ಈ ದೇಶದ ಜನರು ರೆಡ್ ಇಂಕ್ ಕಂಡ್ರೆ ಹೌಹಾರುತ್ತಾರೆ: ಇದನ್ನಿಲ್ಲಿ ಬಳಸೋದೆ ಅಪರಾಧ! ಯಾಕೆ ಗೊತ್ತಾ? ಸತ್ಯ ಕೇಳಿದ್ರೆ ಬಿಚ್ಚಿ ಬೀಳ್ತೀರಿ!!
ನಾವೆಲ್ಲರೂ ಬಳಸುವ ರೆಡ್ ಇಂಕ್(Red Ink) ಕಂಡ್ರೆ ಈ ದೇಶದ ಜನ ಬೆಚ್ಚಿ ಬೀಳುತ್ತದೆ. ಕೆಂಪು ಇಂಕನ್ನು ನೋಡಿದ ಕೂಡಲೇ ಅವರು ಭಯೋತ್ಪಾದಕರನ್ನು ನೋಡಿದಂತೆ ಹೌಹಾರುತ್ತಾರೆ. ನೀವೇನಾದರು ಈ ದೇಶಕ್ಕೆ ಹೋದಾಗ ತಪ್ಪಿಯೂ ಕೂಡ ಇದನ್ನು ಬಳಸುವಂತಿಲ್ಲ! ಹಾಗಿದ್ರೆ ರೆಡ್ ಇಂಕ್ ಅಂದ್ರೆ ಇವರಿಗ್ಯಾಕೆ ಇಷ್ಟು ಭಯ? ಯಾವುದು ಆ ದೇಶ? ಇದರಿಂದ ಇಲ್ಲಿಯವರೆಗೆ ಆಗಿರೋ ಸಮಸ್ಯೆ ಏನು? ಆ ಕೆಂಪು ಶಾಯಿ ಇವರನ್ನೇಕೆ ಇಷ್ಟು ಭಯಭೀತರನ್ನಾಗಿ ಮಾಡಿದೆ ಗೊತ್ತಾ? ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ.
ನಾವೆಲ್ಲರೂ ಶಾಲಾ, ಕಾಲೇಜುಗಳಲ್ಲಿ ಓದು, ಬರಹವನ್ನು ಮಾಡುವಾಗ ಕಪ್ಪು, ನೀಲಿ ಹಾಗೂ ಕೆಲವೊಮ್ಮೆ ಹಸಿರು ಶಾಯಿ(ಇಂಕ್)ಯ ಪೆನ್ನನ್ನು ಬಳಸಿರ್ತೇವೆ. ಎಲ್ಲರೂ ಬಳಸುವುದೂ ಇದನ್ನೆ. ಅಪರೂಪಕ್ಕೆ ಎಂಬಂತೆ ಕೆಂಪು ಶಾಯಿ(ರೆಡ್ ಇಂಕ್) ಯನ್ನೂ ಬಳಸಿದ್ದುಂಟು. ಆದರೆ ಸಾಮಾನ್ಯವಾಗಿ ಶಿಕ್ಷಕರು, ಪ್ರಾಧ್ಯಾಪಕರುಗಳು ಇದನ್ನು ಹೆಚ್ಚು ಬಳಸುತ್ತಾರೆ. ಇನ್ನು ಕಛೇರಿಗಳಲ್ಲಿ, ಸರ್ಕಾರಿ ಆಫೀಸ್ ಗಳಲ್ಲಿ ಅಲ್ಲಿನ ಸಿಬ್ಬಂದಿಗಳು ಈ ರೆಡ್ ಇಂಕನ್ನು ಬಳಸುತ್ತಾರೆ. ಮಾಮೂಲಾಗಿ ಕಪ್ಪಕ್ಷರದ ನಡುವೆ ಈ ರೆಡ್ ಇಂಕ್ ಎದ್ದುಕಾಣುವುದರಿಂದ ಇಂತಹ ಕೆಲಸಗಳಿಗೆ ಇದು ಬಳಕೆಯಾಗೋದು ಸರ್ವೇ ಸಾಮಾನ್ಯ. ಇದೇನು ವಿಶೇಷವಾದದ್ದೇನು ಅಲ್ಲ. ಆದರೆ ದಕ್ಷಿಣ ಕೊರಿಯಾದ ಜನರಿಗೆ ಈ ರೆಡ್ ಇಂಕ್ ಕಂಡ್ರೆ ಆಗೋದಿಲ್ಲ!
