ಶಿಕ್ಷಣ ಇಲಾಖೆ ನೀಡಿತು ಎಂ ಎಸ್ ಧೋನಿ ಶಾಲೆಗೆ ಶಾಕಿಂಗ್ ನ್ಯೂಸ್ !
ಶಿಕ್ಷಣ ಎನ್ನುವುದು ಜ್ಞಾನ. ಶಿಕ್ಷಣ ಕಲಿಸುವ ಸಂಸ್ಥೆಯನ್ನು ದೇಗುಲ ಎಂದು ಕರೆಯುತ್ತಾರೆ. ಇಲ್ಲಿ ಸರಸ್ವತಿ ನೆಲೆಸುತ್ತಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಇವೆಲ್ಲ ಈಗ ಬಿಜಿನೆಸ್ ಆಗಿ ಪರಿವರ್ತನೆಯಾಗಿದೆ. ಏಕೆಂದರೆ ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದು ಸಿಬಿಎಸ್ಇ ಹಾಗೂ ಇತರೆ ಪಠ್ಯ ಬೋಧನೆ ಮಾಡಲಾಗಿದೆ. ಈ ಕಾರಣದಿಂದ ಶಿಕ್ಷಣ ಇಲಾಖೆ ಈ ಎಲ್ಲಾ ನಕಲಿ ಸಂಸ್ಥೆಗಳಿಗೆ ನೋಟಿಸ್ ನೀಡಿದೆ. ಇದಕ್ಕೆ ಎಂ ಎಸ್ ಧೋನಿ ಸ್ಕೂಲ್ ಕೂಡಾ ಹೊರತಾಗಿಲ್ಲ. ಹಾಗಾಗಿ ಕ್ಯಾಪ್ಟನ್ ಕೂಲ್ ಧೋನಿ ಅವರ ಶಾಲೆಗೆ ಕೂಡಾ ರಾಜ್ಯ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.
ಇಲ್ಲಿನ ಸಿಂಗಸಂದ್ರದಲ್ಲಿ ಕಳೆದ ವರ್ಷವಷ್ಟೇ ಅಂದರೆ 2021-22ರಲ್ಲಿ ಶಾಲೆ ಆರಂಭವಾಗಿತ್ತು. ಎಂ ಎಸ್ ಧೋನಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಬೋಧನೆ ಮಾಡಲಾಗುತ್ತಿತ್ತು. ಇದೀಗ ಅನಧಿಕೃತ ಪಠ್ಯ ಬೋಧನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಧೋನಿ ಶಾಲೆಗೆ ನೋಟಿಸ್ ನೀಡಲಾಗಿದೆ. ಪ್ರಸಕ್ತ ವರ್ಷ ಧೋನಿ ಶಾಲೆಯಲ್ಲಿ ಒಟ್ಟು 248 ಮಕ್ಕಳು ದಾಖಲಾತಿ ಪಡೆದಿದ್ದರು. ಇದೀಗ ಧೋನಿ ಶಾಲೆ ಸೇರಿದಂತೆ ಬೆಂಗಳೂರಿನ 8 ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.
ಪೋಷಕರಿಂದ ಸಿಬಿಎಸ್ ಇ ಶಾಲೆ ಎಂದು ಹೇಳಿ ಲಕ್ಷ ಲಕ್ಷ ದುಡ್ಡು ತಗೊಂಡಿದ್ದಾರೆ ಎನ್ನಲಾಗಿದೆ. ಈ ಮಹಾವಂಚನೆ ಹಿನ್ನೆಲೆ ಏಂಟು ಆರ್ಕಿಡ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಮೈಸೂರು ರಸ್ತೆ, ನಾಗರಭಾವಿ, ಪಣತೂರು, ಹೊಮ್ಮದೇವನಹಳ್ಳಿ ಹರಳೂರು, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು ಉತ್ತರ ಜಿಲ್ಲೆಯ ಹೋನ್ನೆನಹಳ್ಳಿಯಲ್ಲಿರು ಆರ್ಕಿಡ್ ಶಾಲೆ ಹಾಗೂ ಹೊರಮಾವು ಭಾಗದಲ್ಲಿರುವ ಆರ್ಕಿಡ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಈ ಎಲ್ಲಾ ಶಾಲೆಗಳ ಜತೆಗೆ ಖ್ಯಾತ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದೋನಿ ಶಾಲೆಗೂ ಶಿಕ್ಷಣ ಇಲಾಖೆ ನೋಟಿಸ್ ನೀಡಿ, ಬಿಗ್ ಶಾಕ್ ನೀಡಲಾಗಿದೆ.