ಬೈಕ್‌ಗೆ ಮರಳು ಸಾಗಾಟದ ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಮೃತ್ಯು

ಕಡಬ : ಮರಳು ಸಾಗಿಸುವ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಕೊಕ್ಕಡದ ಸಿರಾಜುದ್ದೀನ್ (34) ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟ ಘಟನೆ ವರದಿಯಾಗಿದೆ.

 

ಸಿರಾಜುದ್ದೀನ್ ರವರು ಕೊಕ್ಕಡದಿಂದ ಉಪ್ಪಾರಪಳಿಕೆ
ಗೋಳಿತೊಟ್ಟು ಮಾರ್ಗವಾಗಿ ಬಿ.ಸಿ.ರೋಡಿಗೆ ಹೋಗುವ ಸಂದರ್ಭ ಕೊಲ್ಲಾಜೆಪಳಿಕೆ ಎಂಬಲ್ಲಿ ಕೊಕ್ಕಡದ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಸತತ ಚಿಕಿತ್ಸೆ ನೀಡಿದರೂ ಸ್ಪಂದಿಸದ ಕಾರಣ ಫೆ.7ರ ಸಂಜೆ ಕೊನೆಯುಸಿರೆಳೆದರು.

ಸಿರಾಜುದ್ದೀನ್ ಪಟ್ರಮೆ ಗ್ರಾಮದ ಅಬೂಬಕ್ಕರ್ ಎಂಬುವವರ ಮಗನಾಗಿದ್ದು ಕಳೆದ 12 ವರ್ಷಗಳಿಂದ ಕೊಕ್ಕಡ ಪಟ್ರಮೆ ಭಾಗಗಳಲ್ಲಿ ಅಡಕೆ ವ್ಯಾಪಾರ ನಡೆಸುತ್ತಿದ್ದರು.

ಮೃತರು ತಂದೆ, ತಾಯಿ, ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave A Reply

Your email address will not be published.