ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ರಿಲೀಫ್ ಸುದ್ದಿ | ಇನ್ಮುಂದೆ ತೊಂದರೆ ಆದ್ರೆ ನಿಮಗಾಗಿ ಸಹಾಯ ಮಾಡಲಿದೆ ಈ ಸಮಿತಿ!
ಸೋಶಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ದಿನದಿಂದ ದಿನಕ್ಕೆ ಬಳಕೆದಾರರರಿಗೆ ಹತ್ತಿರವಾಗುತ್ತಲೇ ಇದ್ದು, ಹೆಚ್ಚು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡುವವರ ಸಂಖ್ಯೆಯು ಅತಿಯಾಗಿದೆ.
ಇದರಿಂದಾಗಿ ಅದೆಷ್ಟೋ ಮಂದಿ ಸೋಶಿಯಲ್ ಮೀಡಿಯಾದ ದುರ್ಬಳಕೆ ಮಾಡುವವರಿಂದ ವಂಚನೆಗೆ ಒಳಗಾಗಿ ತೊಂದರೆ ಅನುಭವಿಸಿದ್ದಾರೆ. ಆದ್ರೆ, ಯಾರಿಗೆ ದೂರು ನೀಡುವುದು ಎಂಬ ಗೊಂದಲದಲ್ಲಿದೆಯೇ ಬೇಸತ್ತು ಹೋಗಿದ್ದಾರೆ. ಇಂತಹ ಎಲ್ಲಾ ತೊಂದರೆಗಳಿಗೆ ಕಡಿವಾಣ ಹಾಕಲೆಂದೆ ಬರುತ್ತಿದೆ ಹೊಸ ಸಮಿತಿ.
ಹೌದು. ಬ್ಯಾಂಕುಗಳ ವಿರುದ್ಧ ಗ್ರಾಹಕರ ದೂರಗಳ ಇತ್ಯರ್ಥಕ್ಕೆ ಇರುವ ಒಬುಡ್ಸಮನ್ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣಗಳ ಕಂಪನಿಗಳ ವಿರುದ್ಧ ದೂರು ವಿಚಾರಣೆಗೆ ಸಮಿತಿ ರಚನೆಯಾಗಿದೆ. ಗ್ರೀವಿಯೆನ್ಸ್ ಅಪೆಲೆಟ್ ಕಮಿಟಿ(GAC) ಹೆಸರಲ್ಲಿ ಮೂರು ವಿಶೇಷ ಸಮಿತಿಗಳನ್ನು ರಚಿಸಲಾಗಿದ್ದು, ಮಾರ್ಚ್ 1 ರಿಂದ ಈ ಸಮಿತಿ ಕಾರ್ ಆರಂಭಿಸಲಿವೆ.
ಗ್ರಾಹಕರು ಇಷ್ಟು ದಿನ ಸೋಶಿಯಲ್ ಮೀಡಿಯಾಗಳಿಂದ ತೊಂದರೆ ಅನುಭವಿಸಿ, ಸಂಬಂಧಿತ ಜಾಲತಾಣ ಕಂಪನಿಗೆ ಆನ್ಲೈನ್ ಮೂಲಕ ದೂರ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.
ಈ ಸಮಿತಿಗಳು ಮೇಲ್ಮನವಿ ಪ್ರಾಧಿಕಾರಗಳ ರೀತಿಯಲ್ಲಿ ಕೆಲಸ ಮಾಡಲಿದ್ದು, 30 ದಿನದೊಳಗೆ ಗ್ರಾಹಕರ ದೂರನ್ನು ಸಮಿತಿ ಇತ್ಯರ್ಥಪಡಿಸುತ್ತದೆ. ಆನ್ಲೈನ್ ಕಂಪನಿಗಳಿಂದ ದೊರೆತ ಪ್ರತಿಕ್ರಿಯೆಯಿಂದ ತೃಪ್ತರಾಗದ ಗ್ರಾಹಕರು ಈ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು. www.gac.gov.in ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ದೂರು ಸಲ್ಲಿಸಬಹುದು.