1000 ಮಂದಿಗೆ ದೃಷ್ಟಿ ನೀಡಿದ ಯೂಟ್ಯೂಬರ್! ಈತನೇ ಮಿ.ಬೀಸ್ಟ್!!!

ಜಗತ್ತಿನಲ್ಲಿ ಹಲವು ಸಮಸ್ಯೆ ಇರುವ ಅಂಗವಿಕಲರು ಆರ್ಥಿಕ ಸಮಸ್ಯೆ ಇರುವ ಕಾರಣ ಅಂಗವಿಕಲರಾಗಿಯೇ ಉಳಿದಿದ್ದಾರೆ. ಅಂಗವಿಕಲರಿಗೆ ಸಹಾಯ ಮಾಡುವ ಮನಸ್ಸು ಕೇವಲ ಬೆರಳೆಣಿಕೆಯ ಜನರಿಗೆ ಮಾತ್ರ ಇರುತ್ತದೆ. ಆದರೆ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಮನಸ್ಸು ಇದ್ದರೆ ಪ್ರಪಂಚದಲ್ಲಿ ಅಂಗವಿಕಲರು ಇರಲು ಅವಕಾಶ ಇರುವುದಿಲ್ಲ. ಹಾಗೆಯೇ ಇಲ್ಲೊಬ್ಬ ಯೂಟ್ಯೂಬ್ ಸಬ್ಸಕ್ರೈಬರ್ಸ್ ಜಗತ್ತೇ ಮೆಚ್ಚುವ ಸಹಾಯ ಮಾಡಿರುವ ಸುದ್ದಿ ವೈರಲ್ ಆಗಿದೆ.

ಹೌದು ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ಸಬ್ಸಕ್ರೈಬರ್ಸ್ ಹೊಂದಿವರಲ್ಲಿ ಒಬ್ಬರಾಗಿರುವ ʼಮಿಸ್ಟರ್‌ ಬೀಸ್ಟ್‌ʼ‌ ಅಂದರೆ ಜಿಮ್ಮಿ ಡೊನಾಲ್ಡ್ಸನ್ 130 ಮಿಲಿಯನ್‌ ಸಬ್ಸಕ್ರೈಬರ್ಸ್ ಹೊಂದಿರುವ ಈ ವಿಡಿಯೋಗಳು ಕೋಟಿ ಗಟ್ಟಲೆ ಸಂಪಾದನೆ ಮಾಡುತ್ತದೆ. ಈತ ಒಂದಲ್ಲ ಒಂದು ವಿಭಿನ್ನ ಮಾದರಿ ವಿಚಾರ ಗಳನ್ನು ಆಪ್ಲೋಡ್‌ ಮಾಡುವ ಮೂಲಕ ಮಿ.ಬೀಸ್ಟ್‌ ಇದೀಗ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾನೆ.

ಹೌದು ಅಂಧತ್ವದ ಸಮಸ್ಯೆಯಿಂದ ಬಳಲುತ್ತಿದ್ದ ಜಮೈಕಾ, ಹೊಂಡುರಾಸ್, ನಮೀಬಿಯಾ, ಮೆಕ್ಸಿಕೋ, ಇಂಡೋನೇಷ್ಯಾ, ಬ್ರೆಜಿಲ್, ವಿಯೆಟ್ನಾಂ ಮತ್ತು ಕೀನ್ಯಾ ಮುಂತಾದ ಕಡೆಯ 1000 ಜನರಿಗೆ ಮೊದಲ ಬಾರಿಗೆ ದೃಷ್ಟಿ ಕಾಣುವಂತೆ ಮಾಡಿದ್ದಾರೆ ಈ ಜಿಮ್ಮಿ ಡೊನಾಲ್ಡ್ಸನ್.‌

ಜಿಮ್ಮಿ ಡೊನಾಲ್ಡ್ಸನ್ ಅವರ ತಂಡ ಯಾರಿಗೆ ತನ್ನ ಕಣ್ಣಿನ ದೃಷ್ಟಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲದ ಸ್ಥಿತಿ ಇರುತ್ತದೋ ಅಂಥವರನ್ನು ಗುರುತಿಸಿ ಅದರಂತೆ ಸುಮಾರು 1000 ಮಂದಿಯ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಹಾಗೂ ಭಾಗಶಃ ಅಂಧತ್ವವುಳ್ಳವರಿಗೆ ದೃಷ್ಟಿಯನ್ನು ನೀಡಲು ಮುಂದಾಗುತ್ತಾರೆ. ಅಲ್ಲದೆ ಅಷ್ಟು ಮಂದಿಯ ಚಿಕಿತ್ಸೆ ವೆಚ್ಚದ ಹಣವನ್ನು ಪಾವತಿಸಿದ್ದಾರೆ. ಜೊತೆಗೆ ದೃಷ್ಟಿ ಪಡೆದ ಕೆಲವರಿಗೆ ಮಿಸ್ಟರ್‌ ಮೀಸ್ಟ್‌ ಉಡುಗೊರೆಯನ್ನು ನೀಡಿ ಸಂತಸ ಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಮಿ.ಬೀಸ್ಟ್‌ ಚಿಕಿತ್ಸೆ ಪಡೆದವರ ಮೊದಲ ಅನುಭವ, ಮೊದಲ ಬಾರಿ ಬೆಳಕನ್ನು ನೋಡುವ ಕ್ಷಣವನ್ನು ವಿಡಿಯೋದಲ್ಲಿ ಚಿತ್ರೀಕರಿಸಿದ್ದು, ಎರಡೇ ದಿನದಲ್ಲಿ 57 ಮಿಲಿಯನ್‌ ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು ಜನರ ಮೆಚ್ಚುಗೆ ಪಡೆದಿದೆ.

ಮನುಷ್ಯರು ಒಬ್ಬರಿಗೊಬ್ಬರು ಕೂಡಿ ಬಾಳುವ ಗುಣ ಹೊಂದಿರುವ ಕಾರಣ ನಮ್ಮ ಸಂಪಾದನೆ ಕೇವಲ ನಮ್ಮ ಸ್ವಾರ್ಥಗಳಿಗೆ ಉಪಯೋಗಿಸದೆ ಸ್ವಲ್ಪ ಭಾಗವನ್ನು ಈ ರೀತಿ ಬಳಸುವ ಮೂಲಕ ಇಡೀ ಜಗತ್ತಿಗೆ ಮಾದರಿ ಆಗಬಹುದು.

Leave A Reply

Your email address will not be published.