ಕೇಕನ್ನು ಬಟ್ಟೆ ತರ ವಿನ್ಯಾಸಗೊಳಿಸಿ, ಧರಿಸಿದ ಯುವತಿ! ವಯ್ಯಾರದಲ್ಲಿ 5ಮೀಟರ್ ದೂರ ನಡೆದ್ಲು: ಇಲ್ಲಿದೆ ನೋಡಿ ಆ ವಿಡಿಯೋ
ಇಂದಿನ ದಿನಗಳಲ್ಲಂತೂ ಕೇಕ್ ಇಲ್ಲದೇ ಯಾವುದೇ ಕಾರ್ಯಕ್ರಮಗಳು ನಡೆಯದು. ಮೊದಲು ಕೇವಲ ಬರ್ತ್ ಡೇ ಸೆಲಬ್ರೇಟ್ ಮಾಡೋಕೆ ಕಟ್ ಆಗ್ತಿದ್ದ ಕೇಕ್, ಇಂದು ಮದುವೆ, ಎಂಗೇಜ್ಮೆಂಟ್, ಎಂದು ಎಲ್ಲಾ ಸಂಭ್ರಮಗಳ ಆಚರಣೆಗೂ ಕಟ್ ಆಗ್ತಿದೆ. ಇದುವರೆಗೂ ನೀವು ವಿವಿಧ ನಮೂನೆಯ, ರುಚಿಯಾದ ಕೇಕ್ ನೋಡಿರ್ತೀರಿ. ಅಂದ್ರೆ ಗಿಟಾರ್ ರೀತಿಯ ಕೇಕ್ ಇಂದ ಹಿಡಿದು ಚಿಟ್ಟೆ, ಕಾರು, ಬೈಕ್, ಪಿರಮಿಡ್ ಅಷ್ಟೇ ಏಕೆ ಚಪ್ಪಲಿ ಶೇಪಿನ ಕೇಕನ್ನೂ ನೋಡಿದ್ದೀರಿ ಅಲ್ವಾ? ಆದ್ರೆ ಬಟ್ಟೆ ರೀತಿಯ ಕೇಕನ್ನು ಎಲ್ಲಾದ್ರೂ ನೋಡಿರುವಿರಾ? ಇಲ್ಲೊಬ್ಬಳು ಯುವತಿ, ಬಿಳಿ ಕೇಕ್ ಡ್ರೆಸ್ ಧರಿಸಿ ಭಾರೀ ಸುದ್ದಿಯಾಗುತ್ತಿದ್ದಾಳೆ. ಅದೂ ಕೂಡ ವಿಶ್ವದಲ್ಲೇ ಧರಿಸಬಹುದಾದ ಅತಿದೊಡ್ಡ ಕೇಕ್. ಈ ವಿಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಎಲ್ಲರನ್ನೂ ಬೆರಗಾಗಿಸಿದೆ.
ಹೌದು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬಿಳಿ ಕೇಕ್ ಡ್ರೆಸ್ ಧರಿಸಿದ್ದಾಳೆ. ಅವಳ ಸುತ್ತಲ್ಲಿರುವ ಜನರು ಆಕೆ ಧರಿಸಿರುವುದರಿಂದ ಕೇಕ್ ತುಂಡುಗಳನ್ನು ಕತ್ತರಿಸುವುದನ್ನು ಸಹ ಕಾಣಬಹುದು. ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿರುವ ಈ ವೀಡಿಯೊ ಇದೀಗ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸ್ಥಾಪಿಸಿದ ಮಾರ್ಗಸೂಚಿಗಳ ಪ್ರಕಾರ, ಐದು ಮೀಟರ್ (16 ಅಡಿ) ಈ ಬಟ್ಟೆಯಲ್ಲಿ ನಡೆದು ವಿಶ್ವದಲ್ಲಿಯೇ ಧರಿಸಬಹುದಾದ ಅತಿದೊಡ್ಡ ಕೇಕ್ ಎಂಬ ಮಾನ್ಯತೆಗೆ ಪಾತ್ರವಾಗಿದೆ.
https://www.instagram.com/reel/CoGAsVLDyAo/?igshid=YmMyMTA2M2Y=
ಸ್ವಿಟ್ಜರ್ಲೆಂಡ್ನ ಸ್ವಿಸ್ ವರ್ಲ್ಡ್ ವೆಡ್ಡಿಂಗ್ ಈವೆಂಟ್ನಲ್ಲಿ ಅನಾವರಣಗೊಳಿಸಲಾದ ಈ ಕೇಕ್, ಸುಮಾರು 131.15 ಕಿಲೋಗ್ರಾಂಗಳಷ್ಟು ತೂಕವಿದ್ದು, ವಿಶ್ವದ ಅತಿದೊಡ್ಡ ಧರಿಸಬಹುದಾದ ಕೇಕ್ ಘೋಷಿಸಲಾಗಿದೆ. ಇದು ಈ ಕೇಕ್ನ್ನು ನತಾಶಾ ಕೊಲಿನ್ ಕಿಮ್ ಫಾಹ್ ಲೀ ಫೋಕಾಸ್ ಎಂಬ ಹೆಸರಿನ ಸ್ವಿಟ್ಜರ್ಲೆಂಡ್ ವ್ಯಕ್ತಿ ವಿನ್ಯಾಸಗೊಳಿಸಿದ್ದಾರೆ. ಈ ಕೇಕಿನ ಕೆಳಗಿನ ಭಾಗವನ್ನು ಅಲ್ಯೂಮಿನಿಯಂ ಫ್ರೇಮ್ ಮತ್ತು ಎರಡು ಲೋಹದ ಬೋಲ್ಟ್‌ಗಳನ್ನು ಬಳಸಿ ತಯಾರಿಸಲಾಗಿದೆ. ಮೇಲಿನ ಭಾಗವನ್ನು ಸಕ್ಕರೆ ಪೇಸ್ಟ್ ಮತ್ತು ಫಾಂಡೆಂಟ್ ಮಿಶ್ರಣವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.