Cleaning Tips : ಹೂವಿನ ಕುಂಡದ ತುಕ್ಕು ಕಲೆಗಳನ್ನು ಹೋಗಲಾಡಿಸಲು ಈ ವಸ್ತು ಉಪಯೋಗಿಸಿ, ಅಂದ ಹೆಚ್ಚಿಸಿ

ಗಾರ್ಡನ್ ಪ್ರಿಯರು ತಮ್ಮ ಮನೆಯ ಬಾಲ್ಕನಿಯನ್ನು ಬಣ್ಣ ಬಣ್ಣದ ಹೂವುಗಳು, ಸುಂದರವಾದ ಸಸ್ಯಗಳಿಂದ ಅಲಂಕರಿಸುತ್ತಾರೆ. ಇದರಿಂದ ಮನೆಯ ಬಾಲ್ಕನಿಯು ಆಕರ್ಷಕವಾಗಿ ಕಾಣುವುದಲ್ಲದೆ, ಪರಿಸರ ಪ್ರೇಮಿಗಳ ಮನಸ್ಸಿಗೂ ಖುಷಿ ನೀಡುತ್ತದೆ. ಇತ್ತೀಚೆಗೆ ನಿರ್ಮಾಣವಾಗುತ್ತಿರುವ ಕೆಲವು ಮನೆಗಳಲ್ಲಿ ಅಂಗಳವೇ ಇರುವುದಿಲ್ಲ. ಇನ್ನೆಲ್ಲಿ ಗಿಡಗಳನ್ನು ಬೆಳೆಸಲು ಜಾಗ ಇರುತ್ತೆ ಹೇಳಿ? ಹಾಗಾಗಿ ಮನೆಯ ಮೆಟ್ಟಿಲ ಬಳಿ, ಬಾಲ್ಕನಿ ಅಥವಾ ಕಿಟಕಿಗಳಲ್ಲಿ ಹೂಕುಂಡವನ್ನು ಇಡುತ್ತಾರೆ. ಮನೆಯಲ್ಲಿ ಹೂಕುಂಡ ಇದ್ದರೆ ಮನೆ ಸುಂದರವಾಗಿ ಕಾಣುವುದಲ್ಲದೆ ಆರೋಗ್ಯ ದೃಷ್ಟಿಯಿಂದಲು ಕಣ್ಣಿಗೆ ತಂಪಾಗಿರುತ್ತದೆ ಹಾಗೂ ಕಣ್ಣಿನ ಆಯಸ್ಸನ್ನು ವೃದ್ಧಿಸುತ್ತದೆ. ಮನೆಯ ಬಾಲ್ಕನಿಯೇನೋ ಹೂಕುಂಡಗಳಿಂದ ಕಂಗೊಳಿಸುತ್ತದೆ, ಆದರೆ ಮಡಕೆಗಳಿಂದಾಗಿ ನೆಲದ ಮೇಲೆ ಕಲೆಯಾಗುತ್ತದೆ. ನೀವು ಈ ಸಮಸ್ಯೆಯನ್ನು ಎದುರಿಸಿದ್ದೀರಾ? ಹಾಗಾದ್ರೆ, ಚಿಂತೆ ಬೇಡ ನಾವು ಹೇಳೋ ಈ ಸಿಂಪಲ್ ಟ್ರಿಕ್ ಅನ್ನು ಅನುಸರಿಸಿದರೆ ಸಾಕು. ಮೊಂಡುತನದ ಕಲೆ ಎಲ್ಲಾ ಕ್ಷಣಾರ್ಧದಲ್ಲಿ ಮಾಯ ಆಗಿ ಬಿಡುತ್ತೆ.

ನಿಂಬೆ ರಸ ಮತ್ತು ಉಪ್ಪು:- ಕುಂಡದ ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಈ ಎರಡು ಅಡುಗೆ ಪದಾರ್ಥಗಳು ಬೆಸ್ಟ್ ಅಂತನೇ ಹೆಳ್ಬೋದು. ಮೊದಲು ಬಟ್ಟಲಿನಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡು, ಅದಕ್ಕೆ ನಿಂಬೆ ರಸವನ್ನು ಬೆರೆಸಿ ಕಲೆಗಳ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ, ನೆಲವನ್ನು ಸ್ಕ್ರಬ್ ಮಾಡಿ ಮತ್ತು ಅದನ್ನು ಸ್ವಚ್ಛಗೊಳಿಸಿ. ಮಡಕೆಗಳ ಕಲೆಗಳನ್ನು ತೊಡೆದುಹಾಕಲು ನೀವು ಬೋರಾಕ್ಸ್ ಪುಡಿಯನ್ನು ಸಹ ಬಳಸಬಹುದು.

ಅಡುಗೆ ಸೋಡಾ :- ಮೊದಲು ಮಡಕೆಗಳನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಿರಿ. ಈಗ 3-4 ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ನೆಲದ ಮೇಲೆ ಗುರುತುಗಳಿದ್ದಲ್ಲಿ ಈ ಪೇಸ್ಟ್ ಅನ್ನು ಹಚ್ಚಿ ಮತ್ತು 10 ನಿಮಿಷಗಳ ನಂತರ ಕ್ಲೀನಿಂಗ್ ಬ್ರಷ್‌ನಿಂದ ನೆಲವನ್ನು ಉಜ್ಜಿರಿ. ಕಲೆಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಮಾಯವಾಗುವುದನ್ನು ನೀವು ನೋಡುತ್ತೀರಿ.

ಅಮೋನಿಯಾ ಪೌಡರ್:- ಬಾಲ್ಕನಿಯಿಂದ ಮಡಕೆಗಳ ಕೊಳಕು ಕಲೆಗಳನ್ನು ತೆಗೆದುಹಾಕಲು ಅಮೋನಿಯಾ ಪೌಡರನ್ನು ಬಳಸಬಹುದು. 3-4 ಚಮಚ ಅಮೋನಿಯಾ ಪುಡಿಯನ್ನು, 4-5 ಕಪ್ ನೀರಿನಲ್ಲಿ ಮಿಶ್ರಣ ಮಾಡಬೇಕು. ಈಗ ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕುಂಡಗಳ ಕಲೆಗಳಿರುವಡೆ ಈ ಮಿಶ್ರಣವನ್ನು ಸಿಂಪಡಿಸಿ. ಸ್ವಲ್ಪ ಸಮಯ ಕಾಯಿರಿ ಮತ್ತು ಬ್ರಷ್‌ನಿಂದ ಉಜ್ಜಿರಿ. ಬಾಲ್ಕನಿಯಲ್ಲಿ ನೆಲ ಫಳ ಫಳ ಎಂದು ಹೊಳೆಯುತ್ತದೆ.

ಹೈಡ್ರೋಜನ್ ಪೆರಾಕ್ಸೈಡ್:- ನೀವು ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ ಸಹ ಬಾಲ್ಕನಿ ನೆಲವನ್ನು ಸ್ವಚ್ಛಗೊಳಿಸಬಹುದು. 5-7 ಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಮಿಶ್ರಣ ಮಾಡಿ ಮತ್ತು ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಈಗ ಅವುಗಳನ್ನು ಕಲೆಗಳ ಮೇಲೆ ಸಿಂಪಡಿಸಿರಿ. 5-10 ನಿಮಿಷಗಳ ನಂತರ ಬ್ರಷ್‌ನಿಂದ ಉಜ್ಜಿದರೆ, ನೆಲದ ಮೇಲಿನ ಕಲೆಗಳು ಮಾಯವಾಗಿ ಬಿಡುತ್ತೆ.

Leave A Reply

Your email address will not be published.