ಭಾರತೀಯ ವಾಯುಪಡೆ ನೇಮಕಾತಿ 2023 | ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ನೇರ ನೇಮಕಾತಿ

ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದ್ದು, ಹಲವು ಹುದ್ದೆಗಳ ನೇರ ನೇಮಕಾತಿ ರ್ಯಾಲಿಯನ್ನು ಅಯೋಜಿಸಲಾಗಿದ್ದು ಅರ್ಹ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಭಾರತೀಯ ಮತ್ತು ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳಿಂದ ಭಾರತೀಯ ವಾಯುಪಡೆಯ ವೈ (ತಾಂತ್ರಿಕೇತರ) ಗುಂಪಿನಲ್ಲಿ ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ (ಫಾರ್ಮಸಿ) ಗುಂಪಿನಲ್ಲಿ ಏರ್ಮ್ಯಾನ್ ಹುದ್ದೆಗಳ ನೇಮಕಾತಿ ನಡೆಯಲಿದೆ.

ನೇರ ನೇಮಕಾತಿ ದಿನಾಂಕ :
ಫೆಬ್ರವರಿ 4 ಮತ್ತು 7 ರಂದು ಚೆನ್ನೆ ಏರ್ ಫೋರ್ಸ್ ಸ್ಟೇಷನ್ ತಾಂಬರನಲ್ಲಿ ನೇರ ನೇಮಕಾತಿ ರ್ಯಾಲಿ ನಡೆಯಲಿದೆ.

ಅರ್ಹತೆ :
ವೈದ್ಯಕೀಯ ಸಹಾಯಕ ಹುದ್ದೆಗೆ ಅಭ್ಯರ್ಥಿಯು ಅವಿವಾಹಿತರಾಗಿರಬೇಕು ಮತ್ತು 27 ಜೂನ್ 2002 ಮತ್ತು 27 ಜೂನ್ 2006ರ ನಡುವೆ ಜನಿಸಿದವರಾಗಿರಬೇಕು. ಹಾಗೂ ಅವಿವಾಹಿತ ಅಭ್ಯರ್ಥಿಯು 27 ಜೂನ್ 1999 ಮತ್ತು 27 ಜೂನ್ 2004 ರ ನಡುವೆ ಮತ್ತು ವಿವಾಹಿತ ಅಭ್ಯರ್ಥಿಯು 27 ಜೂನ್ 1999 ಮತ್ತು 27 ಜೂನ್ 2002 ರ ನಡುವೆ ಜನಿಸಿರಬೇಕು.

ವಿದ್ಯಾರ್ಹತೆ :
ವೈದ್ಯಕೀಯ ಸಹಾಯಕ (ಫಾರ್ಮಸಿ) ಹುದ್ದೆಗೆ ಫಾರ್ಮಸಿಯಲ್ಲಿ ಡಿಪ್ಲೋಮಾ ಅಥವಾ ಬಿ.ಎಸ್ಸಿ ಪದವೀಧರರಾಗಿರಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ :
ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಉಡುಪಿ ಮೊ.ನಂ: 9945856670, 8197440155

ಅಧಿಕೃತ ವೆಬ್ ಸೈಟ್ : www.airmenselection.cdac.in

Leave A Reply

Your email address will not be published.