Recharge Plans : BSNL ಗ್ರಾಹಕರೇ ನಿಮಗಾಗಿ ಭರ್ಜರಿ ಸಿಹಿಸುದ್ದಿ ! ಈ ಪ್ಲ್ಯಾನ್ ಹಾಕಿದರೆ ನಿಮ್ಮ ಡೇಟಾ ಖಾಲಿಯಾಗೋದೇ ಇಲ್ಲ!
ಹಿಂದಿನಿಂದಲೂ ಭಾರೀ ಜನಪ್ರಿಯತೆಯನ್ನು ಪಡೆದ ಟೆಲಿಕಾಂ ಕಂಪನಿಯೆಂದರೆ ಅದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಆಗಿದೆ. ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್ ಆಫರ್ಸ್ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಇದೀಗ ಟೆಲಿಕಾಂ ಕಂಪನಿಗಳಲ್ಲಿ ಜಿಯೋ, ಏರ್ಟೆಲ್, ವೊಡಫೋನ್ ಐಡಿಯಾ ಈ ರೀತಿಯ ಹಲವಾರು ಖಾಸಗಿ ಕಂಪನಿಗಳಿವೆ. ಆದರೆ ಇವೆಲ್ಲದಕ್ಕೆ ಪೈಪೋಟಿ ನೀಡುವಂತಹ ಸರ್ಕಾರಿ ಕಂಪನಿಯೆಂದರೆ ಬಿಎಸ್ಎನ್ಎಲ್ ಕಂಪನಿ. ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿರುವ ಬಿಎಸ್ಎನ್ಎಲ್ ಕಂಪೆನಿ ಇದೀಗ ಅಧಿಕ ಟೇಟಾ ಬಳಸುವವರಿಗೆ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
16 ರೂ. ರೀಚಾರ್ಜ್ ಪ್ಲ್ಯಾನ್ :
ಕೆಲವರಿಗೆ ದೈನಂದಿನ ಡೇಟಾ ಸಾಕಾಗೋದಿಲ್ಲ. ಹೆಚ್ಚು ಮೊಬೈಲ್ ಬಳಸುವ ಕಾರಣ ಬೇಗನೆ ಅಂದಿನ ರೀಚಾರ್ಜ್ ಖಾಲಿಯಾಗುತ್ತದೆ. ಕೆಲವೊಮ್ಮೆ ಇಂತಹ ರೀಚಾರ್ಜ್ ಪ್ಲ್ಯಾನ್ ಇದ್ದರೆ ಡೇಟಾ ಖಾಲಿ ಆದ ನಂತರವೂ ರೀಜಾರ್ಜ್ ಮಾಡಿಸಿ, ಬಳಸಲು ಸಹಕಾರಿಯಾಗುತ್ತದೆ. ದೈನಂದಿನ ಡೇಟಾ ಖಾಲಿಯಾದರೆ ಈ 16 ರೂಪಾಯಿ ಪ್ರಿಪೇಯ್ಡ್ ಡೇಟಾ ಪ್ಯಾಕ್ ಬಹಳಷ್ಟು ಸಹಕಾರಿಯಾಗುತ್ತದೆ. ಇದರಲ್ಲಿ ಬಳಕೆದಾರರು ಒಟ್ಟು 2 ಜಿಬಿ ಡೇಟಾವನ್ನು ಪಡೆಯಬಹುದು. ಹಾಗೇ ಈ 16 ರೂ. ರೀಚಾರ್ಜ್ ಪ್ಲ್ಯಾನ್ ಕೇವಲ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಈ ರಿಚಾರ್ಜ್ ಪ್ಲ್ಯಾನ್ ತುರ್ತು ಸಂದರ್ಭದಲ್ಲಿ ಸಹಕಾರಿಯಾಗಿದೆ.
151 ರೂ. ರೀಚಾರ್ಜ್ ಪ್ಲ್ಯಾನ್ :
ಬಿಎಸ್ಎನ್ಎಲ್ ಇದನ್ನು ವರ್ಕ್ ಫ್ರಮ್ ಹೋಮ್ ಪ್ಯಾಕ್ ಎಂಬ ಹೆಸರಿನಿಂದ ಘೋಷಣೆ ಮಾಡಿದ್ದು, ಮನೆಯಲ್ಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಈ 151 ರೂ. ರೀಚಾರ್ಜ್ ಪ್ಲ್ಯಾನ್ ಸಹಕಾರಿಯಾಗಲಿದೆ. ಬಿಎಸ್ಎನ್ಎಲ್ನ ಈ ಡೇಟಾ ಪ್ಲ್ಯಾನ್ನಲ್ಲಿ ಬಳಕೆದಾರರು 40 ಜಿಬಿಯಷ್ಟು ಡೇಟಾ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ರೀಚಾರ್ಜ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಮಿತಿಯಲ್ಲಿ ಮೊಬೈಲ್ ಬಳಸುವವರಿಗೂ ಈ ರೀಚಾರ್ಜ್ ಪ್ಲ್ಯಾನ್ ಪ್ರಯೋಜನಕ್ಕೆ ಬರಲಿದೆ.
198 ರೂ. ರೀಚಾರ್ಜ್ ಪ್ಲ್ಯಾನ್ :
198 ರೂಪಾಯಿಯ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ದೈನಂದಿನ ಬಳಕೆಗೆ 2 ಜಿಬಿ ಡೇಟಾ ಲಭ್ಯವಾಗಲಿದೆ. ಈ ಡೇಟಾವನ್ನು 40 Kbps ವೇಗದಲ್ಲಿ ಬಳಸಬಹುದು. ಹಾಗೇ ಈ ಪ್ಯಾಕ್ ಒಟ್ಟು 40 ದಿನಗಳ ವ್ಯಾಲಿಡಿಟಿ ಅವಧಿಯವರೆಗೆ ಇರಲಿದೆ. ಜೊತೆಗೆ ಹಲವು ಗೇಮಿಂಗ್ ಪ್ರಯೋಜನಗಳನ್ನೂ ಪಡೆಯಬಹುದಾಗಿದೆ. ಇದು ಉತ್ತಮ ರೀಚಾರ್ಜ್ ಪ್ಲ್ಯಾನ್ ಆಗಿದ್ದು, ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ.
251 ರೂ. ರೀಚಾರ್ಜ್ ಪ್ಲ್ಯಾನ್ :
ಈ ಪ್ರಿಪೇಯ್ಡ್ ಡೇಟಾ ಪ್ಯಾಕ್ ನಲ್ಲಿ 70 ಜಿಬಿಯಷ್ಟು ಡೇಟಾ ಹಾಗೂ 28 ದಿನಗಳ ಕಾಲ ವ್ಯಾಲಿಡಿಟಿ ಅವಧಿ ಇರಲಿದೆ. ಅಲ್ಲದೆ, ಇದರಲ್ಲಿ ಜಿಂಗ್ ಸೌಲಭ್ಯ ಕೂಡ ಇರುತ್ತದೆ. ಇನ್ನು ನೀವು ಇರುವ ಪ್ರದೇಶದಲ್ಲಿ 4ಜಿ ಅಥವಾ 3ಜಿ ನೆಟ್ವರ್ಕ್ ಹೊಂದಿದ್ದರೆ ಇದರಲ್ಲಿ ಇಂಟರ್ನೆಟ್ ವೇಗವು ಇನ್ನಷ್ಟು ವೇಗವಾಗಿರುತ್ತದೆ. 251 ರೂ. ರೀಚಾರ್ಜ್ ಪ್ಲ್ಯಾನ್ ಬಳಕೆದಾರರಿಗೆ ಸಹಕಾರಿಯಾಗಲಿದೆ. ಮೊದಲಿನ ರೀಚಾರ್ಜ್ ಪ್ಲ್ಯಾನ್ ಗಿಂತ ಹೆಚ್ಚಿನ ಸೌಲಭ್ಯ ಲಭ್ಯವಿದೆ.
398 ರೂ. ರೀಚಾರ್ಜ್ ಪ್ಲ್ಯಾನ್ :
398 ರೂ.ಯ ಪ್ರಿಪೇಯ್ಡ್ ಡೇಟಾ ಪ್ಲ್ಯಾನ್ನಲ್ಲಿ ಬಳಕೆದಾರರು ಅನ್ಲಿಮಿಟೆಡ್ ಡೇಟಾವನ್ನು ಬಳಕೆ ಮಾಡಬಹುದು. ಹಾಗೇ ಇದು 30 ದಿನಗಳ ಮಾನ್ಯತೆ ಇದ್ದು, 100 ಎಸ್ಎಮ್ಎಸ್ ಹಾಗೂ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಾಗಲಿದೆ. ಉತ್ತಮ ರೀಚಾರ್ಜ್ ಪ್ಲ್ಯಾನೆಟ್ ಆಗಿದ್ದು, ಅಧಿಕ ಡೇಟಾ ಬಳಸುವ ಬಳಕೆದಾರರಿಗೆ ಈ 398 ರೂ. ರೀಚಾರ್ಜ್ ಪ್ಲ್ಯಾನ್ ಬೆಸ್ಟ್ ಎಂದೇ ಹೇಳಬಹುದು.