ಹಾಲಿವುಡ್​ ಚಿತ್ರರಂಗವನ್ನಾಳಿದ ನಟನ ಲವ್ ಬ್ರೇಕಪ್ ಪತ್ರವೀಗ 13 ಲಕ್ಷಕ್ಕೆ ಮಾರಾಟ! ಯಾರು ಆ ನಟ? ಆ ಪತ್ರದ ವಿಶೇಷತೆ ಏನು?

ಎಲ್ಲರ ಬದುಕಲ್ಲಿ ಹೆಚ್ಚಿನವರಿಗೆ ಒಬ್ಬ ಹೀರೋ ಅಥವಾ ರೋಲ್ ಮಾಡೆಲ್ ಇದ್ದೇ ಇರುತ್ತಾರೆ. ಅಂತವರಿಗೆ ತಮ್ಮ ಆ ನೆಚ್ಚಿನ ವ್ಯಕ್ತಿ ಅಂದ್ರೆ ಪಂಚ ಪ್ರಾಣ. ಹೇ, ಬದುಕಿದರೆ ಇವನಂತೆ ಬದುಕ್ಬೇಕಪ್ಪ ಎಂದು ಎಲ್ಲದರಲ್ಲೂ ಅವರನ್ನೇ ಅನುಕರಿಸಿಕೊಂಡು ಬದುಕುತ್ತಿರುತ್ತಾರೆ. ಅಲ್ಲದೆ ಅವರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಹೆಚ್ಚಿನವರಿಗೆ ಈ ರೀತಿ ಹೀರೋಗಳಾಗಿ ಇರೋರು ಸಿನಿಮಾ ನಟರು ಅಥವಾ ಕ್ರಿಕೆಟ್ ಆಟಗಾರರೇ ಅನ್ಬೋದು. ಇವರ ಅಭಿಮಾನ ಎಷ್ಟಿರುತ್ತದೆ ಅಂದ್ರೆ ತಮಗಿಷ್ಟದ ಈ ವ್ಯಕ್ತಿಗಳು ತಮ್ಮ ಯಾವುದಾದರೊಂದು ವಸ್ತುಗಳನ್ನು ಹರಾಜಿಗಿಟ್ಟರೆ ಅದು ಎಷ್ಟೇ ದುಬಾರಿಯಾದರೂ ಎದ್ದು ಬಿದ್ದು ಕೊಂಡ್ಕೊಳ್ಳುತ್ತಾರೆ. ಇಂತಹ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ. ಇದೀಗ ಇಂತಹದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಇದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಯಾಕೆ ಗೊತ್ತಾ? ಹಾಗಿದ್ರೆ ಈ ಸ್ಟೋರಿ ನೋಡಿ.

ತಮ್ಮ ಪ್ರೀತಿ ಪಾತ್ರರರು ಬಳಸುವ ಯಾವುದಾದರೊಂದು ವಸ್ತುಗಳು ನಮ್ಮ ಬಳಿ ಇರಲಿ ಎಂಬುದು ಎಲ್ಲಾ ಅಭಿಮಾನಿಗಳ ಆಸೆ. ಈ ರೀತಿ ಅವರು ಬಳಸಿದ ಕಾರು, ಬೈಕು, ಬಟ್ಟೆ, ಪೆನ್ನು ಎಂದೆಲ್ಲಾ ಅನೇಕ ವಸ್ತುಗಳನ್ನು ಹರಾಜು ಹಾಕಿ, ಅದನ್ನು ಕೋಟಿ ಕೋಟಿ ಕೊಟ್ಟು ಕೊಂಡುಕೊಂಡಿರುವುದನ್ನು ನಾವು ಕಂಡಿದ್ದೇವೆ. ಕಾಣುತ್ತಿರುತ್ತೇವೆ. ಇಂದು ಕೂಡ ಒಬ್ಬ ಅಭಿಮಾನಿ ತನ್ನ ನೆಚ್ಚಿನ ಖ್ಯಾತ ಸಿನಿಮಾ ನಟನ ಬಳಿಯಿದ್ದ ವಸ್ತುವೊಂದು ಬರೋಬ್ಬರಿ 13ಲಕ್ಷ ಕ್ಕೆ ಹರಾಜಿನಲ್ಲಿ ಕೊಂಡುಕೊಂಡಿದ್ದಾನೆ. ಇದರಲ್ಲಿ ಏನು ವಿಶೇಷ ಎಂದು ನೀವು ಕೇಳಬಹುದು. ಹೌದು ಇದು ವಿಶೇಷವೇ! ಯಾಕೆ ಗೊತ್ತಾ. ಅಷ್ಟೊಂದು ದುಬಾರಿ ಬೆಲೆಗೆ ಮಾರಾಟವಾದದ್ದು ಒಬ್ಬ ನಟನ ಲವ್ ಬ್ರೇಕಪ್ ಪತ್ರ! ಹೌದು, ನಾಯಕನೊಬ್ಬ ತನ್ನ ಗೆಳತಿಯಿಂದ ಬ್ರೇಕ್​ ಅಪ್​ ಮಾಡಿಕೊಂಡ ಬಳಿಕ ಬರೆದಿರುವ ಪತ್ರವೊಂದು ಈಗ 13ಲಕ್ಷಕ್ಕೆ ಮಾರಾಟವಾಗಿದ್ದು, ಸಾಕಷ್ಟು ಸುದ್ದಿಯಾಗುತ್ತಿದೆ.