ಹೌದು, ದಕ್ಷಿಣ ಕೊರಿಯಾದ ಜನರಲ್ಲಿ ರೆಡ್ ಇಂಕ್ ಬಗ್ಗೆ ಅನೇಕ ತರಹದ ಕಲ್ಪನೆಗಳಿವೆ. ಅದರ ಕುರಿತು ಮೂಡನಂಬಿಕೆಗಳಿಗೂ ಅವರಲ್ಲಿ ಆಸ್ಪದವಿದೆ. ದಕ್ಷಿಣ ಕೊರಿಯನ್ನರು ಕೆಂಪು ಶಾಯಿ ಬರವಣಿಗೆಯನ್ನು ತೆಗೆದುಕೊಳ್ಳುವುದಿಲ್ಲ. ಬಳಸುವುದೂ ಇಲ್ಲ. ಇದರಿಂದಾಗಿ ಆ ದೇಶದಲ್ಲಿ ಕೆಂಪು ಇಂಕ್ ಪೆನ್ ಸಿಗುವುದು ಕೂಡ ಕಷ್ಟ. ಇವರಿಗೆ ಈ ಇಂಕ್ ನೋಡಿದ್ರೆ ಭಯೋತ್ಪಾದಕರನ್ನು ನೋಡಿದಂತೆ ಆಗುತ್ತಂತೆ!
ಕೆಂಪು ಶಾಯಿಯಲ್ಲಿ ಬರೆಯುವುದನ್ನು ಇಷ್ಟಪಡದ ಇವರು ಆ ಕೆಂಪು ಬಣ್ಣವನ್ನು ಸಾವಿನ ಬಣ್ಣವೆಂದು ಪರಿಗಣಿಸುತ್ತಾರೆ. ಅಲ್ಲದೆ ಜೀವಂತ ವ್ಯಕ್ತಿಯ ಹೆಸರನ್ನು ಆ ಬಣ್ಣದಿಂದ ಬರೆದರೆ ಅವನ ಜೀವನದಲ್ಲಿ ಸಾವು ಅಥವಾ ಏನಾದರೂ ಕೆಟ್ಟದು ಸಂಭವಿಸುವುದು ನಿಘಂಟೆಂದು ಇವರು ನಂಬುತ್ತಾರೆ. ಆ ದೇಶದ ಶಿಕ್ಷಕರು ಕೂಡ, ತಮ್ಮ ವಿದ್ಯಾರ್ಥಿಗಳ ನೋಟ್ ಬುಕ್ ನೋಡಲು ರೆಡ್ ಇಂಕ್ ಬಳಸುವುದಿಲ್ಲ. ಅಧಿಕೃತ ಮುದ್ರೆಯನ್ನು ಹೊರತುಪಡಿಸಿ, ದಕ್ಷಿಣ ಕೊರಿಯಾದಲ್ಲಿ ಸತ್ತವರ ಹೆಸರನ್ನು ಬರೆಯಲು ಮಾತ್ರ ಕೆಂಪು ಶಾಯಿಯನ್ನು ಬಳಸಲಾಗುತ್ತದೆಯಂತೆ!
ಇನ್ನು ದಕ್ಷಿಣ ಕೊರಿಯಾದಲ್ಲಿ ಮನೆಗಳಲ್ಲಿ ಅಲಂಕಾರಕ್ಕೆಂದು ಚಿತ್ರಿ ಬಿಡಿಸಲು ಅಥವಾ ಇತರ ಉದ್ದೇಶಗಳಿಗಾಗಿ ಕೆಂಪು ಬಣ್ಣವನ್ನು ಬಳಸಲಾಗಿದ್ದರೂ, ಗೋಡೆಯಲ್ಲಿ ಏನಾದರೂ ಬರೆಯುವ ಸಲುವಾಗಿಯಂತೂ ಕೆಂಪು ಬಣ್ಣವನ್ನು ಬಳಸುವುದು ಅತ್ಯಂತ ವಿರಳ ಅನ್ನಬಹುದು. ಹಾಗಾಗಿ ನೀವೇನಾದ್ರೂ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದಾಗ ಕೆಂಪು ಇಂಕ್ ಪೆನ್ನುಗಳನ್ನು ಬಳಸುವ ಮೊದಲು ತುಂಬಾ ಯೋಚಿಸಿ ನೋಡಿ ಆಯ್ತಾ. ಇಲ್ಲಂದ್ರೆ ಅದನ್ನು ಕೊಂಡುಹೋಗದಿರುವುದೇ ಉತ್ತಮ.