ಎಟಿಎಮ್​ ಗಳಿಂದ ವಿಚಿತ್ರ ರೀತಿಯಲ್ಲಿ ಕಳವಾಗ್ತಿದೆ ಹಣ! ದಿನ ದಿನವೂ ಬ್ಯಾಂಕ್​ನವರಿಗೆ ತಲೆನೋವಾಗ್ತಿದ್ದಾರೆ ಈ ಖದೀಮರು!

ಪೋಲೀಸಿನವರಿಗೆ ಹಾಗೂ ಬ್ಯಾಂಕಿನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದೆಂದರೆ ಈ ATM ಕಳ್ಳರೆಂದು ಹೇಳಬಹುದು. ದೇಶದಲ್ಲಿ ಈ ರೀತಿಯ ಪ್ರಕರಣಗಳು ಪ್ರತೀ ದಿನ ಪತ್ತೆಯಾಗಿ ಇವರ ಕಿರಿಕಿರಿಯಿಂದ ಬ್ಯಾಂಕಿನವರಂತೂ ರೋಸಿ ಹೋಗಿದ್ದಾರೆ. ಆದರೀಗ ಇಂತದೇ ಒಂದು ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ವರೆಗಿನ ಈ ATM ಕಳ್ಳತನ ಪ್ರಕರಣಗಳಲ್ಲೇ ಇದೊಂದು ವಿಚಿತ್ರವಾದದ್ದೆನೆಸಿದೆ. ಹಾಗಿದ್ರೆ ಏನದು ಎಂದು ಕುತೂಹಲ ಆಗ್ತಿದಿಯಾ? ಈ ಸ್ಟೋರಿ ನೋಡಿ.

ಹೌದು, ಅಪರಿಚಿತ ವ್ಯಕ್ತಿಗಳು ಎಟಿಎಮ್​ನಿಂದ ಲಕ್ಷಾಂತರ ರೂಪಾಯಿ ಮೇಲಿಂದ ಮೇಲೆ ಡ್ರಾ ಮಾಡಿದ್ದು, ಯಾವ ಖಾತೆಯಿಂದ ಹಣ ಕಡಿತವಾಗಿದೆ ಎಂಬುದನ್ನು ಪತ್ತೆ ಮಾಡಲಾಗದಿರುವುದು ಬ್ಯಾಂಕ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. ಲೆಕ್ಕಕ್ಕೆ ಸಿಗದಂತೆ ಕೆನರಾ ಬ್ಯಾಂಕ್ ಎಟಿಎಮ್​​ನಿಂದ ಕಳವಾಗಿದ್ದು ಸುಮಾರು 1.7 ಲಕ್ಷ ರೂ. ಡ್ರಾ ಆಗಿದೆ. ಈ ಕುರಿತು ಎಂ.ಜಿ.ರಸ್ತೆ ಕೆನರಾ ಬ್ಯಾಂಕ್ ವೃತ್ತ ಕಚೇರಿ ಅಧಿಕಾರಿ ಬಾಬು ಮಹೇಶ್‌ ಕುಮಾರ್ ಎಂಬುವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಹಲಸೂರಿನಲ್ಲಿ ಇರುವ ಕೆನರಾ ಬ್ಯಾಂಕ್ ಎಟಿಎಮ್​ನಲ್ಲಿ ಅಪರಿಚಿತರು ಐದು ಬಾರಿ ಒಟ್ಟಾರೆ 50 ಸಾವಿರ ರೂ., ಬಿಲ್ಲಕೋಟೆ ಎಟಿಎಮ್​ನಲ್ಲಿ 50 ಸಾವಿರ ರೂ., ಕುಲುವನಹಳ್ಳಿ ಎಟಿಎಮ್​​ನಲ್ಲಿ 70 ಸಾವಿರ ರೂ. ಒಟ್ಟಾರೆ 1.7 ಲಕ್ಷ ರೂ. ಬೇರೆ ಬೇರೆ ದಿನಾಂಕದಂದು ಡ್ರಾ ಮಾಡಿಕೊಂಡಿದ್ದಾರೆ. ಆದರೆ, ಯಾರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿದೆ ಎಂಬುದು ಮಾತ್ರ ನೋಂದಣಿ ಆಗಿಲ್ಲ. ಬದಲಿಗೆ ಎಟಿಎಮ್​ನಲ್ಲಿ ಹಣ ಡ್ರಾ ಆಗಿದೆ.

ಇದು ಇತ್ತೀಚೆಗೆ ಬ್ಯಾಂಕ್ ಲೆಕ್ಕಪತ್ರಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಎಟಿಎಮ್​ ಬೂತ್ ಸೆಕ್ಯುರಿಟಿ ಏಜೆನ್ಸಿ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅಪರಿಚಿತ ವ್ಯಕ್ತಿ ಹಣ ಡ್ರಾ ಮಾಡಿರುವುದು ಖಚಿತವಾಗಿದೆ. ಇದೇ ರೀತಿ ಹಲವು ಬ್ಯಾಂಕ್ ಎಟಿಎಮ್​ನಲ್ಲಿ ನಡೆದಿದೆ. ಇಲ್ಲಿಯವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.