ಜೆಇಇ ಮುಖ್ಯ ಪರೀಕ್ಷೆಯ ಸೆಷನ್​ 1 ರ ಫಲಿತಾಂಶ ಪ್ರಕಟ

ಬೆಂಗಳೂರು : ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹತೆ ಒದಗಿಸುವ ಜೆಇಇ ಮುಖ್ಯ ಪರೀಕ್ಷೆಯ ಸೆಷನ್​ 1 ರ ಫಲಿತಾಂಶ ಪ್ರಕಟಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ಜೆಇಇ ಮುಖ್ಯ ಪರೀಕ್ಷೆಯು ಜನವರಿ 24ರಿಂದ ಫೆಬ್ರವರಿ 1ರವರೆಗೆ ನಡೆದಿತ್ತು.
ಅಭ್ಯರ್ಥಿಗಳು ಫಲಿತಾಂಶವನ್ನು ವೀಕ್ಷಿಸಲು jeemain.nta.nic.in ಅಥವಾ ntaresults.nic.in. ವೆಬ್​ಸೈಟ್​ಗೆ ಭೇಟಿ ನೀಡಬಹುದು.

ಎನ್​ಐಟಿ, ಐಐಐಟಿ ಮತ್ತು ಇತರೆ ಸೆಂಟ್ರಲಿ ಫಂಡೆಡ್​ ಟೆಕ್ನಿಕಲ್​ ಇನ್ಸುಟಿಟ್ಯೂಶನ್​ (ಸಿಎಫ್​ಟಿಐ) ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಡಿಗಳಲ್ಲಿ ಬರುವ ಇಂಜಿನಿಯರಿಂಗ್​ ಪದವಿಗಳಿಗೆ ಈ ಜೆಇಇ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಸೆಷನ್​2 ನ ದಾಖಲಾತಿ ಫೆಬ್ರವರಿ 7ರಿಂದ ಆರಂಭವಾಗಲಿದೆ.ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಟಾಪ್​ ಬಂದ 2.5 ಲಕ್ಷ ಅಭ್ಯರ್ಥಿಗಳು ಅಡ್ವಾನ್ಸ್​ ಪರೀಕ್ಷೆ ಎದುರಿಸಲು ಅರ್ಹರಾಗುತ್ತಾರೆ.

ಸೆಷನ್​ 1ರ ಬಳಿಕ ಮುಂದಿನ ಹಂತದ ಪರೀಕ್ಷೆ ನಡೆಯಲಿದ್ದು, ಅದರಲ್ಲೂ ಆಯ್ಕೆಯಾದ ಅಭ್ಯರ್ಥಿಗಳು ಅಂತಿಮವಾಗಿ ತಮ್ಮ ತಾಂತ್ರಿಕ ಶಿಕ್ಷಣ ಪ್ರಾರಂಭ ಮಾಡಬಹುದಾಗಿದೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಎರಡು ಪೇಪರ್‌ಗಳು ಇರುತ್ತವೆ. ಪೇಪರ್ 1 ಪರೀಕ್ಷೆಯನ್ನು ಎನ್​ಐಟಿ, ಐಐಐಟಿ ಮತ್ತು ಸಿಎಫ್​ಟಿಐ ಹಾಗೂ ರಾಜ್ಯ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬಿಇ, ಬಿಟೆಕ್‌ ಕೋರ್ಸ್‌ಗೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

Leave A Reply

Your email address will not be published.