುಟುಂಬಸ್ಥರು ಹಾಗೂ ಗೆಳೆಯರು ಪೊಲೀಸರು ಆಕೆ ನದಿಗೆ ಬಿದ್ದಿದ್ದಾರೆ ಎಂದು ಶೋಧಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ನದಿ ತಟದಲ್ಲಿ ಯಾವುದೇ ಪಾದದ ಗುರುತುಗಳಿಲ್ಲ, ಹೀಗಿರುವಾಗ ನಿಕೋಲ ನದಿಯಲ್ಲಿ ಬಿದ್ದಿದ್ದಾರೆ ಎನ್ನುವುದಕ್ಕೆ ಏನು ಸಾಕ್ಷಿ ಎಂದು ಶೋಧನಾ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನದಿ ತಟದಲ್ಲಿ ಯಾವುದೇ ಪಾದದ ಗುರುತುಗಳಿಲ್ಲ, ಹೀಗಿರುವಾಗ ನಿಕೋಲ ನದಿಯಲ್ಲಿ ಬಿದ್ದಿದ್ದಾರೆ ಎನ್ನುವದು ಸುಳ್ಳೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಕೆ ಗಾಳಿಯಲ್ಲಿ ಮರೆಯಾದರು ಎಂಬುದಕ್ಕೆ ಯಾವುದೇ ಪುರಾವೆಗಳಲಿಲ್ಲ, ಅದೆಲ್ಲ ಗಾಳಿ ಸುದ್ದಿ ಎಂದು ತನಿಖಾ ಅಧಿಕಾರಿಗಳು ಹಾಗೂ ಪೊಲೀಸರು ಕೂಡ ಅವರ ಕುಟುಂಬದವರಿಗೆ ಮನವರಿಕೆ ಮಾಡುತ್ತಿದ್ದಾರೆ.
ಇನ್ನೂ ಆಕೆಯ ದೇಹ ದೊರಕದೇ ಇರುವುದರಿಂದ ಈ ನಿಗೂಢತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬಿದೆ. ಇದರೊಂದಿಗೆ ಅಡಮಾನ ಸಲಹೆಗಾರರಾಗಿ (mortgage adviser) ಕಾರ್ಯನಿರ್ವಹಿಸುತ್ತಿದ್ದ ನಿಕೋಲಾ ಯಾವಾಗಲೂ ಇಲ್ಲಿಯೇ ವಾಕಿಂಗ್ ಮಾಡಲು ಬರುತ್ತಿದ್ದರು. ವಾಯುವ್ಯ ಲಂಕಾಷೈರ್ ಹಳ್ಳಿಯಲ್ಲಿನ ಶಾಲೆಗೆ ಇಬ್ಬರು ಮಕ್ಕಳನ್ನು ಬಿಟ್ಟುಬಂದ ನಂತರ ನಾಯಿಯೊಂದಿಗೆ ನದಿ ತಟದಲ್ಲಿ ವಾಕಿಂಗ್ ಮಾಡುವುದು ನಿಕೋಲಾ ದೈನಂದಿನ ದಿನಚರಿಯಾಗಿತ್ತೆಂದು ಕುಟುಂಬಸ್ಥರು ಕೂಡ ತಿಳಿಸಿದ್ದಾರೆ. ಅಲ್ಲದೆ ಹತ್ತು ದಿನಗಳ ಹಿಂದೆ ನದಿ ತಟದಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದುದನ್ನು ಹಲವರು ನೋಡಿದವರಿದ್ದಾರೆ ಎಂಬುದು ಪೊಲೀಸ್ ಹೇಳಿದ್ದಾರೆ.
ಆಕೆ ನಿಗೂಢವಾಗಿ ನಾಪತ್ತೆಯಾಗಿರುವುದು ಪತ್ರಿಕೆಗಳಲ್ಲಿ ಸುದ್ದಿಯಾದ ನಂತರ, ನಿಕೋಲಾ ನದಿಗೆ ಕಾಲು ಜಾರಿ ಬಿದ್ದಿರುವ ಶಂಕೆ ಇದೆ ಎಂದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ನಿಕೋಲಾ ಯಾವುದೋ ದುಃಖದಿಂದ ನದಿಗೆ ಬಿದ್ದಿರುವುದು ನಮ್ಮ ಊಹೆಯಾಗಿದೆ ಹೊರತು, ಬೇರಾರೂ ಆಕೆಯನ್ನು ನದಿಗೆ ತಳ್ಳಿ, ಇಲ್ಲಿ ಯಾವುದೇ ಅಪರಾಧ ಕೃತ್ಯ ಜರುಗಿಲ್ಲ ಎಂಬುದು ನಮ್ಮ ಆಲೋಚನೆಯಾಗಿದೆ, ಆದರೂ ನಿಕೋಲಾ ಪ್ರಕರಣ ನಿಗೂಢವಾಗಿದ್ದು ಕಾಣೆಯಾಗಿರುವ ನಿಕೋಲಾರನ್ನು ಶೀಘ್ರವೇ ಪತ್ತೆಹಚ್ಚುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಆಕೆಯ ತಂದೆ 73ರ ಹರೆಯದ ಅರ್ನೆಸ್ಟ್ ಹೇಳುವಂತೆ ತಮ್ಮ ಮಗಳು ನದಿಗೆ ಬಿದ್ದಿರುವುದಾಗಿ ಹೇಳಲು ಯಾವುದೇ ಆಧಾರಗಳಿಲ್ಲ, ಯಾರೋ ಮಗಳನ್ನು ಅಪಹರಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಕ್ಕಳು ಅವರ ತಾಯಿ ಮನೆಗೆ ಮರಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಅರ್ನೆಸ್ಟ್ ಹೇಳಿದ್ದಾರೆ. ಸೋಮವಾರ, ವಿಶೇಷ ರಕ್ಷಣಾ ತಂಡ ನೀರೊಳಗೆ ನಿಕೋಲಾರನ್ನು ಹುಡುಕಾಡಿದೆ. ಸ್ಪೆಷಲಿಸ್ಟ್ ಗ್ರೂಪ್ ಇಂಟರ್ನ್ಯಾಶನಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೋರೆನ್ಸಿಕ್ ತಜ್ಞ ಪೀಟರ್ ಫಾಲ್ಡಿಂಗ್, ತಮ್ಮ ಸಂಸ್ಥೆಯು ಬಳಸಿದ ಹೈಟೆಕ್ ಸೋನಾರ್ ಬಳಸುತ್ತಾರೆ. ಇದು ನದಿಯ ತಳದಲ್ಲಿ ಬಿದ್ದಿರುವ ಪ್ರತಿಯೊಂದು ಕೋಲು ಮತ್ತು ಕಲ್ಲನ್ನು ನೋಡುವ ಸಾಮರ್ಥ್ಯವನ್ನು ಹೊಂದಿದೆ . ಇದರಿಂದ ನಿಕೋಲಾ ನಿಜವಾಗಿಯೂ ನದಿಯಲ್ಲಿ ಬಿದ್ದಿದ್ದಾರೆಯೇ ಅಥವಾ ಬೇರೆ ಏನಾದರೂ ನಡೆದಿದಿಯೇ ಎನ್ನುವುದನ್ನು ಖಚಿಪಡಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.