ವಾಟ್ಸಪ್ ನಲ್ಲಿ ಈ ರೀತಿಯ ಕೆಲಸ ಮಾಡಿದ್ರೆ ನಿಮ್ಮ ಖಾತೆ ಆಗುತ್ತೆ ಬ್ಲಾಕ್!

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇವಾಗ ಅಂತೂ ಯಾವುದೇ ಸೋಶಿಯಲ್ ಮೀಡಿಯಾಕ್ಕೂ ಕಮ್ಮಿ ಇಲ್ಲ ಎಂಬಂತೆ ವಾಟ್ಸಪ್, ಬಳಕೆದಾರರ ಭದ್ರತೆಯ ಜೊತೆಗೆ ಉತ್ತಮ ಫೀಚರ್ ಗಳನ್ನು ಜಾರಿಗೊಳಿಸಿದೆ.

ಅದರಂತೆ ಸೋಶಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ದಿನದಿಂದ ದಿನಕ್ಕೆ ಬಳಕೆದಾರರರಿಗೆ ಹತ್ತಿರವಾಗುತ್ತಲೇ ಇದ್ದು, ಹೆಚ್ಚು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡುವವರ ಸಂಖ್ಯೆಯು ಅತಿಯಾಗಿದೆ. ಹೀಗಾಗಿ ವಾಟ್ಸಪ್ ಹಲವು ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಲೇ ಇದೆ.

ಹೀಗಾಗಿ ವಾಟ್ಸಪ್ ನಲ್ಲಿ ಯಾವುದೇ ಒಂದು ಕೆಲಸ ಮಾಡುವ ಮೊದಲು ವಾಟ್ಸಪ್ ನಿಯಮ ತಿಳಿದುಕೊಳ್ಳೋದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಖಾತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ, ಯಾವ ನಿಯಮಗಳನ್ನು ಉಲ್ಲಂಘಿಸಿದ್ದೀರಿ ಎಂಬುದರ ಮೇಲೆ ನಿಮ್ಮ ವಾಟ್ಸಪ್ ಖಾತೆ ಉಳಿಯುತ್ತದೋ ಇಲ್ಲವೋ ಎಂಬುದು ನಿರ್ಧರಿಸಲಾಗುತ್ತದೆ. ಹಾಗಿದ್ರೆ ಬನ್ನಿ ಯಾವ ಕೆಲಸವನ್ನು ಮಾಡಿದ್ರೆ ನಿಮ್ಮ ಖಾತೆ ಬ್ಲಾಕ್ ಆಗಬಹುದು ಎಂಬುದನ್ನು ತಿಳಿಯೋಣ.

ಇವಾಗ ಅಂತೂ ವಾಟ್ಸಪ್ ನಲ್ಲಿ ಮೆಸೇಜ್ ಮಾಡದ ಜನರಿಲ್ಲ. ಪ್ರತಿಯೊಂದು ವಿಷಯವು ವಾಟ್ಸಪ್ ಮೂಲಕವೇ ರವಾನೆಗೊಳ್ಳುತ್ತಿದೆ. ಸಂದೇಶವನ್ನು ಕಳುಹಿಸುವಾಗ ಒಂದೇ ಸಂದೇಶವನ್ನು ಹಲವಾರು ಜನರಿಗೆ ಕಳುಹಿಸುವುದನ್ನು ಕೂಡ ಸ್ಪ್ಯಾಮ್ ಎನ್ನಲಾಗುತ್ತದೆ. ಇದರಿಂದಾಗಿ ಸಹ ಬಳಕೆದಾರರು ಕೋಪಗೊಳ್ಳಬಹುದು. ಇದು ಕೂಡ ವಾಟ್ಸಪ್ಪ್ ನಿಯಮದ ಪ್ರಕಾರ ಅಪರಾಧವಾಗಿದೆ. ಹೀಗಾಗಿ ಇತ್ತೀಚೆಗೆ ವಾಟ್ಸಪ್ ಕೇವಲ 5 ಬಳಕೆದಾರರಿಗೆ ಏಕಕಾಲದಲ್ಲಿ ಸಂದೇಶವನ್ನು ಸ್ವೀಕರಿಸಲು ಅವಕಾಶ ಮಾಡಿಕೊಟ್ಟಿದೆ. ಇದು ಬಳಕೆದಾರರಿಗೆ ತೊಂದರೆಯಾಗದ ರೀತಿಯಲ್ಲಿ ಇತರರೊಂದಿಗೆ ಚಾಟ್ ನಡೆಸುವಂತೆ ನೀಡುವ ಸಲಹೆಯಾಗಿದೆ.

