Roopesh Shetty : ಬಿಗ್‌ಬಾಸ್‌ ವಿನ್ನರ್‌ ಕುಡ್ಲದ ಕುವರ ರೂಪೇಶ್‌ ಶೆಟ್ಟಿ ದುಬೈನಲ್ಲಿ ! ಹೋದದ್ದು ಯಾಕೆಂಬ ಇಂಟೆರೆಸ್ಟಿಂಗ್‌ ಕಾರಣ ಇಲ್ಲಿದೆ

Share the Article

ಬಿಗ್‌ಬಾಸ್ ಸೀಸನ್ 9ರ ಟಫ್ ಕಾಂಪಿಟೇಟರ್ ಆಗಿದ್ದ ರೂಪೇಶ್ ಶೆಟ್ಟಿ, ಸಾಕಷ್ಟು ಮೋಜು, ಮಸ್ತಿ, ಟಾಸ್ಕ್ ನಲ್ಲಿ ಅದ್ಭುತವಾಗಿ ಆಡುವ ಮೂಲಕ ಜನರ ಮನಗೆದ್ದಿದ್ದರು. ಅಲ್ಲದೆ ತಮ್ಮ ನಡವಳಿಕೆಯಿಂದಲೂ ಜನರಿಗೆ ತುಂಬಾ ಹತ್ತಿರವಾಗಿದ್ದರು. ಘಟಾನುಘಟಿ ಸದಸ್ಯರ ಜೊತೆ ಪೈಪೋಟಿ ನಡೆಸಿ, ಕೊನೆಗೆ ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ದರು. ಬಿಗ್‌ಬಾಸ್ ಮುಗಿದ ಬಳಿಕ ರೂಪೇಶ್ ಶೆಟ್ಟಿ ಅವರಿಗೆ ಹಲವು ಕಡೆ ಉತ್ತಮ ಗೌರವ ಲಭಿಸಿದ್ದು, ಇದೀಗ ಶೆಟ್ರು ದುಬೈಗೆ ಹಾರಿದ್ದಾರೆ.

ಈ ಬಗ್ಗೆ ಸೋಷಿಯಲ್ಸ್ ಗಳಲ್ಲಿ ಕುತೂಹಲ ಮೂಡಿದ್ದು, ರೂಪೇಶ್ ದುಬೈಗೆ ಯಾಕೆ ಹೋಗಿರಬಹುದು ? ಹೊಸ ಸಿನಿಮಾ ಮಾಡುತ್ತಿದ್ದಾರೆಯೇ ? ಎಂಬ ಹಲವು ಪ್ರಶ್ನೆಗಳು ಮೂಡಿವೆ. ಆದರೆ ಬಿಗ್ ಬಾಸ್ ವಿನ್ನರ್ ದುಬೈಗೆ ಹಾರಿದ್ದು ಯಾಕಂದ್ರೆ, ದುಬೈನಲ್ಲಿ ಯುಎಇ ಥ್ರೋಬಾಲ್ ಸಂಸ್ಥೆಯವರು ರೂಪೇಶ್ ಶೆಟ್ಟಿಗೆ ಆಹ್ವಾನ ನೀಡಿದ್ದರು. ಈ ಕಾರಣಕ್ಕಾಗಿ ದೊಡ್ಮನೆ ವಿನ್ನರ್ 3 ದಿನ ದುಬೈಗೆ ಹೋಗಿದ್ದಾರೆ.

ಈ ಬಗ್ಗೆ ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ ಕೂಡ, “ಎಲ್ಲರಿಗೂ ನಮಸ್ಕಾರ ನಾನು ದುಬೈಗೆ ಬರ್ತಾ ಇದ್ದೇನೆ. ತುಂಬಾ ಜನ ದುಬೈಗೆ ಬನ್ನಿ, ಮೀಟ್ ಆಗೋಣ ಎಂದು ಕರೆದಿದ್ದರು. ನಾನು 3 ದಿನ ಅಲ್ಲೇ ಇರುತ್ತೇನೆ ಎಲ್ಲರನ್ನೂ ಮೀಟ್ ಆಗುತ್ತೇನೆ. ಫೆಬ್ರವರಿ 4,5,6 ರಂದು ದುಬೈನಲ್ಲಿ ಇರುತ್ತೇನೆ. ಹಾಗೇ, ಅಭಿಮಾನಿಗಳೇ ನಿಮ್ಮನ್ನು ಭೇಟಿಯಾಗುವುದು ನನಗೆ ತುಂಬಾ ಖುಷಿಕೊಡುವ ವಿಚಾರ. ಖಂಡಿತ ನಿಮ್ಮನ್ನು ಭೇಟಿ ಆಗುತ್ತೇನೆ” ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

https://www.instagram.com/reel/CoM1QxSD-UM/?igshid=Yzg5MTU1MDY=

ಸದ್ಯ ರೂಪೇಶ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಾಗೂ ವಿನ್ನರ್ ಆಗಿ ಹೊರಗೆ ಬಂದಾಗಲೂ ಸಿನಿಮಾಗಳನ್ನು ಮಾಡಬೇಕು ಅಂದಿದ್ದರು. ಇದೀಗ ಹಲವು ಸಿನಿಮಾಗಳಲ್ಲಿ ಬ್ಯುಸ್ ಆಗಿದ್ದಾರೆ ದೊಡ್ಮನೆ ವಿನ್ನರ್. ಹಾಗೇ ಹಲವು ಸನ್ಮಾನ, ಗೌರವಗಳು ಹರಿದು ಬರುತ್ತಿದ್ದು, ವಿಭಿನ್ನ ರೀತಿಯಲ್ಲಿ ಜನರ ಮುಂದೆ ಗುರುತಿಸಿಕೊಳ್ಳುತ್ತಿದ್ದಾರೆ.

Leave A Reply

Your email address will not be published.