ಹೆಂಡತಿಯನ್ನು ನಟಿ ಕಿಯಾರಾ ಅಡ್ವಾಣಿಗೆ ಹೋಲಿಸಿ ಸಂಕಷ್ಟಕ್ಕೀಡಾದ ಪತಿರಾಯ! ಸಿಟ್ಟಿಗೆದ್ದ ಹೆಂಡತಿ ಆತನಿಗೆ ಮಾಡಿದ್ದೇನು ಗೊತ್ತಾ?

ಹುಡುಗರು ಮದುವೆ ಆದರೆ ಮಾತ್ರ ಸಾಲದು, ತನ್ನ ಹೆಂಡತಿಯನ್ನು ಸಮಾಧಾನದೊಂದಿಗೆ, ಹೇಗೆ ನಿಭಾಯಿಸಿಕೊಂಡು ಹೋಗಬೇಕೆಂಬುದನ್ನೂ ಕಲಿತಿರಬೇಕು. ತಾನು ಸಂತೋಷಕರ ಸಂಸಾರವನ್ನು ನಡೆಸಬೇಕಾದ್ರೆ ಗಂಡ ಇಂತಹ ಕಲೆಗಳನ್ನು ಅರಿತಿರಲೇ ಬೇಕು. ಅದರಲ್ಲೂ ಪತ್ನಿ ಕೋಪದಲ್ಲಿದ್ದಾಗ ಆಕೆಯನ್ನು ಸಂಬಾಳಿಸುವ ಜಾಣ್ಮೆ ಇರಬೇಕು. ಸದಾ ಆಕೆಯ ಮೆಚ್ಚುಗೆ ಪಾತ್ರವಾಗಬೇಕು. ಇದರಲ್ಲಿ ಆತ ಎಷ್ಟು ಪರಿಣತಿ ಹೊಂದಿರಬೇಕಂದ್ರೆ ತಾನು ಏನಾದರೂ ಹೇಳಿದರೆ ಅದು ಪ್ರೀತಿಯಿಂದ ಹೇಳಿದ್ದು, ಸತ್ಯವನ್ನೇ ಹೇಳುತ್ತಿರುವುದು, ಪೂಸಿ ಹೊಡೆಯುತ್ತಿರೋದಲ್ಲ ಎಂದು ಆಕೆಗೆ ಅನಿಸಬೇಕು. ಇದೇನಾದದ್ರೂ ಉಲ್ಟಾ ಹೊಡೀತು ಅಂದ್ರೆ ಗಂಡನ ಕಥೆ ಕಥಂ! ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿಯನ್ನು ಖುಷಿ ಪಡಿಸಲು ಹೋಗಿ ಪಜೀತಿಗೆ ಒಳಗಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಈ ಪತಿರಾಯ ಕೋಪಗೊಂಡ ತನ್ನ ಪತ್ನಿಯನ್ನು ಸಮಾಧಾನ ಪಡಿಸಲು, ಆಕೆಯನ್ನು ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿಗೆ ಹೋಲಿಕೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಪತ್ನಿ ತುಂಬಾ ಖುಷಿಯಾಗಿಬಿಡುತ್ತಾಳೆ ಅಂದುಕೊಂಡವನಿಗೆ ಆಗಿದ್ದೇ ಬೇರೆ. ಇದರಿಂದ ಇನ್ನಷ್ಟು ಕೋಪಗೊಂಡ ಆತನ ಪ್ರೀತಿಯ ಮಡದಿ ಅವನಿಗೆ ಇಡೀ ದಿನ ಊಟ ಹಾಕುವುದಿಲ್ಲ ಎಂದಿದ್ದಾಳೆ! ಹೊಗಳುವ ಭರದಲ್ಲಿ ಸ್ವಲ್ಪ ಅವಸರ ಮಾಡಿದ ಆತ, ತನ್ನ ಸಣ್ಣ ಎಡವಟ್ಟಿನಿಂದಾಗಿ ಇಡೀ ದಿನ ಹಸಿವಿನಿಂದ ಬಳಲಬೇಕಾಯಿತು ಪಾಪ!

ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಸಂಪೂರ್ಣ ವೀಡಿಯೋವನ್ನು ಪ್ರವೀಣ್ ಎಂಬ ಟ್ವಿಟ್ಟರ್ ಬಳಕೆದಾರ ‘ತನ್ನ ಪತ್ನಿಯನ್ನು ಕಿಯಾರಾ ಅಡ್ವಾಣಿ ಜೊತೆ ಹೋಲಿಕೆ ಮಾಡಿದಾಗ?’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾನೆ. 52 ಸೆಕೆಂಡುಗಳ ವೀಡಿಯೋ ಇದಾಗಿದ್ದು, ಕೋಪಗೊಂಡ ಪತ್ನಿ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ. ಗಂಡ, ಹೆಂಡತಿಯನ್ನು ಸಮಾಧಾನಪಡಿಸುತ್ತ, ಅವಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವಾಗ ಅವಳು ಕೋಪದಲ್ಲೇ ಮಾತನಾಡುತ್ತಾಳೆ. ‘ಕೋಪ ಮಾಡಿಕೊಳ್ಳಬೇಡ ಡಾರ್ಲಿಂಗ್​, ನನ್ನನ್ನು ಕ್ಷಮಿಸು’ ಎಂದು ಆತ ಬೇಡುತ್ತಾನೆ.

‘ಅವಳೊಬ್ಬ ನಟಿ. ನಾನು ಅವಳನ್ನು ಮದುವೆಯಾಗುತ್ತೇನೆ ಅಂತಾ ನೀನು ಕೋಪಗೊಳ್ಳುತ್ತಿದ್ದೀಯಾ, ಅವಳು ನನ್ನನ್ನು ಮದುವೆಯಾಗಲು ಸಾಯುತ್ತಿದ್ದಾಳೆ ನೋಡು ಎಂದು ರೇಗಿಸುತ್ತಾನೆ. ಇದಕ್ಕೆ ಆಕೆ ‘ಹೋಗಿ ಅವಳನ್ನೇ ಮದುವೆಯಾಗಿ, ನೀವು ಇಲ್ಲಿ ಇರಬೇಕಾಗಿಲ್ಲ,ಅವಳು ನಿಮ್ಮನ್ನು ಮದುವೆಯಾಗ್ಬೋದು, ನಿನ್ನನ್ನು ಮದುವೆಯಾಗಲು ಎಲ್ಲ ಹುಡುಗಿಯರು ಸಾಯುತ್ತಾರೆ’ ಎಂದು ಕೋಪದಲ್ಲಿಯೇ ಹೇಳುತ್ತಾಳೆ. ಅದಕ್ಕೆ ಗಂಡ ‘ಅವಳನ್ನು ನಟಿಯಾಗಿ ಇಷ್ಟಪಡುತ್ತೇನೆ. ನಾನು ಯಾವುದೇ ಹೀರೋಯಿನ್ ಅನ್ನು ಇಷ್ಟಪಡಬಾರದೇ? ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಪತ್ನಿ, ನನ್ನನ್ನೇಕೆ ಕಿಯಾರಾ ಅಡ್ವಾಣಿ ಜೊತೆ ಹೋಲಿಗೆ ಮಾಡಿದ್ರಿ, ನಾನೇನು ನಟಿಯೇ? ಎಂದು ಗುರ್ ಅನ್ನುತ್ತಾಳೆ. ಇದಕ್ಕೆ ಆತ ಅವಳು, ಚೆನ್ನಾಗಿ ನಟನೆ ಮಾಡುತ್ತಾಳೆ ಅಂತ ಹಾಗೇಳಿದೆ ಅಷ್ಟೇ ಎನ್ನುತ್ತಾನೆ

ಒಟ್ನಲ್ಲಿ ಕೊನೆಗೆ ಸಿಟ್ಟಿಗೇಳುವ ಪತ್ನಿ ಇಲ್ಲಿಂದ ಹೊರಗೆ ಹೋಗಿ, ನಿಮಗೆ ಇಂದು ಊಟ ಸಿಗುವುದಿಲ್ಲ ಎನ್ನುತ್ತಾಳೆ. ಕ್ಷಮೆಯಾಚಿಸಿ, ತನ್ನ ಹೆಂಡತಿಯನ್ನು ಸಮಾಧಾನ ಪಡಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಊಟ ಕೊಡದೇ ಅಡುಗೆಮನೆಯಿಂದಲೇ ಗಂಡನನ್ನು ಪತ್ನಿ ಹೊರಹಾಕುತ್ತಾಳೆ. ಪತಿ ಮತ್ತು ಪತ್ನಿ ನಡುವಿನ ಈ ಕ್ಯೂಟ್​ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತದೆ. ಅಪ್ಲೋಡ್ ಆದ ಕೆಲವೇ ಸಮಯದಲ್ಲಿ ಈ ವಿಡಿಯೋ 84 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಗಳಿಸಿದೆ. ನೋಡಿದವರೆಲ್ಲ ಬಗೆ ಬಗೆಯಾಗಿ ಕಂಮೆಂಟಿಸುತ್ತಿದ್ದಾರೆ.

https://twitter.com/PraveenSarraf_/status/1620749213792632832?t=QlMp-cO6dSP3o1O5WuefJw&s=19

Leave A Reply

Your email address will not be published.