ಡ್ರಿಂಕ್ಸ್‌ ಗೂ ಮದುವೆಗೂ ಈ ದೇಶದಲ್ಲಿ ಸಂಬಂಧವಿದೆ !

ಎಣ್ಣೆನೂ ಸೋಡಾನು ಎಂತ ಒಳ್ಳೆ ಕಾಂಬಿನೇಶನ್ ಅನ್ನೋದು ಮದ್ಯ ಪ್ರಿಯರಿಗೆಲ್ಲ ಗೊತ್ತಿರುವಂತದ್ದೇ!! ಒಮ್ಮೆ ಪರಮಾತ್ಮ ಒಳಕ್ಕೆ ಸೇರಿದರೆ ಪ್ರಪಂಚದ ಆಗು ಹೋಗುಗಳ ಪರಿವೆ ಇರುವುದಿಲ್ಲ. ಏನೇ ಹೇಳಿ, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತುಂಬಿಸುವಲ್ಲಿ ಕುಡುಕರ ಪಾತ್ರ ಹೆಚ್ಚಿದೆ ಅನ್ನೋದಂತು ಸುಳ್ಳಲ್ಲ. ಆದ್ರೆ, ಕೆಲ ದೇಶಗಳಲ್ಲಿ ಮದ್ಯಸೇವನೆ ಮಾಡುವ ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಮತ್ತೆ ಕೆಲ ದೇಶಗಳಲ್ಲಿ ನೋ ಡ್ರಿಂಕ್ಸ್ ಅನ್ನೋ ಪಾಲಿಸಿ ಅನುಸರಿಸುತ್ತವೆ ಎನ್ನುವ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.


ಪ್ರತಿಯೊಂದು ದೇಶಗಳಲ್ಲಿಯೂ ಅವರದ್ದೇ ಆದ ನಿಯಮಗಳು, ಸಂಪ್ರದಾಯಗಳು ಇರೋದು ಸಹಜ. ಅದೇ ರೀತಿ, ಕೆಲ ದೇಶಗಳಲ್ಲಿ ಮದ್ಯಸೇವನೆಗೆ ಅವಕಾಶವಿಲ್ಲ. ಮತ್ತೆ ಕೆಲ ಕಡೆ ಮದ್ಯ ಸೇವನೆಗೆ ವಿಭಿನ್ನ ಅರ್ಥಗಳಿವೆ. ಹಾಗಿದ್ರೆ , ಈ ಥರ ರೂಲ್ಸ್ ಇರೋದಾದ್ರು ಎಲ್ಲಿ ಅನ್ನೋ ಕುತೂಹಲ ನಿಮ್ಮಲ್ಲಿ ಮೂಡಿದರೆ, ಇದರ ಇಂಟರೆಸ್ಟಿಂಗ್ ಕಹಾನಿ ನಾವು ಹೇಳ್ತೀವಿ.


ಜರ್ಮನಿಯಲ್ಲಿ ವಧು ಅಪಹರಣ (Kidnaping bride in Germany)

ಮದ್ಯ ಪ್ರಿಯರೇ, ನಿಮಗೆ ಏನಾದ್ರು ಇಂಥ ಆಫರ್ ಸಿಕ್ಕರೆ ಮಿಸ್ ಮಾಡ್ಕೋಬೇಡಿ!!! ಅಂತದ್ದೇನಿದೆ ಅಂತೀರಾ?? ಈ ದೇಶದಲ್ಲಿ ವರನ ಗೆಳೆಯ ವಧುವನ್ನು ಕಿಡ್ನಾಪ್ ಮಾಡಿಕೊಂಡು ಬಾರ್ ಗೆ ಕರ್ಕೊಂಡು ಬಂದು , ವರನ ಎಂಟ್ರಿಗೆ ಎದುರು ನೋಡುತ್ತಾನೆ. ವರ ಬಂದು ಎಲ್ಲರಿಗೂ ಡ್ರಿಂಕ್ಸ್ ಕೊಡಿಸಿದ ಬಳಿಕವಷ್ಟೇ ವಧುವನ್ನು ಬಾರ್ ನಿಂದ ಕರ್ಕೊಂಡು ಹೋಗೋಕೆ ಪರ್ಮಿಷನ್ ಸಿಗೋದು. ಅರೇ!!! ಯಾರಿಗುಂಟು ಯಾರಿಗಿಲ್ಲ ಅನ್ನೋ ಥರ ಈ ಆಫರ್ .

