ಭಾರತದಲ್ಲಿ ಲಾಂಚ್ ಆಯ್ತು Moto E13 ಸ್ಮಾರ್ಟ್ ಫೋನ್! ಕೇವಲ 7 ಸಾವಿರ ಬೇಸಿಕ್ ಪ್ರೈಸ್ ಹೊಂದಿರೋ ಈ ಫೋನಿನ ಫೀಚರ್ಸ್ ಏನು ಗೊತ್ತಾ!
ಭಾರತದಲ್ಲೀಗ ಹೊಸ ಸ್ಮಾರ್ಟ್ ಫೋನ್ ಗಳ ಪರ್ವ ಶುರುವಾಗಿದೆ. ಒಂದೊಂದು ಕಂಪೆನಿಯು ತನ್ನ ಹೊಸ ಹೊಸ ಮೊಬೈಲ್ ಫೋನುಗಳನ್ನು ಬಿಡುಗಡೆ ಮಾಡುತ್ತಿರುವ ನಡುವೆಯೇ ಮೊಟೋ ಕೂಡ ತನ್ನ ಹೊಸ ವಿನ್ಯಾಸದ Moto E13 ಸ್ಮಾರ್ಟ್ಫೋನನ್ನು ಭಾರತದಲ್ಲೀಗ ಬಿಡುಗಡೆ ಮಾಡಿದೆ. ಶಕ್ತಿಯುತ ಪ್ರೊಸೆಸರ್ ನೊಂದಿಗೆ ದೀರ್ಘಕಾಲೀನ ಬ್ಯಾಟರಿಯೊಂದಿಗೆ ಈ ಫೋನ್ ಬರುತ್ತಿದೆ. ಹಾಗಿದ್ರೆ ಈ ಹೊಸ ಪೋನ್ ಯಾವೆಲ್ಲಾ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
Moto E13 ಫೋನ್ 4GB RAM ಅನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಸಹಾಯದಿಂದ ಸ್ಟೋರೇಜ್ ಅನ್ನು ಹೆಚ್ಚಿಸುವ ಆಯ್ಕೆಯನ್ನು ಕೂಡಾ ನೀಡಲಾಗಿದೆ. ಕಂಪನಿಯು ಪ್ರೀಮಿಯಂ ವಿನ್ಯಾಸದೊಂದಿಗೆ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಇದು HD+ IPS LCD ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 6.5 ಇಂಚಿನ HD+IPS LCD ಡಿಸ್ಪ್ಲೇಯನ್ನು ಹೊಂದಿದೆ. ಫೋನ್ ಸೊಗಸಾದ ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ಬರುತ್ತದೆ. ಇದು Android13 ಆಧಾರಿತ Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದು ಬಂದಿದೆ.
10W ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುವ ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಚಾರ್ಜ್ ಮಾಡಲು ಫೋನ್‌ನಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ನೀಡಲಾಗಿದೆ. ಇದು 8.5 ಮಿಮೀ ದಪ್ಪ ಮತ್ತು 180 ಗ್ರಾಂ ತೂಕವಿದೆ. ಸಂಪರ್ಕಕ್ಕಾಗಿ, ಫೋನ್ ಡ್ಯುಯಲ್ ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ 5.0 ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಉತ್ತಮ ಕಾರ್ಯಕ್ಷಮತೆಗಾಗಿ, UNISOC T606 ಪ್ರೊಸೆಸರ್ ಅನ್ನು ನೀಡಲಾಗಿದೆ. ಈ Motorola ಫೋನ್ 64GB ಸ್ಟೋರೇಜ್ ಅನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಸಹಾಯದಿಂದ 1TBಗೆ ಹೆಚ್ಚಿಸಬಹುದು.
ಇನ್ನು ಇದರ ಕ್ಯಾಮೆರಾ ಸೆಟೆಪ್ ಬಗ್ಗೆ ನೋಡುವುದಾದರೆ,
ಫೋನ್ 13MP AI ರಿಯರ್ ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನಲ್ಲಿ ಸೆಲ್ಫಿ ಮತ್ತು ವೀಡಿಯೊ ಕಾಲ್ ಗಾಗಿ 5MP ಫ್ರಂಟ್ ಕ್ಯಾಮೆರಾವನ್ನು ಒದಗಿಸಲಾಗಿದೆ. Moto E13 ಅನ್ನು ಅರೋರಾ ಗ್ರೀನ್, ಕಾಸ್ಮಿಕ್ ಬ್ಲಾಕ್ ಮತ್ತು ಕ್ರೀಮ್ ವೈಟ್ ಹೀಗೆ ಮೂರು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಫೆಬ್ರವರಿ 15 ರಿಂದ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ. ಕಂಪನಿಯು ಇದನ್ನು 6,999 ರೂಪಾಯಿ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಇದು ಫೋನ್‌ನ 2GB RAM ರೂಪಾಂತರದ ಬೆಲೆಯಾಗಿದೆ. 4GB RAM ಹೊಂದಿರುವ ಫೋನ್ ಗೆ 7,999 ರೂ. ಪಾವತಿಸಬೇಕಾಗುತ್ತದೆ.
ಇನ್ನು ಸಂಕ್ಷಿಪ್ತವಾಗಿ ಇದರ ಫೀಚರ್ಸ್ ನೋಡೋದಾದ್ರೆ
1.5000mAh ಬ್ಯಾಟರಿ
- ಆಂಡ್ರಾಯ್ಡ್ 12 ಓಎಸ್
- 10W ಚಾರ್ಜಿಂಗ್ ಬೆಂಬಲ
- UNISOC T606 ಪ್ರೊಸೆಸರ್
- 6.5 ಇಂಚಿನ ಡಿಸ್ಪ್ಲೇ ಒಳಗೊಂಡಿದೆ.