ಮಂಗಳೂರು : ಪೊಲೀಸ್ ತನಿಖಾಧಿಕಾರಿಗಳು,ತನಿಖಾ ಸಿಬ್ಬಂದಿಗಳಿಗೆ ವೈಜ್ಞಾನಿಕ ತನಿಖೆಯ ತರಬೇತಿ

Share the Article

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪೊಲೀಸ್ ಠಾಣೆಗಳ ತನಿಖಾಧಿಕಾರಿಗಳು ಹಾಗೂ ತನಿಖಾ ಸಿಬ್ಬಂದಿಗಳಿಗೆ ವೈಜ್ಞಾನಿಕ ತನಿಖೆ (Scientific Investigation)ಗೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತರಬೇತಿ ಕಾರ್ಯಾಗಾರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅಮಟೆ ವಿಕ್ರಮ್ ಅವರ ಉಪಸ್ಥಿಯಲ್ಲಿ ಕಾರ್ಯಾಗಾರವನ್ನು ಡಾ. ಪ್ರದೀಪ್ ಕುಮಾರ್ ಜಂಟಿ ನಿರ್ದೇಶಕರು FSL ಬೆಂಗಳೂರು, ಡಾ.ರವೀಂದ್ರ ನಿವೃತ್ತ ಉಪ ನಿರ್ದೇಶಕರು,FSL ಬೆಂಗಳೂರು ಮತ್ತು ಡಾ. ಕಸ್ತೂರಿ ಒಡೆಯರ್ ವೈಜ್ಞಾನಿಕ ಅಧಿಕಾರಿ RFSL ಮಂಗಳೂರು ನಡೆಸಿಕೊಟ್ಟರು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪಿಎಸೈ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply