ವಜ್ರದ ನೆಕ್ಲೇಸ್ ಕದ್ದು ಸಿಕ್ಕಿಬಿದ್ದ ಕಳ್ಳ ‘ಇಲಿ’! ಸಿಸಿ ಕ್ಯಾಮೆರಾದ ಮೂಲಕ ಗೊತ್ತಾಯ್ತು ಕಳ್ಳತನದ ಅಸಲಿಯತ್ತು!

ಅದೊಂದು ಸಿಸಿ ಕ್ಯಾಮರದ ವಿಡಿಯೋ ಸದ್ಯ ಎಲ್ಲೆಡೆ ಭಾರೀ ವೈರಲ್ ಆಗ್ತಿದೆ. ಕೇವಲ ವೈರಲ್ ಆಗೋದು ಮಾತ್ರವಲ್ಲ, ನೋಡುಗರೆಲ್ಲರಿಗೂ ಅಚ್ಚರಿ, ಅಘಾತದ ಜೊತೆಗೆ ನಕ್ಕು ನಗುವಂತೆ ಮಾಡಿದೆ. ಹಾಗಾದ್ರೆ ಯಾವ್ದಪ್ಪಾ ಆ ವಿಡಿಯೋ ಅನ್ಕೊಳ್ತಿದ್ದೀರಾ? ಇಲ್ಲಿದೆ ನೋಡಿ ಆ ಗಮ್ಮತ್ತಿನ ವಿಚಾರ.

ಅದೊಂದು ವಜ್ರದಂಗಡಿಯಲ್ಲಿ ಸಂಜೆ ಇದ್ದಂತಹ ವಜ್ರದ ನೆಕ್ಲೇಸ್, ಬೆಳಗಾಗುವುದರೊಳಗೆ ಮಂಗಮಾಯವಾಗಿದೆ. ಬೆಳಿಗ್ಗೆ ಅಂಗಡಿ ಬಾಗಿಲು ತೆಗೆದ ಮಾಲೀಕನಿಗೆ ನೆಕ್ಲೇಸ್ ಇಲ್ಲದ್ದನ್ನು ಕಂಡು ಕೈಕಾಲೇ ಆಡದಂತಾಗಿದೆ. ಅದೂ ಅಲ್ದೆ, ಅಂಗಡಿ ಬಾಗಿಲು ಮುಚ್ಚಿದ ಹಾಗೆ ಇದೆ, ಎಲ್ಲೂ ಗೋಡೆ ಒಡೆದದ್ದಾಗಲಿ, ಬೀಗ ಅಥವಾ ಬಾಗಿಲು ಒಡೆದ ಕುರುಹುಗಳಾಗಲಿ ಇಲ್ಲ! ಅಯ್ಯೋ ದೇವ್ರೇ ಹಾಗಾದ್ರೆ ಕೋಟಿ ಬೆಲೆಬಾಳೋ ನೆಕ್ಲೇಸ್ ಏನಾಯ್ತಪ್ಪಾ ಎಂದು ಕಂಗಾಲಾದ ಮಾಲೀಕ ತಕ್ಷಣ ಸಿಸಿ ಕ್ಯಾಮರ ಚೆಕ್ ಮಾಡಿದ್ದಾನೆ. ಆಗ ಗೊತ್ತಾಗಿದೆ ನೋಡಿ ಅಸಲಿಯತ್ತಿನ ಗಮ್ಮತ್ತು.

ಆಭರಣದ ಅಂಗಡಿಯಲ್ಲಿರುವ ಗೊಂಬೆ ಮಹಿಳೆಯ ಕುತ್ತಿಗೇಯಲ್ಲಿ ವಜ್ರದ ನೆಕ್ಲೇಸ್ ಇರುತ್ತದೆ. ಬಳಿಕ ಛಾವಣಿಯಿಂದ ಇಲಿಯೊಂದು ಮೆಲ್ಲನೆ ಇಳಿಯುವುದು ಕೂಡಾ ಕಾಣಿಸುತ್ತದೆ. ಹೀಗೆ ಬಂದ ಇಲಿ ನೆಕ್ಲೇಸನ್ನು ಹಿಡಿದುಕೊಂಡು ಮತ್ತೆ ಬಂದ ದಾರಿಯಲ್ಲೇ ಓಡಿಬಿಡುತ್ತದೆ! ಇದನ್ನು ನೋಡಿದ ಮಾಲಿಕನಿಗೆ ಅಚ್ಚರಿ, ಆಘಾತ ಎಲ್ಲವೂ ಒಮ್ಮೆಲೇ ಆಗಿದೆ.

ಬಳಿಕ ಆತ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ‘ಈ ಇಲಿ ಯಾರಿಗಾಗಿ ವಜ್ರದ ನೆಕ್ಲೇಸ್ ತೆಗೆದುಕೊಂಡು ಹೋಗಿರಬಹುದು’ ಎಂಬ ಕ್ಯಾಪ್ಶನ್‌ನೊಂದಿಗೆ ಹಂಚಿಕೊಂಡಿದ್ದಾನೆ. ಕೆಲವು ನಿಮಿಷವಿರುವ ಈ ವಿಡಿಯೋ ಕ್ಲಿಪ್ ನಲ್ಲಿನ ದೃಶ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿ ಎಲ್ಲರ ಗಮನ ಸೆಳೆದಿದೆ. ಅಂತೂ ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ.

ಈ ದೃಶ್ಯ ಎಲ್ಲಿಯದ್ದು ಮತ್ತು ಯಾವಾಗ ಸೆರೆಯಾಗಿದ್ದು, ಇದಾದ ಬಳಿಕ ಏನಾಯ್ತು, ಇದು ನಿಜವಾದ ನೆಕ್ಲೇಸಾ ಅಥವಾ ಪ್ರದರ್ಶನಕ್ಕೆಂದು ಮಳಿಗೆಯಲ್ಲಿ ಇಟ್ಟಿದ್ದಾ ಎಂಬೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ, ಈ ವಿಡಿಯೋ ಈಗ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ, ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಜತೆಗೆ, ಈ ದೃಶ್ಯ ಕಂಡ ಹಲವರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನಿಮಗೂ ಈ ದೃಶ್ಯ ಅಚ್ಚರಿಯ ಜತೆಗೆ ನಗು ತರಿಸಿರಬಹುದು.

https://twitter.com/RajeshHinganka2/status/1619374003113852930?t=NEd-dD5_PfAx_LbL4LkMlg&s=08

Leave A Reply

Your email address will not be published.