Scholarship : ವಿದ್ಯಾರ್ಥಿಗಳೇ ಗಮನಿಸಿ, ಫೆಬ್ರವರಿಯಲ್ಲಿ ಅಪ್ಲೈ ಮಾಡಬಹುದಾದ ವಿದ್ಯಾರ್ಥಿ ವೇತನದ ಸಂಪೂರ್ಣ ವಿವರ ಇಲ್ಲಿದೆ

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಹೆತ್ತವರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸ್ಕಾಲರ್​ಶಿಪ್ ಮೂಲಕ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ನಿರತರಾಗಿದ್ದಾರೆ. ಇನ್ನು ಫೆಬ್ರವರಿ ಹಾಗೂ ಮಾರ್ಚ್​ ಅವಧಿಯಲ್ಲಿ ಯಾವೆಲ್ಲಾ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.

ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ :

ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ, ಆರ್ಥಿಕ ಸಹಕಾರಿಯಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಈ ವಿದ್ಯಾರ್ಥಿ ವೇತನಕ್ಕೆ ನೀವು ಫೆಬ್ರವರಿಯಲ್ಲಿ ಅಪ್ಲೈ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2023 ಆಗಿದ್ದು, ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರ ಲಭ್ಯವಾಗುತ್ತದೆ. ಇನ್ನು ಈ ಸ್ಕಾಲರ್​ಶಿಪ್​ ಪಡೆಯಲು ಕೆಲವೊಂದು ಅರ್ಹತೆಗಳು ಇರಬೇಕು. ಯಾವುದೆಲ್ಲಾ ಎಂಬುದರ ವಿವರ ಇಲ್ಲಿದೆ.

ವಿದ್ಯಾರ್ಥಿ ವೇತನ ಪಡೆಯಲು ಯಾವೆಲ್ಲಾ ಅರ್ಹತೆಗಳಿರಬೇಕು ?

  • ಅರ್ಜಿದಾರರು ಪದವೀಧರರಾಗಿರಬೇಕು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ಅಥವಾ ಅವರಿಗೆ ಕ್ರೀಡಾ ತರಬೇತಿ ನೀಡುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರಬೇಕು.
  • ಕ್ರಿಡಾಪಟುಗಳಿಗೆ ಅರ್ಜಿದಾರರು ಕಳೆದ 2, 3 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು.
  • ಅಲ್ಲದೆ, ಅವರು ರಾಷ್ಟ್ರೀಯ ಶ್ರೇಯಾಂಕದಲ್ಲಿ 500 ರೊಳಗೆ ಸ್ಥಾನ ಪಡೆದಿರಬೇಕು. ಮತ್ತು ರಾಜ್ಯ ಶ್ರೇಯಾಂಕದಲ್ಲಿ 100 ರೊಳಗೆ ಸ್ಥಾನ ಪಡೆದಿರಬೇಕು.
  • 9 ರಿಂದ 20 ವರ್ಷ ವಯಸ್ಸಿನವರಾಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ INR 5 ಲಕ್ಷಗಳಿಗಿಂತ ಕಡಿಮೆಯಿರಬೇಕು. ಮೂರು ವರ್ಷಗಳ ವರೆಗೆ INR 75 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

JN ಟಾಟಾ ಎಂಡೋಮೆಂಟ್ ಲೋನ್​ ವಿದ್ಯಾರ್ಥಿವೇತನ 2023-24 :

ಜೆಎನ್ ಟಾಟಾ ಎಂಡೋಮೆಂಟ್ ವಿದೇಶದಲ್ಲಿ ಉನ್ನತ ಅಧ್ಯಯನವನ್ನು ಮುಂದುವರಿಸುವಂತಹ ಭಾರತೀಯ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಲೋನ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ವಿದೇಶಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಲಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಈ ಲೋನ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಿ, ಇದು ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಿ, ವಿದೇಶಕ್ಕೆ ತೆರಳಲು ಸಹಕಾರಿಯಾಗಿದೆ. ಇಲ್ಲಿ ಕೂಡ ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರವೇ ಲಭ್ಯ. ಆದರೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳು ಇರಬೇಕಿದೆ.

ಇರಬೇಕಾದ ಅರ್ಹತೆಗಳು :

  • ಕನಿಷ್ಠ ಒಂದು ಪದವಿಪೂರ್ವ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಭಾರತೀಯ ಪ್ರಜೆ ಅಥವಾ ಭಾರತದಲ್ಲಿನ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಯಾವುದೇ ಪದವಿಪೂರ್ವ ಕೋರ್ಸ್​​ನ ಕೊನೆ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರವೇ ಈ ವಿದ್ಯಾರ್ಥಿವೇತನ​ ಲಭಿಸುತ್ತದೆ.
  • ಅರ್ಜಿದಾರರು ವಿದೇಶದಲ್ಲಿ ಸ್ನಾತಕೋತ್ತರ / ಡಾಕ್ಟರೇಟ್ / ಪೋಸ್ಟ್‌ಡಾಕ್ಟರಲ್ ಅಧ್ಯಯನಗಳನ್ನು ಮುಂದುವರಿಸಲು ಸಿದ್ಧರಿರಬೇಕು. ಆಸಕ್ತ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ, ವಿದ್ಯಾರ್ಥಿವೇತನ ನಿಮ್ಮದಾಗಿಸಿ.
Leave A Reply

Your email address will not be published.