ಗಡ್ಡ ಬಿಟ್ಕೊಂಡು ಗಿನ್ನೆಸ್ ದಾಖಲೆಯತ್ತ ಹೊರಟ್ಳು ಮಹಿಳೆ! ಈ ಬಿಯರ್ಡ್ ಲೇಡಿಗಂತೂ ಎಲ್ಲೆಲ್ಲೂ ಡಿಮ್ಯಾಂಡಪ್ಪೋ ಡಿಮ್ಯಾಂಡು!
ಹುಡುಗರಿಗೆ, ಗಂಡಸರಿಗೆ ಗಡ್ಡ ಅಂದ್ರೆ ಒಂದು ರೀತಿಯ ಸೆಂಟಿಮೆಂಟ್ ಇರುತ್ತೆ. ಹೆಚ್ಚಿನ ಹುಡುಗಿಯರು ಗಡ್ಡಬಿಟ್ಟ ಹುಡುಗನನ್ನೇ ಲೈಕ್ ಮಾಡೋದ್ರಿಂದ ಹುಡುಗರಿಗೆ ಗಡ್ಡದ ಮೇಲೇ ಎಮೋಶನ್ ಇರುವುದು ಕಾಮನ್. ಅಲ್ಲದೆ ಬಗೆ ಬಗೆಯಾಗಿ ಗಡ್ಡಗಳಿಗೆ ಶೇಪ್ ಕೊಟ್ಟು ತಮ್ಮ ಅಂದವನ್ನು ಹೆಚ್ಚಿಸಿಕೊಂಡು, ಹುಡುಗಿಯರನ್ನು ತಮ್ಮತ್ತ ಸೆಳೆಯಲು ಗಡ್ಡ ಮೀಸೆಗಳು ಹುಡುಗರಿಗೆ ತುಂಬಾ ಸಹಾಯ ಮಾಡುತ್ತದೆ. ಒಟ್ನಲ್ಲಿ ಪುರುಷರಿಗೆ ಗಡ್ಡ, ಮೀಸೆಗಳು ಬರುವುದು ಕಾಮನ್. ಅದು ಪ್ರಕೃತಿ ನಿಯಮ. ಆದ್ರೆ ಹೆಂಗಸರಿಗೂ ಗಡ್ಡ ಬರುತ್ತಾ? ಅವರು ಕೂಡ ಗಡ್ಡ ಮೀಸೆ ಬಿಟ್ಟು ಹುಡುಗರ ಹಾಗೆ ಸ್ಟೈಲ್ ಮಾಡೋಕ ಆಸೆ ಪಡ್ತಾರಾ? ಅನ್ನೋ ಯೋಚನೆ ಎಂದಾದರೂ ನಿಮಗೆ ಬಂದಿದ್ಯಾ? ಇಲ್ಲೊಂದು ವಿಚಾರ ಇದಕ್ಕೆ ಸಂಬಂದಪಟ್ಟು ಸಖತ್ ಇಂಟ್ರೆಸ್ಟಿಂಗ್ ಆಗಿ ಇದೆ ನೋಡಿ.
