ತಲೆನೋವಿನ ಸಮಸ್ಯೆಯಿಂದ ಸೋತು ಹೋಗಿದ್ದೀರಾ? | ಹಾಗಿದ್ರೆ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ, ಫಲಿತಾಂಶ ನೀವೇ ಕಂಡುಕೊಳ್ಳಿ!
‘ತಲೆನೋವು’ ಎಂಬುದು ಎಲ್ಲಾ ಜನರಿಗೆ ಮಾಮೂಲ್ ತೊಂದರೆಯಾಗಿದೆ. ಯಾಕಂದ್ರೆ ಇಂದಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ತಲೆನೋವು ಸಮಸ್ಯೆ ಮುಗಿಯದ ದೊಡ್ಡ ಕಾಟವಾಗಿ ಹೋಗಿದೆ. ಹಲವು ಕೆಲಸಗಳ ಒತ್ತಡದಿಂದ ಕೂಡ ಈ ಸಮಸ್ಯೆ ಅತಿಯಾಗಿ ಕಾಡುತ್ತದೆ.
ಹೌದು. ದಿನಪೂರ್ತಿ ದುಡಿದು ಸುಸ್ತಾಗಿರುವ ಜನರಲ್ಲಿ ಒತ್ತಡದ ಜೊತೆಗೆ ಸುಸ್ತು ಹೆಚ್ಚಾಗಿರುತ್ತದೆ. ಹೀಗಾಗಿ ತಲೆನೋವಿನ ಸಮಸ್ಯೆ ಕಾಡುತ್ತದೆ. ಅಷ್ಟೇ ಅಲ್ಲದೆ, ಇಂದಿನ ಆಹಾರ ಪದ್ಧತಿಯಿಂದ ಕೂಡ ಈ ಸಮಸ್ಯೆ ಕಾಡುತ್ತದೆ. ಆಹಾರದಲ್ಲಿ ಮೆಗ್ನಿಶಿಯಂ ಕೊರತೆಯಿದ್ದರೂ ಮೈಗ್ರೇನ್ ತಲೆನೋವು ಬರುವ ಸಾಧ್ಯತೆ ಇದೆ. ಹೀಗಾಗಿ ಮೆಗ್ನಿಶಿಯಂ ಅಂಶ ಹೊಂದಿರುವ ಆಹಾರಗಳನ್ನು ಸೇವಿಸುವುದು ಉತ್ತಮ. ಇದರಿಂದ ತಲೆನೋವು ಬರುವ ಸಾಧ್ಯತೆ ಕಡಿಮೆ ಇರುತ್ತದೆ.
ಆದರೆ ಮೆಗ್ನೀಸಿಯಮ್ ಹೊಂದಿರುವ ಆಹಾರವನ್ನು ಸೇವಿಸಿದ ನಂತರವೂ ನಿಮಗೆ ಆಗಾಗ್ಗೆ ತಲೆನೋವು ಕಾಡುತ್ತಿದ್ದರೆ , ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹೆಚ್ಚಾಗಿ, ಮೆಗ್ನೀಸಿಯಮ್ ಹೊಂದಿರುವ ಆಹಾರವನ್ನು ಸೇವಿಸಿದ ನಂತರ ತಲೆನೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ ಗೊಳಿಸಬಹುದು. ಹಾಗಿದ್ರೆ ಬನ್ನಿ ಯಾವ ತಪ್ಪಿನಿಂದಾಗಿ ತಲೆನೋವು ಬರುತ್ತದೆ. ಇದಕ್ಕೆ ಉತ್ತಮ ಆಹಾರವೇನು ಎಂಬುದನ್ನು ತಿಳಿಯೋಣ.
*ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು, ಬಾದಾಮಿ, ಗೋಡಂಬಿ, ಬಾಳೆಹಣ್ಣು ಮತ್ತು ಕಡಲೆಕಾಯಿಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಹೀಗಾಗಿ ಇದನ್ನು ಸೇವಿಸೋದು ಉತ್ತಮ.
*ಸಾಕಷ್ಟು ನೀರು ಕುಡಿಯದಿದ್ದರೂ ತಲೆನೋವು ಬರುತ್ತದೆ. ಆದ್ದರಿಂದ ಹೆಚ್ಚಾಗಿ ನೀರು ಸೇವಿಸುವುದು ಉತ್ತಮ.
*ತಣ್ಣನೆಯ ತೆಂಗಿನ ನೀರು, ಮಜ್ಜಿಗೆ ಮತ್ತು ಇತರ ನೈಸರ್ಗಿಕವಾಗಿ ತಯಾರಿಸಿದ ಪಾನೀಯಗಳನ್ನು ಸೇವಿಸಿದರೆ ತಲೆನೋವು ದೂರವಾಗುತ್ತದೆ.
*ಎಲೆಗಳಿಂದ ತಯಾರಿಸಿದ ತಂಪು ಪಾನೀಯವು ತಲೆನೋವು ಕಡಿಮೆಯಾಗಲು ಕಾರಣವಾಗುತ್ತದೆ.
*ಬಾಳೆಹಣ್ಣು, ಅನಾನಸ್ ಮತ್ತು ಕಲ್ಲಂಗಡಿಗಳನ್ನು ತಿನ್ನುವುದರಿಂದ ಸಹ ತಲೆನೋವು ಕಡಿಮೆಯಾಗುತ್ತದೆ. *ತಂಪಾದ ಆಹಾರ ಸೇವನೆಯಿಂದ ತಲೆನೋವನ್ನು ಕಡಿಮೆ ಮಾಡಬಹುದು.
*ಶುಂಠಿಯನ್ನು ಜಗಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ.
*ತಲೆನೋವು ತೀವ್ರವಾಗಿದ್ದಾಗ, ಮಂದ ಬೆಳಕಿನಲ್ಲಿ ವಿಶ್ರಾಂತಿ ಪಡೆಯುವುದರಿಂದ ತಲೆನೋವು ನಿವಾರಿಸಬಹುದು.
*ದೈನಂದಿನ ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ನಮ್ಮ ದೇಹ ಆರೋಗ್ಯದಿಂದಿರಲು ವ್ಯಾಯಾಮ ಮಾಡುವುದು ಮುಖ್ಯವಾಗಿರುತ್ತದೆ.