Health Tips: ಟೂತ್ ಬ್ರಷ್ ಆಯ್ಕೆ ಮಾಡುವಾಗ ಈ ವಿಧಾನ ಅನುಸರಿಸಿ, ನಿಮ್ಮ ಹಲ್ಲು ಉಳಿಸಿ!

Toothbrush: ಬಾಯಿಯಲ್ಲಿ ಇರುವ ಹಲ್ಲುಗಳ ಬಗ್ಗೆ ನಾವು ಪ್ರತಿನಿತ್ಯವೂ ಎದ್ದ ಬಳಿಕ ಹಲ್ಲುಜ್ಜಿ ಕಾಳಜಿ ವಹಿಸುತ್ತೇವೆ. ಆದರೆ ಇಷ್ಟು ಮಾತ್ರ ಸಾಕೇ ಎನ್ನುವ ಪ್ರಶ್ನೆಯು ಮೂಡುವುದು. ಕೆಲವರಲ್ಲಿ ಹಲ್ಲುಗಳು ಬೇಗನೆ ಕೆಡುವುದು ಮತ್ತು ದಂತಕುಳಿ ಕಾಣಿಸಿಕೊಳ್ಳುವುದು. ಇದಕ್ಕೆ ಸ್ವಚ್ಛತೆ ಇಲ್ಲದೆ ಇರುವುದು ಹಾಗೂ ಇತರ ಕೆಲವು ಕಾರಣಗಳು ಇರಬಹುದು.

ಮುಖ್ಯವೆಂದರೆ ಹಲ್ಲುಗಳು ಕ್ಯಾಲ್ಸಿಯಂ ಮತ್ತು ಪೋಸ್ಪರಸ್ ಖನಿಜಾಂಶಗಳ ಸಂಯೋಜನೆಯಾಗಿದೆ. ಹಲ್ಲುಗಳ ಪ್ರಮುಖ ಅಂಗಾಂಶವೆಂದರೆ ಅದು ಡೆಂಟಿನ್ ಎನ್ನುವುದು. ಡೆಂಟಿನ್ ನ್ನು ತುಂಬಾ ದೃಢ ಹಾಗೂ ಕಾಂತಿಯುತ ಪದರವು ರಕ್ಷಿಸುವುದು. ಇದನ್ನು ದಂತಕವಚ ಎಂದು ಕರೆಯಲಾಗುತ್ತದೆ. ಇದು ದಂತದ ಹೊರಗಿನ ಭಾಗವನ್ನು ರಚಿಸುವುದು ಮತ್ತು ನಮಗೆಲ್ಲರಿಗೂ ಇದು ಕಾಣಿಸುವುದು.

ನೀವು ಅನೇಕ ರೋಗಗಳನ್ನು ತಪ್ಪಿಸಲು ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಹಲ್ಲುಗಳನ್ನು ಸ್ವಚ್ಛಗೊಳಿಸಲು ನಾವು ಬಳಸುವ ಟೂತ್ ಬ್ರಷ್ ಸ್ವಚ್ಛವಾಗಿರಬೇಕು. ಬಾಯಿಯ ಆನಾರೋಗ್ಯದಿಂದ ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ವೈದ್ಯರ ಪ್ರಕಾರ ನಿಮ್ಮ ಹಲ್ಲುಗಳ ಬಣ್ಣವು ಬಿಳಿಯಾಗಿದ್ದರೆ, ಒಸಡುಗಳು ಗುಲಾಬಿ ಮತ್ತು ಆರೋಗ್ಯಕರವಾಗಿ ಕಾಣುತ್ತಿದ್ದರೆ, ಬಾಯಿಯಿಂದ ಯಾವುದೇ ದುರ್ವಾಸನೆ ಬರದಿದ್ದರೆ ಮತ್ತು ಬಿಸಿ ಅಥವಾ ತಣ್ಣನೆಯ ಆಹಾರ ತಿಂದಾಗ ಯಾವುದೇ ಜುಮ್ಮೆನಿಸುವಿಕೆ ಇಲ್ಲದಿದ್ದರೆ ನಿಮ್ಮ ಬಾಯಿಯ ಆರೋಗ್ಯವು ಉತ್ತಮವೆಂದು ಪರಿಗಣಿಸಬಹುದು.

ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್( Toothbrush)ಮತ್ತು ಫ್ಲೋರೈಡ್ ಆಧಾರಿತ ಟೂತ್ಪೇಸ್ಟ್ ಬಳಸಿ. ಅದೇ ರೀತಿ ಪ್ರತಿ 3 ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್ (Toothbrush) ಬದಲಾಯಿಸುವುದು ಉತ್ತಮ ಅಭ್ಯಾಸ. ಇದು ಬಾಯಿಯಲ್ಲಿ ಉಂಟಾಗುವ ಅಪಾಯ ತಡೆಯಬಹುದು.

ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವ ಬದಲು ಸ್ವಚ್ಛವಾಗಿ ಟೂತ್ಪೇಸ್ಟ್ ಉಪಯೋಗಿಸಿಕೊಂಡು ಹಲ್ಲುಜ್ಜಿ ಬಾಯಿ ತೊಳೆದುಕೊಂಡು ಆನಂತರ ಏನಾದರೂ ಸೇವನೆ ಮಾಡುವುದು ಒಂದು ಆರೋಗ್ಯಕರವಾದ ಜೀವನ ಶೈಲಿ ಎಂದು ಹೇಳಬಹುದು. ಏಕೆಂದರೆ ಇಡೀ ರಾತ್ರಿ ನಮ್ಮ ಬಾಯಿಯ ಒಳ ಭಾಗದಲ್ಲಿ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ರೋಗಕಾರಕ ಸೂಕ್ಷ್ಮಾಣುಗಳ ಸಂತತಿ ಹೆಚ್ಚಾಗಿರುತ್ತದೆ ಮತ್ತು ನಾವು ಬೆಳಗಿನ ಸಮಯದಲ್ಲಿ ಬಾಯಿ ತೊಳೆಯದೆ ಏನನ್ನಾದರೂ ಸ್ವೀಕಾರ ಮಾಡಿದರೆ, ನಾವು ತಿನ್ನುವ ಆಹಾರದ ಜೊತೆಗೆ ಬ್ಯಾಕ್ಟೀರಿಯಾಗಳು ಕೂಡ ನಮ್ಮ ದೇಹ ಪ್ರವೇಶ ಮಾಡಿ, ಹಲ್ಲುಗಳಿಗೆ ಹಾಗೂ ವಸಡುಗಳಿಗೆ ತೊಂದರೆ ಉಂಟು ಮಾಡುತ್ತವೆ. ಹಾಗಾಗಿ ಇದರಿಂದ ಹೊರಬರಲು ಒಳ್ಳೆಯ ಟೂತ್ಪೇಸ್ಟ್ ಬಳಕೆ ಮಾಡುವುದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: Shocking News: ಶಿಕ್ಷಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಶಾಲಾ ವಿದ್ಯಾರ್ಥಿಗಳು : ಆಸ್ಪತ್ರೆಗೆ ದಾಖಲು!