ದಿನಬೆಳಗಾದರೆ ಸಾಕು ಒಬ್ಬರಲ್ಲ ಒಬ್ಬರು ತಮ್ಮ ವಿಚಿತ್ರವಾದ ವರ್ತನೆಗಳೊಂದಿಗೆ, ವಿಭಿನ್ನ ರೀತಿಯ ಕೆಲಸ ಕಾರ್ಯಗಳೊಂದಿಗೆ ಅಥವಾ ಇನ್ನಾವುದೋ ವಿಸ್ಮಯಗಳನ್ನು ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಂತೆಯೇ ಇಲ್ಲೊಬ್ರು ಮಹಿಳೆ ಹೀಗೆ ಫೇಮಸ್ ಆಗ್ತಿದ್ದು, ಒಂತರಾ ಎಲ್ಲರಿಗಿಂತ ವಿಭಿನ್ನ ರೀತಿಯ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ ಅನ್ಬೋದು. ಹೆಣ್ಣಿಗೂ ಗಡ್ಡಕ್ಕೂ ಸಂಬಂಧವೇ ಇಲ್ಲದಿರುವಾಗ ಉದ್ದ ಗಡ್ಡ ಬಿಟ್ಟ ಮಹಿಳೆ ಇರುವುದು ಬೆಳಕಿಗೆ ಬಂದಿದೆ. 37 ವರ್ಷದ ಜೆಸ್ಸಿಕಾ ತನ್ನ ಗಡ್ಡ ಮತ್ತು ಮೀಸೆ ಬೆಳೆಸಿ ಸಖತ್ ಸುದ್ದಿಯಲ್ಲಿದ್ದಾರೆ. ಅಲ್ಲದೆ ವಿಶ್ವದ ಅತಿ ಉದ್ದನೆಯ ಗಡ್ಡವನ್ನು ಹೊಂದಿರುವ ಮಹಿಳೆ ಎಂದು ಅವರು ಹೇಳಿಕೊಳ್ಳುತ್ತಾರೆ. ಈಗ ಗಿನ್ನಿಸ್ ಪುಸ್ತಕದಲ್ಲೂ ದಾಖಲೆ ಬರೆಯುವ ಆಸೆಯಲ್ಲಿದ್ದಾಳೆ. ಯಾರೀ ಜೆಸ್ಸಿಕಾ? ಇವಳಿಗೇಕೆ ಈ ದುರಾಲೋಚನೆ ಬಂತೆಂದು ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.
ಹೌದು, 37 ವರ್ಷದ ಜೆಸ್ಸಿಕಾ ಡಿ. ಜಾರ್ವಿನ್ಸ್ಕಿ ಎಂಬ ಮಹಿಳೆ ಗಡ್ಡ ಮತ್ತು ಮೀಸೆ ಹೊಂದಿದ್ದಾರೆ. ಅವಳನ್ನು ‘ಜೆಸ್ಸಾ ದಿ ಬಿಯರ್ಡೆಡ್ ಲೇಡಿ’ ಎಂದು ಕರೆಯಲಾಗುತ್ತದೆ. ಅವಳ ಗಡ್ಡ 15 ಇಂಚು ಉದ್ದವಾಗಿದೆ. ವಿಶ್ವದ ಅತಿ ಉದ್ದನೆಯ ಗಡ್ಡವನ್ನು ಹೊಂದಿರುವ ಮಹಿಳೆ ಎಂದು ಅವಳು ಖ್ಯಾತಿಯನ್ನೂ ಪಡೆದಿದ್ದಾಳೆ. ಇದರಿಂದ ಈಕೆಗೆ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಬರೆಯುವ ಆಸೆಯೂ ಇದೆಯಂತೆ. ಅದಕ್ಕಾಗಿ ಅವಳು ಸ್ವಲ್ಪ ಸಮಯ ಕಾಯಬೇಕಾಗಬಹುದು. ಯಾಕೆಂದ್ರೆ ವಿವಿಯನ್ ವಿಲ್ಲಾರ್ ಎಂಬ ಮಹಿಳೆ ಈಗಾಗಲೇ ಗಡ್ಡ ಬಿಟ್ಟಿದ್ದು, ಅದು ಅವಳಿಗಿಂತ ನಾಲ್ಕೂವರೆ ಇಂಚು ಉದ್ದವಾಗಿದೆ.
