ಮದುವೆ ಸಮಾರಂಭದಲ್ಲಿ ಹಾಡಿನ ವಿಚಾರಕ್ಕೆ ಶುರುವಾಯ್ತು ಜಗಳ! ಕೊನೆಗೆ ಗುಂಡು ಹಾರಿ ಅಂತ್ಯ ಕಂಡಿತು!

ಮದುವೆ ಸಮಾರಂಭ ಎಂದರೆ ಈಗಿನ ಕಾಲದಲ್ಲಂತೂ ಬಹಳ ಗೌಜಿಯಾಗಿ ಅಂದರೆ ತುಂಬಾ ಅದ್ಧೂರಿಯಾಗೇ ನಡೆಯುತ್ತೆ. ಪಾರ್ಟಿ, ಡಿನ್ನರ್ ಎಂದು ಇವೆಲ್ಲವೂ ಆ ವಿವಾಹ ಸಮಾರಂಭಗಳಿಗೆ ಇನ್ನೂ ಕಿಕ್ ನೀಡುತ್ತವೆ. ಕೆಲವರು ಆರ್ಕೇಷ್ಟ್ರಾಗಳನ್ನು, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಭ್ರಮ ಹೆಚ್ಚು ಕಳೆಗಟ್ಟುವಂತೆ ಮಾಡುತ್ತಾರೆ. ಒಟ್ನಲ್ಲಿ ಇವೆಲ್ಲವನ್ನೂ ಏರ್ಪಡಿಸೋದು ಎಲ್ಲರೂ ಎಂಜಾಯ್ ಮಾಡಲಿ, ಅಪರೂಪಕ್ಕೆ ನಡೆವ ಇಂತಹ ಸಮಾರಂಭಗಳು ಸದಾ ನೆನಪಿನಲ್ಲಿರಲಿ ಎಂದು. ಆದರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ಏರ್ಪಡಿಸಿದ್ದ ಒಂದು ಆರ್ಕೇಷ್ಟ್ರಾವು ಸಾವಿನ ಮೂಲಕ ಅಂತ್ಯವನ್ನು ಕಂಡು, ಎಲ್ಲಾ ಖುಷಿಯ ಕ್ಷಣಗಳನ್ನು ನಾಶ ಮಾಡಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು, ಹಾಡನ್ನು ಆಯ್ಕೆ ಮಾಡುವ ವಿಚಾರದಲ್ಲಿ ರೈಲ್ವೆ ಇಲಾಖೆ ಉದ್ಯೋಗಿಯೊಬ್ಬರನ್ನು ದುಷ್ಕರ್ಮಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಿಹಾರದ ಅರ್ರಾ ಜಿಲ್ಲೆಯಲ್ಲಿ ಸೋಮವಾರ ವಿವಾಹದ ಕಾರ್ಯಕ್ರಮವೊಂದು ನಡೆದಿದೆ. ಈ ಸಮಾರಂಭದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮವನ್ನೂ ಆಯೋಜನೆ ಮಾಡಿದ್ದಾರೆ. ಈ ಸಮಯದಲ್ಲಿ ಸಮೀಪದ ಹಳ್ಳಿಯ ಕೆಲವು ಕಿಡಿಗೇಡಿಗಳು ಸ್ಥಳಕ್ಕೆ ಪ್ರವೇಶಿಸಿ ಅವರಿಗೆ ಬೇಕಾದ ಹಾಡುಗಳನ್ನು ನುಡಿಸುವಂತೆ ಒತ್ತಾಯಿಸಿದ್ದಾರೆ.

ಈ ಸಮಯದಲ್ಲಿ ಅಭಿಷೇಕ್ ಕುಮಾರ್ ಸಿಂಗ್ ಎನ್ನುವಾತ ಮತ್ತು ಅವರ ಕುಟುಂಬ ಸದಸ್ಯರು ದುಷ್ಕರ್ಮಿಗಳನ್ನು ಸ್ಥಳದಿಂದ ಹೊರ ಹೋಗುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿರೋದ ತೋರಿದ ಅವರು ಮಾತುಗಳು ವಿಕೋಪಕ್ಕೆ ಹೋಗುವಂತೆ ಮಾಡಿದ್ದಾರೆ. ಕೊನೆಗೆ ಹೊಡೆದಾಟ ನಡೆದಿದೆ. ಈ ನಡುವೆ ದುಷ್ಕರ್ಮಿಗಳು ಬಂದೂಕು ತೆಗೆದುಕೊಂಡು ಅಭಿಷೇಕ್‌ಗೆ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಅಭಿಷೇಕ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಅಭಿಷೇಕ್, ಉತ್ತರ ಪ್ರದೇಶದ ಪಂಡಿತ್ ದೀನದಯಾಳ್ ಉಪಾಧ್ಯಾಯ ರೈಲ್ವೆ ಜಂಕ್ಷನ್‌ನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆತನ ಕಣ್ಣಿನ ಎಡಭಾಗದಲ್ಲಿ ಗುಂಡಿನ ದಾಳಿಗೆ ಸಂಬಂಧಿಸಿದ ಗುರುತುಗಳು ಪತ್ತೆಯಾಗಿವೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಸಿಂಗ್ ಅವರ ದೇಹವನ್ನು ಅರ್ರಾದ ಸದರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ನಲ್ಲಿ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಿದ್ದ ಕಾರ್ಯಕ್ರಮ ದುರಂತದಲ್ಲಿ ಅಂತ್ಯಕಂಡಿದ್ದು ಮಾತ್ರ ದುರದೃಷ್ಟಕರ!

Leave A Reply

Your email address will not be published.