  • ನೀವು ಬಳಸುವ ಟೂತ್ಪೇಸ್ಟ್ ನಲ್ಲಿ ಆಯುರ್ವೇದ ಗಿಡಮೂಲಿಕೆ ಪದಾರ್ಥಗಳು ಇರಬೇಕು ಎಂದು ನೀವು ಅಂದುಕೊಂಡರೆ, ಸಾಂಪ್ರದಾಯಿಕವಾದ ಟೂತ್ಪೇಸ್ಟ್ ಬಳಕೆ ಮಾಡಬಹುದು. ಇದರಲ್ಲಿ ಲವಂಗ, ಪುದಿನಾ, ಶುಂಠಿ ಇತ್ಯಾದಿಗಳನ್ನು ಬಳಕೆ ಮಾಡಿರುತ್ತಾರೆ. ಇದರಿಂದ ಹಲ್ಲುಗಳು ಮತ್ತು ಒಸಡು ಸ್ವಚ್ಛವಾಗಿ ಉಳಿಯುವುದರ ಜೊತೆಗೆ ಬಾಯಿಯಲ್ಲಿ ಹೆಚ್ಚು ತಾಜಾತನ ಆವರಿಸುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ನಿಮ್ಮ ಹಲ್ಲುಗಳ ಸದೃಢತೆಯಲ್ಲಿ ಕೆಲಸ ಮಾಡುವ ಹಾಗೆ ಪೌಷ್ಟಿಕ ಸತ್ವಗಳು ಇದರಲ್ಲಿ ಸಿಗುತ್ತವೆ. ಇದರಲ್ಲಿರುವ ಶುಂಠಿ, ಪುದಿನಾ ಎಲ್ಲವೂ ಕೂಡ ಬಾಯಿಯಲ್ಲಿನ ತಾಜಾತನವನ್ನು ಹೆಚ್ಚು ಮಾಡುವ ಗುಣಲಕ್ಷಣವನ್ನು ಪಡೆದುಕೊಂಡಿವೆ
  • ಒಂದು ವೇಳೆ ನಿಮ್ಮ ಬಾಯಿಯಲ್ಲಿನ ದುರ್ವಾಸನೆ ಅತಿಯಾಗಿದ್ದರೆ, ಮತ್ತು ನಿಮಗೆ ಹಲ್ಲುಜ್ಜುವಾಗ ತಣ್ಣನೆಯ ಅನುಭವ ಉಂಟಾಗಬೇಕು ಎಂದರೆ ನೀವು ಕೋಲ್ಗೆಟ್ ಮ್ಯಾಕ್ಸ್ ಪ್ರೆಶ್ ಟೂತ್ ಪೇಸ್ಟ್ ಬಳಕೆ ಮಾಡಬಹುದು. ಇದು ತನ್ನಲ್ಲಿ ಪುದಿನ ಒಳಗೊಂಡಿರುವುದರಿಂದ ನಿಮ್ಮ ಬಾಯಿಯಲ್ಲಿ ಹೆಚ್ಚು ಹೊತ್ತು ತಾಜಾತನ ಮನೆಮಾಡುತ್ತದೆ. ನಿಮ್ಮ ಬಾಯಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಗಳು ಮತ್ತು ವಸಡುಗಳ ಭಾಗದಲ್ಲಿ ಉಂಟಾಗುವ ರಕ್ತಸ್ರಾವ ತುಂಬಾ ಚೆನ್ನಾಗಿ ಇದರಿಂದ ನಿರ್ವಹಣೆಯಾಗುತ್ತದೆ. ಮುಖ್ಯವಾಗಿ ಬಾಯಿಯ ಸ್ವಚ್ಛತೆ ಕಾಯ್ದುಕೊಳ್ಳಲು ದಿನದಲ್ಲಿ ಎರಡು ಬಾರಿ ಇದರಿಂದ ಹಲ್ಲುಜ್ಜುವುದು ಒಳ್ಳೆಯದು.
  • ಪೆಪ್ಸೋಡೆಂಟ್ ಎಕ್ಸ್ಪರ್ಟ್ ಪ್ರೊಟೆಕ್ಷನ್ ಇದು ಕೂಡ ಹಲ್ಲು ಮತ್ತು ವಸಡುಗಳ ರಕ್ಷಣೆಯಲ್ಲಿ ಪ್ರಮುಖವಾಗಿ ಕೆಲಸ ಮಾಡುವ ಟೂತ್ಪೇಸ್ಟ್ ಆಗಿದೆ. ಬಹಳ ವರ್ಷಗಳಿಂದ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಹಲ್ಲುಗಳ ಸಂದುಗಳಲ್ಲಿ ಕಂಡುಬರುವ ಕಲುಷಿತ ಅಂಶಗಳನ್ನು ತೆಗೆದು ಹಾಕಿ ಹಲ್ಲುಗಳ ಸ್ವಚ್ಛತೆ ಮತ್ತು ಬಾಯಿಯ ತಾಜಾತನವನ್ನು ಕಾಪಾಡುವಲ್ಲಿ ಇದು ಕೆಲಸ ಮಾಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಪ್ರತಿಯೊಂದು ಉತ್ಪನ್ನ ಕೂಡ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿ ಉಪಯೋಗಿಸಿರುವುದರಿಂದ ಸಕ್ಕರೆ ಕಾಯಿಲೆ ಹೊಂದಿದ ರೋಗಿಗಳಿಗೆ, ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ, ವಯಸ್ಸಾದವರಿಗೆ ಹಾಗೂ ಮಕ್ಕಳಿಗೆ ಸುರಕ್ಷಿತ. ಇನ್ನು ಅನೇಕ ಜನರು ಬ್ರಷ್‌ನಲ್ಲಿ ಬಹಳಷ್ಟು ಟೂತ್‌ಪೇಸ್ಟ್ ತೆಗೆದುಕೊಳ್ಳುತ್ತಾರೆ. ಅದು ಬಾಯಿಯನ್ನು ಹೆಚ್ಚು ಸ್ವಚ್ಛಗೊಳಿಸುತ್ತದೆ ಎಂದು ಅವರು ಭಾವಿಸಿರುತ್ತಾರೆ. ಆದರೆ ಇದು ತಪ್ಪು, ಏಕೆಂದರೆ ಹೆಚ್ಚು ಟೂತ್ಪೇಸ್ಟ್ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ಸ್ವಲ್ಪ ಟೂತ್ಪೇಸ್ಟ್ ಬಳಸಬೇಕು.
Leave A Reply

Your email address will not be published.