ಹಲವು ದಶಕಗಳವರೆಗೆ ಹಾಲಿವುಡ್​ ಚಿತ್ರರಂಗವನ್ನು ಆಳಿದ, ಯುವಜನಾಂಗದ ಸೆಕ್ಸ್‌ ಸಿಂಬಾಲ್ ಎಂದೇ ಬಿಂಬಿತನಾಗಿದ್ದ ನಟ ಮರ್ಲಾನ್ ಬ್ರಾಂಡೊ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇವರು ಸ್ಟ್ರೀಟ್‌‌ ಕಾರ್ ನೇಮ್ಡ್ ಡಿಸೈರ್ ಚಿತ್ರದಲ್ಲಿನ ಸ್ಟಾನ್ಲೆ ಕೊವಲಾಸ್ಕಿ ಪಾತ್ರ ಮತ್ತು ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ ಗಳಿಸಿ ವಿಶ್ವಖ್ಯಾತಿ ಗಳಿಸಿರುವ ಈ ನಟ, ಆನ್ ದಿ ವಾಟರ್‌ಫ್ರಂಟ್‌ ಚಿತ್ರದಲ್ಲಿ ತನ್ನ ಟೆರಿ ಮಲಾಯ್ ಪಾತ್ರಕ್ಕೆ ಆಸ್ಕರ್ ಪ್ರಶಸ್ತಿಯನ್ನು ಪಡೆದಂಥವರು. ಸಿನಿಮಾ ಕ್ಷೇತ್ರದಲ್ಲಿರುವ ಬಹುತೇಕ ಎಲ್ಲಾ ಪ್ರಶಸ್ತಿಗಳನ್ನೂ ಬಾಚಿಕೊಂಡು ಹಲವಾರು ದಶಕಗಳವರೆಗೆ ಚಿತ್ರರಂಗವನ್ನು ಆಳಿ ಕೊನೆಗೆ 2004ರಲ್ಲಿ ಮೃತಪಟ್ಟಿದ್ದಾರೆ. ಇದೇ ನಟ ನಾಯಕ 1940ರ ದಶಕದಲ್ಲಿ ತಮ್ಮ ಗೆಳತಿಗೆ ಬರೆದಿದ್ದ ಬ್ರೇಕಪ್​ ಪತ್ರ ಹರಾಜಿನಲ್ಲಿ 15 ಸಾವಿರ ಡಾಲರ್, ಅಂದರೆ 13 ಲಕ್ಷಕ್ಕೆ ಸೇಲ್ ಆಗಿದೆ!. ಹಾಗಾದ್ರೆ ಆ ಪತ್ರದಲ್ಲಿ ಅಂತದ್ದೇನಿದೆ ಗೊತ್ತಾ?