ರಷ್ಯಾ ಮತ್ತು ಪೋಲೆಂಡ್ ನಲ್ಲಿ ವೋಡ್ಕಾ (Vodka in Russia and Poland)

ರಷ್ಯಾ ಮತ್ತು ಪೋಲೆಂಡ್‌ನಲ್ಲಿ ಆಚರಣೆಯ ಅನುಸಾರ, ಇಲ್ಲಿ, ವೋಡ್ಕಾಗೆ ಜ್ಯೂಸ್ ಅಥವಾ ಮಿಕ್ಸರ್ ಸೇರಿಸುವುದು ಕೆಟ್ಟದ್ದೆಂದು ನಂಬಲಾಗಿದೆ. ಇದಲ್ಲದೆ, ಇಲ್ಲಿ ನೀಟ್ ಕುಡಿಯುವುದಕ್ಕೆ ಅವಕಾಶವಿದೆ.

ಚಿಯರ್ಸ್ ಹೇಳೋದು ನಿಷಿದ್ಧ (Saying cheers is banned)
ಮದ್ಯ ಪ್ರಿಯರಿಗೆ ಡ್ರಿಂಕ್ಸ್ ಮಾಡುವ ಮೊದಲು ಚಿಯರ್ಸ್ ಹೇಳುವ ಅಭ್ಯಾಸವಿರುತ್ತದೆ. ಹಾಗೆಂದು ನೀವೇನಾದರೂ, ಹಂಗೇರಿಯಲ್ಲಿ ಈ ರೀತಿ ಮಾಡಿದ್ರೆ ಫೈನ್ ಬೀಳೋದು ಗ್ಯಾರಂಟಿ. ಯಾಕೆ ಅಂತೀರಾ??? ಅಲ್ಲಿ ಮದ್ಯದ ಗ್ಲಾಸ್ ಹಿಡಿದು ಚಿಯರ್ಸ್ ಹೇಳೋದನ್ನು ನಿಷೇಧಿಸಲಾಗಿದೆ. 1849 ರಲ್ಲಿ, ಕೆಲವು ಹಂಗೇರಿಯನ್ ಕ್ರಾಂತಿಕಾರಿಗಳನ್ನು ಹತ್ಯೆ ಮಾಡಿದ ಘಟನೆಯ ಬಳಿಕ ಆಸ್ಟ್ರಿಯಾದ ಸೈನ್ಯವು ಡ್ರಿಂಕ್ಸ್ ಮಾಡುತ್ತಾ ಚಿಯರ್ಸ್ ಎಂದು ಹೇಳಿ ಸಂತೋಷವನ್ನು ವ್ಯಕ್ತಪಡಿಸಿತ್ತು. ಹೀಗಾಗಿ, ಅಂದಿನಿಂದ ಹಂಗೇರಿಯಲ್ಲಿ ಚಿಯರ್ಸ್ ಮಾಡುವುದನ್ನು ನಿಷೇಧಿಸಲಾಗಿದೆ.

ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಐ ಕಾಂಟಾಕ್ಟ್ (Eye contact in France and Germany)

ಸಾಮಾನ್ಯವಾಗಿ ಮಾತನಾಡುವಾಗ ಇಲ್ಲವೇ ಏನಾದರೂ ವಿಷಯವನ್ನು ಚರ್ಚಿಸುವಾಗ ಐ ಕಾಂಟ್ಯಾಕ್ಟ್ ಇಟ್ಟುಕೊಳ್ಳೋದು ಕಾಮನ್. ಆದ್ರೆ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ನೀವು ಚಿಯರ್ಸ್ ಹೇಳುವ ವೇಳೆ, ಐ ಕಾಂಟಾಕ್ಟ್ ಮಾಡದಿದ್ದರೆ ಇಲ್ಲವೇ ಐ ಕಾಂಟಾಕ್ಟ್ ಮುರಿದ್ದಲ್ಲಿ ಇದರಿಂದ ಬರೋಬ್ಬರಿ 7 ವರ್ಷಗಳವರೆಗೆ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಅಲ್ಲಿನ ಜನರಿಗಿದೆ. ಅಷ್ಟೆ ಅಲ್ಲದೇ, ಇದನ್ನು Seven Years Of Bad Sex ಎಂದು ಕೂಡ ಕರೆಯಲಾಗುತ್ತದೆ.

ನೈಜೀರಿಯಾದಲ್ಲಿ ವೈನ್ ಮದುವೆ (wine marriage in Nigeria)

ನೈಜೀರಿಯಾದಲ್ಲಿ ಮದುವೆಯ ವೇಳೆ, ಹೊಸ ವಧುವಿಗೆ ಅವಳ ತಂದೆ ಒಂದು ಕಪ್ ನಲ್ಲಿ ವೈನ್ ನೀಡುವ ಕ್ರಮವಿದ್ದು, ಆ ಬಳಿಕ ಹುಡುಗಿ ಆ ಲೋಟವನ್ನು ಮದುವೆಗೆ ಬಂದವರ ಮುಂದೆ ತನ್ನ ಗಂಡನಿಗೆ ನೀಡಬೇಕು. ಹೀಗೆ, ಹುಡುಗಿ ತನ್ನ ಲೋಟವನ್ನು ವರನಿಗೆ ನೀಡಿದರೆ ಅದನ್ನು ಮದುವೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಕೇಳಿದಾಗ , ಹೀಗೂ ಉಂಟೇ ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ.