ಇದೆಲ್ಲದರೊಂದಿಗೆ, ಜೆಸ್ಸಿಕಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಫೈಬ್ರೊಮ್ಯಾಲ್ಗಿಯಾ ಎಂಬ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ರೋಗಗಳು ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತವೆ. ಫೈಬ್ರೊಮ್ಯಾಲ್ಗಿಯವನ್ನು ಸಮಯಕ್ಕೆ ಮತ್ತು ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಮೂಳೆ ಹಾನಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಕೂಡ ಬರಬಹುದು. ಇದರಂತೆ ಜೆಸ್ಸಿಗೆ ಅನೇಕ ದೈಹಿಕ ಸಮಸ್ಯೆಗಳಿವೆ. ಶಸ್ತ್ರಚಿಕಿತ್ಸೆಯೊಂದರಲ್ಲಿ ಆಕೆ ಒಂದು ಕಾಲನ್ನೂ ಕಳೆದುಕೊಂಡಿದ್ದಾಳೆ. ತಾನು ಬಿಟ್ಟ ಗಡ್ಡ ಮತ್ತು ಮೀಸೆಯಿಂದಾಗಿ ಅವಳು ಪ್ರತೀ ದಿನ, ಜನರಿಂದ ವಿಚಿತ್ರ ನೋಟಗಳನ್ನು ಎದುರಿಸುತ್ತಾಳಂತೆ. ಇದರೊಂದಿಗೆ ಅವಳಿಗೆ ಅನೇಕ ಜನರು ಕೀಟಲೆ ಮಾಡುತ್ತ ಟ್ರೋಲ್ ಮಾಡುತ್ತಾರೆ. ಕೌಟುಂಬಿಕ ಹಿಂಸೆಯನ್ನೂ ಎದುರಿಸಿದ್ದಾರೆ. ಆದರೆ ಅವಳು ಯಾವುದೇ ಸಮಸ್ಯೆಗೆ, ಟ್ರೋಲ್ಗಳಿಗೆ ಕುಗ್ಗದೇ ಜೀವನ ನಡೆಸುತ್ತಿದ್ದಾಳೆ ಈಗ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಬರೆಯುವ ಕನಸನ್ನು ಹೊತ್ತಿದ್ದಾಳೆ.
ಇನ್ನು ಈಕೆಯ ಸಾಂಸಾರಿಕ ಜೀವನದ ಬಗ್ಗೆ ಕೇಳಿದ್ರೆ ನಿಮಗೂ ಶಾಕ್ ಆಗಬಹುದು. ಡೈಲಿ ಸ್ಟಾರ್ ಪ್ರಕಾರ, ಜೆಸ್ಸಿಕಾ ಪ್ರಸ್ತುತ 5 ಜನರೊಂದಿಗೆ ಬಹುಸಂಬಂಧದಲ್ಲಿದ್ದಾರೆ. ಆಕೆ ಒಬ್ಬ ವ್ಯಕ್ತಿಯನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದರೂ, 5 ಜನರೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ಜೊತೆಯಲ್ಲಿ 71 ವರ್ಷದ ನಿವೃತ್ತ ಅಮೇರಿಕನ್ ಯೋಧ ಕೂಡ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಆಕೆ ಒಬ್ಬ ಹುಡುಗನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಗಡ್ಡಬಿಟ್ಟ ಹೆಂಗಸಿಗೆ ಸಖತ್ ಡಿಮ್ಯಾಂಡ್ ಇದೆ ಅಂತಲೇ ಹೇಳಬಹುದು.
ಜೆಸ್ಸಿಕಾ ಅವರ ಜೀವನವು ಅನೇಕ ಏರಿಳಿತಗಳನ್ನುಕಂಡಿದ್ದರೂ, ಅವರ ಜೀವನವು ಈಗ ಸುಧಾರಿಸುತ್ತಿದೆ ಎಂದು ಅವರು ಹೇಳುತ್ತಾರೆ. ತನ್ನ 5 ಜನ ಪ್ರೇಮಿಗಳೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಸಮಾಜದಲ್ಲಿ ಅದೆಂತಹ ಅವಮಾನವಾದರೂ ಕೂಡ ಜೆಸ್ಸಿಯವರು ಸಂತೋಷದಿಂದ ಬದುಕನ್ನು ನಡೆಸುತ್ತಾ ಇದ್ದಾರೆ. ಏನೇ ಆಗಲಿ, ಆಕೆಯ ಇಷ್ಟದಂತೆ ಅವಳು ಗಿನ್ನೆಸ್ ರೆಕಾರ್ಡ್ ಮಾಡಲಿ ಎಂದು ನಾವೆಲ್ಲರೂ ಶುಭಹಾರೈಸೋಣ.