ಇವರು ಮೃತಪಟ್ಟು 20 ವರ್ಷಗಳ ಬಳಿಕ ಇವರು 1940ರ ಸುಮಾರಿಗೆ ಗೆಳತಿಗೆ ಬರೆದಿದ್ದ ಬ್ರೇಕಪ್​ ಲೆಟರ್​ ಸದ್ದು ಮಾಡುತ್ತಿದ್ದು, ಫ್ರೆಂಚ್ ನಟಿ ಸೊಲಾಂಜ್ ಪೊಡೆಲ್ ಅವರಿಗೆ ಬರೆದಿರುವ ಬ್ರೇಕಪ್ ಪತ್ರ ಇದಾಗಿದೆ. ನ್ಯೂಯಾರ್ಕ್‌ನಲ್ಲಿ ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್ ತಯಾರಿಕೆಯ ಸಮಯದಲ್ಲಿ ಇಬ್ಬರೂ ಭೇಟಿಯಾಗಿದ್ದರು. ನಂತರ ಅವರ ಪ್ರೀತಿ ನಿಧಾನವಾಗಿ ಅರಳಿತು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. ಆ ಸಮಯದಲ್ಲಿ ಅವರು ಈ ಪತ್ರವನ್ನು ಬರೆದಿದ್ದರು. ಮರ್ಲಾನ್ ಬ್ರಾಂಡೊ ಅವರು ಬರೆದಿದ್ದ ಈ ಪತ್ರದಲ್ಲಿ ತನ್ನ ಗೆಳತಿಯ ಜೊತೆ ಏಕೆ ಬ್ರೇಕಪ್​ ಮಾಡಿಕೊಳ್ಳುತ್ತಿದ್ದೇನೆ ಎಂದು ವಿವರಿಸಿದ್ದಾರೆ.

ಬ್ರಾಂಡೊ ಈ ಪತ್ರದಲ್ಲಿ ‘ದಯವಿಟ್ಟು ಈ ಪತ್ರವನ್ನು ಮುಕ್ತ ಹೃದಯದಿಂದ ಸ್ವೀಕರಿಸು. ಏಕೆಂದರೆ ಮೂರು ಬಾರಿ ಬರೆದಿರುವುದು ಸರಿಯಾಗದೇ, ಬಹಳ ಯೋಚನೆ ಮಾಡಿ ನಾಲ್ಕನೇ ಬಾರಿಗೆ ಪ್ರಾಮಾಣಿಕವಾಗಿ ಬರೆದಿರುವೆ. ಆದ್ದರಿಂದ ನೀನು ನನ್ನನ್ನು ಸಂಪೂರ್ಣ ಬೋರ್ ಎಂದು ಪರಿಗಣಿಸುವುದಿಲ್ಲ ಎಂಬ ವಿಶ್ವಾಸ ನನಗೆ ಇದು. ನಾನು ನಿನಗೆ ನನ್ನ ಬಗ್ಗೆ ವಿವರಿಸಲು ಈ ಪತ್ರವನ್ನು (letter) ಬರೆಯುತ್ತಿದ್ದೇನೆ. ಅವಮಾನವನ್ನು ಬಯಸುವುದಿಲ್ಲ. ನೀನು ಯಾವಾಗಲೂ ವಾತ್ಸಲ್ಯಪೂರ್ವಕವಾಗಿ ಇರುವಾಕೆ. ನಿನ್ನ ಬಗ್ಗೆ ಗೌರವ ಮತ್ತು ಮೆಚ್ಚುಗೆ ಇದೆ. ಅದು ನನ್ನ ಹೃದಯದಲ್ಲಿ ಶಾಶ್ವತವಾಗಿ ಇರಲಿದೆ’ ಎಂದು ಪತ್ರದಲ್ಲಿ ಬರೆಯುವ ಮೂಲಕ ಬ್ರಾಂಡೊ ತನ್ನ ಗೆಳತಿಗೆ ಕ್ಷಮೆಯಾಚಿಸಿ, ಬ್ರೇಕಪ್​ ಮಾಡಿಕೊಂಡಿದ್ದರು.

Leave A Reply

Your email address will not be published.