ಸ್ಪರ್ಶಿಸದೆ ಶಾಟ್ ಕುಡಿಯೋದು (having shot without touching the glass)

ನೆದರ್ಲ್ಯಾಂಡ್‌ನಲ್ಲಿ ಕೋಪ್-ಸ್ಟೋ-ಚೆ ಎಂಬ ಪದ್ಧತಿಯನ್ನೂ ಅನುಸರಿಸಲಾಗುತ್ತದೆ. ಇದರಲ್ಲಿ ಬಾರ್ ಎಟೆಂಡರ್‌ಗಳು ಜಿನೀವರ್ ನ್ನು ಒಂದು ಲೋಟಕ್ಕೆ ಸುರಿಯುತ್ತಾರೆ. ಇನ್ನೊಂದೆಡೆ ಮತ್ತೊಂದು ಗ್ಲಾಸ್ ಗೆ ಬಿಯರ್ ಸುರಿಯುತ್ತಾರೆ. ಆದರೆ, ಡ್ರಿಂಕ್ಸ್ ಮಾಡುವವರು ಮೊದಲು ಕೈಗಳಿಂದ ಸ್ಪರ್ಶಿಸದೆ ಜಿನೀವರ್ ನ್ನು ಕುಡಿಯಬೇಕಾಗಿದ್ದು ಆ ಬಳಿಕ, ಬಿಯರ್ ಕುಡಿಯಬೇಕು ಎನ್ನುವ ಕ್ರಮವಿದೆ.

ವಧುವಿನ ಬೂಟುಗಳಲ್ಲಿ ಡ್ರಿಂಕ್ಸ್ ಮಾಡೋದು (Drinking alcohol in brides shoes)

ಭಾರತದಲ್ಲಿ ಯಾವುದಾದ್ರೂ ಫಂಕ್ಷನ್ ಇದ್ದಾಗ ಯಾರಾದ್ರೂ ಏನಾದ್ರು ಕದ್ದರೆ ಸೆರೆಮನೆ ವಾಸ ಫಿಕ್ಸ್ ಇಲ್ಲವೇ ಬೆನ್ನಿಗೆ ಬಾಸುಂಡೆ ಬರೋ ಹಾಗೇ ಬೆನ್ನಿಗೆ ಹಬ್ಬ ಆಗೋದು ಗ್ಯಾರಂಟಿ. ಆದ್ರೆ ಇಲ್ಲೊಂದು ಕಡೆ, ಉಕ್ರೇನ್‌ನಲ್ಲಿ ವಧುವಿನ ಶೂ ಕಳ್ಳತನವಾಗುತ್ತದೆ. ಆ ಬಳಿಕ ಮದುವೆಗೆ ಬರುವ ಅತಿಥಿಗಳು ಬೂಟುಗಳಲ್ಲಿ ಆಲ್ಕೋಹಾಲ್ ಕುಡಿಯಬೇಕು ಎನ್ನುವ ಕ್ರಮವಿದೆ. ನಮ್ಮಲ್ಲಿ ಹೀಗೆ ಮಾಡುವ ಕ್ರಮ ಇದ್ದಿದ್ದರೆ ಜನರು ಮದುವೆನೂ ಬೇಡ ಏನು ಬೇಡ ಅಂದುಕೊಂಡು ಸುಮ್ಮನಾಗ್ತಾ ಇದ್ರೆನೋ. ಮತ್ತೆ ಕೆಲವರು ನಂಗೂ ಇರಲಿ..ನನ್ನ ಮನೆಯವರಿಗೆ ಕೂಡ ಇರಲಿ ಅಂತ ಹೊಟ್ಟೆಗೆ ಇಳಿಸಿಕೊಂಡರು ಅಚ್ಚರಿಯಿಲ್ಲ. ಆದ್ರೆ ಆಸ್ಟ್ರೇಲಿಯಾದಲ್ಲಿ, ಸಂತೋಷದ ಸಂದರ್ಭಗಳಲ್ಲಿ ಬೂಟುಗಳಲ್ಲಿ ಆಲ್ಕೋಹಾಲ್ ಕುಡಿಯುವ ಸಂಪ್ರದಾಯವಿದೆ.

Leave A Reply

Your email address will not be published.