ವಾಟ್ಸಾಪ್ನಲ್ಲಿ ಚಲನಚಿತ್ರವನ್ನು ಹಂಚಿಕೊಳ್ಳಲಾಗುವುದಿಲ್ಲ. ಒಂದು ವೇಳೆ ಈ ತಪ್ಪು ನಡೆದರೆ, ಈ ಕಾಯಿದೆಗಾಗಿ ಕೆಲವು ಖಾತೆಗಳನ್ನು ಶಾಶ್ವತವಾಗಿ ನಿಷೇಧಿಸಬಹುದು. ವಾಟ್ಸಾಪ್ ನಲ್ಲಿ ನೀವು ಏನನ್ನು ಹಂಚಿಕೊಳ್ಳುತ್ತೀರೋ ಅದನ್ನು ಸ್ವಯಂಚಾಲಿತ ಹ್ಯಾಕ್ ಪತ್ತೆ ಮಾಡುವ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ ಕಾನೂನುಬಾಹಿರ ವಿಷಯವನ್ನು ಹಂಚಿಕೊಳ್ಳುತ್ತಿರುವಿರಿ ಎಂದು ಪತ್ತೆಯಾದರೆ ಆಗ ನಿಮ್ಮ ಖಾತೆ ಬ್ಲಾಕ್ ಆಗುತ್ತದೆ.

ಇವಾಗ ಅಂತೂ ವಾಟ್ಸಾಪ್ ನಲ್ಲಿ ಫೋಟೋಗಳು ಮತ್ತು ಸ್ಟಿಕ್ಕರ್ಗಳದ್ದೆ ಹಾವಳಿ. ಆದ್ರೆ, ಇನ್ಮುಂದೆ ಸ್ಟಿಕರ್ ಕಳುಹಿಸೋ ಮುನ್ನ ಎಚ್ಚರ. ಯಾಕಂದ್ರೆ, ಹಕ್ಕುಸ್ವಾಮ್ಯ ರಕ್ಷಣೆ ಇಲ್ಲದಿದ್ದರೆ ಚಿತ್ರವು ಸ್ವಯಂಚಾಲಿತವಾಗಿ ವಾಟ್ಸಪ್ಪ್ ಸಂದೇಶ ಕಳುಹಿಸುವಿಕೆಗೆ ಅರ್ಹತೆ ಪಡೆಯುವುದಿಲ್ಲ. ಕೆಲವು ಚಿತ್ರಗಳಿಗೆ ಕಂಪನಿಯ ನಿಯಮಗಳು ಅನ್ವಯಿಸುವುದಿಲ್ಲ. ಅನ್ಯದ್ವೇಷ ಜನಾಂಗೀಯ ಅಥವಾ ಲೈಂಗಿಕವಾಗಿ ಅಶ್ಲೀಲ ವಿಷಯದೊಂದಿಗೆ ಸಂಬಂಧ ಹೊಂದಿದ್ದರೆ, ಆ ಚಿತ್ರಗಳನ್ನು ಬಳಸುವುದರಿಂದ ಖಾತೆಯನ್ನು ಅಮಾನತುಗೊಳಿಸಬಹುದು.

ಕಂಪನಿಯ ಪ್ರಕಾರ ಬಳಕೆದಾರರು WhatsApp Plus, WhatsApp GP, ಅಥವಾ ಯಾವುದೇ ಇತರ ಸೇವೆಗಳನ್ನು ಬಳಸಬಾರದು. ಅಪ್ಲಿಕೇಶನ್ ನಿಮಗೆ ಎಷ್ಟು ಬಾರಿ ಸಮಸ್ಯೆಯ ಕುರಿತು ಸೂಚನೆ ನೀಡುತ್ತದೆ ಎಂಬುದರ ಆಧಾರದ ಮೇಲೆ ನೀವು ಡೌನ್ಲೋಡ್ ಮಾಡಿದ ನಂತರ ಮತ್ತು ಲಾಗ್ ಇನ್ ಮಾಡಿದ ನಂತರ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಅಮಾನತುಗೊಳಿಸುತ್ತದೆ.

ನೀವು ಯಾರಿಗಾದರೂ ಸೂಕ್ತವಲ್ಲದ ಮಾಹಿತಿಯನ್ನು ಕಳುಹಿಸಿದರೆ ಅಥವಾ ಕಾರಣವಿಲ್ಲದೆ ಅಪರಿಚಿತರೊಂದಿಗೆ ಚಾಟ್ ಮಾಡಿ ಕಿರಿಕಿರಿಗೊಳಿಸಿದರೆ ನಿಮ್ಮ ಅಕೌಂಟ್ ರಿಪೋರ್ಟ್ ಆಗಬಹುದು. ಖಾತೆಯನ್ನು ರಿಪೋರ್ಟ್ ಮಾಡಿದಾಗ ವಾಟ್ಸಾಪ್ ವಿಶ್ಲೇಷಣೆಗಾಗಿ ಬಳಕೆದಾರರ ಸಂಪರ್ಕ ಮಾಹಿತಿ ಮತ್ತು ಐದು ಇತ್ತೀಚಿನ ಸಂದೇಶಗಳಿಗೆ ಪ್ರವೇಶವನ್ನು ಪಡೆಯುತ್ತದೆ. ಖಾತೆಯು ಯಾವುದೇ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂಬುದನ್ನು ಪರಿಶೀಲಿಸುತ್ತದೆ. ಒಂದೇ ರೀತಿಯ ಉಲ್ಲಂಘನೆಗಳ ಹಲವು ರಿಪೋರ್ಟ್ ಆಗಿದ್ದರೆ ನಿಮ್ಮ ವಾಟ್ಸಪ್ಪ್ ಖಾತೆಯನ್ನು ನಿಷೇಧಿಸಬಹುದು. ಹೀಗಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ.

Leave A Reply

Your email address will not be published.